Sunday, 23rd June 2024

ಉದ್ಧವ್ , ನಿಮ್ಮೊಳಗೆ ಇದ್ದದ್ದು ಹುಲಿಯಲ್ಲ, ಕಳ್ಳಬೆಕ್ಕು!

ಬೇಟೆ

ಬಾಳ್ ಠಾಕ್ರೆೆ ತಮ್ಮ ಮಗ ಮತ್ತು ಮೊಮ್ಮಗನಿಂದ ಇಂಥ ದೊಡ್ಡ ಮೋಸ, ದ್ರೋಹವನ್ನು ನಿರೀಕ್ಷಿಸಿರಲಿಕ್ಕಿಿಲ್ಲ. ಸ್ವರ್ಗದಲ್ಲಿರುವ ಅವರ ಆತ್ಮ ಅದೆಷ್ಟು ಜೋರಾಗಿ ಚೀರಿರಬಹುದು? ಸ್ವಲ್ಪವಾದರೂ ಮಾನ, ಮರ್ಯಾದೆ ಬೇಡವಾ? ಅಧಿಕಾರ ಎಲ್ಲರಿಗೂ ಬೇಕು. ಆದರೆ ಅದಕ್ಕಾಾಗಿ ನಮ್ಮನ್ನೇ ಮಾರಿಕೊಳ್ಳಬೇಕಾ?

ನನಗೊಂದು ಆಸೆ ಇದೆ. ಅದೇನೆಂದರೆ ಕನಿಷ್ಠ ಯಾವುದಾದರೂ ಒಂದು ರಾಜ್ಯದಲ್ಲಾದರೂ ಬಿಜೆಪಿ ಮತ್ತು ಕಾಂಗ್ರೆೆಸ್ ಸೇರಿ ಸರಕಾರ ರಚಿಸಬೇಕು. ಅದನ್ನು ನನ್ನ ಜೀವಿತ ಅವಧಿಯಲ್ಲಿ ಒಮ್ಮೆೆ ನೋಡಬೇಕು.
ಇದು ಸಾಧ್ಯವಾ? ಇಂಪಾಸಿಬಲ್ ತಾನೇ? ಆದರೆ ಒಂದು ಕಾಲ ಬರುತ್ತದೆ, ಆ ಎರಡೂ ಪಕ್ಷಗಳು ಸೇರಿ ಸರಕಾರ ರಚಿಸುತ್ತವೆ, ಬೇಕಾದರೆ ನೋಡುತ್ತಿಿರಿ. ಅಲ್ಲಿಗೆ ಭಾರತ ರಾಜಕಾರಣದಲ್ಲಿ ಒಂದು ಸರ್ಕಲ್ ಪೂರ್ತಿ ಆದಂತಾಗುತ್ತದೆ.

ಆ ದಿನ ಬಹಳ ದೂರವಿಲ್ಲ. ಬಿಜೆಪಿ – ಕಾಂಗ್ರೆೆಸ್ ಮೈತ್ರಿಿಕೂಟದ ಸರಕಾರ ರಚನೆಯಾದರೆ, ಎರಡೂ ಪಕ್ಷಗಳ ವಕ್ತಾಾರರು ಮಾಧ್ಯಮಗಳ ಮುಂದೆ ಬಂದು, ‘ಮತದಾರರು ನೀಡಿದ ಜನಾದೇಶಕ್ಕೆೆ ತಲೆಬಾಗುತ್ತೇವೆ. ನಮ್ಮ ಮುಂದೆ ಬೇರೆ ಮಾರ್ಗಗಳಿರಲಿಲ್ಲ. ಇನ್ನೊೊಂದು ಚುನಾವಣೆಯನ್ನು ತಪ್ಪಿಿಸಲು ಮತ್ತು ಜನರಿಗೆ ಉತ್ತಮ ಸರಕಾರ ನೀಡಲು ನಮ್ಮ ನಮ್ಮ ನಡುವೆ ಇರುವ ಭಿನ್ನಾಾಭಿಪ್ರಾಾಯ ಹಾಗೂ ಸೈದ್ಧಾಾಂತಿಕ ವೈರುದ್ಧ ್ಯಗಳನ್ನು ಬದಿಗೊತ್ತಿಿ ಒಂದಾಗಿದ್ದೇವೆ. ಕನಿಷ್ಠ ಸಾಮಾನ್ಯಕಾರ್ಯಕ್ರಮಗಳ ಮೂಲಕ ರಾಜ್ಯದ ಜನತೆಗೆ ಒಳ್ಳೆೆಯ ಸರಕಾರ ನೀಡುತ್ತೇವೆಂದು ಭರವಸೆ ಕೊಡುತ್ತೇವೆ’ ಎಂದು ಹೇಳಿದರೆ, ಜನರಾದರೂ ಏನು ಮಾಡಿಯಾರು?

ಇಂಥದ್ದೊಂದು ಘಟನೆ ನಡೆಯಲಿಕ್ಕಿಿಲ್ಲ ಎಂದು ಭಾವಿಸಬೇಡಿ. ಅಷ್ಟರಮಟ್ಟಿಿಗಾದರೂ ಭಾರತದ ರಾಜಕಾರಣ ಇನ್ನೂ ಶುದ್ಧವಾಗಿದೆ ಎಂದು ಭಾವಿಸಬಹುದು. ಕಾರಣ ಇಲ್ಲಿಯವರೆಗೆ ಬಿಜೆಪಿ – ಕಾಂಗ್ರೆೆಸ್ ಸೇರಿ ಸರಕಾರ ರಚಿಸಿಲ್ಲ. ಬೇರೆ ಪಕ್ಷಗಳಿಗೆ ಪಾಠ ಕಲಿಸಲು ಆ ಎರಡೂ ಪಕ್ಷಗಳು ಒಂದಾದರೂ ಅಚ್ಚರಿಪಡಬೇಕಿಲ್ಲ. ಆಗ ಇದೇ ಪಕ್ಷಗಳ ನಾಯಕರು, ‘ರಾಜಕಾರಣದಲ್ಲಿ ಏನು ಬೇಕಾದರೂ ಘಟಿಸಬಹುದು, ರಾಜಕಾರಣದಲ್ಲಿ ಶಾಶ್ವತ ಮಿತ್ರರೂ ಇಲ್ಲ, ವೈರಿಗಳೂ ಇಲ್ಲ. ಕಾಲಕಾಲಕ್ಕೆೆ ತಕ್ಕಂತೆ ನಮ್ಮ ನಿಲುವು, ಸಿದ್ಧಾಾಂತ, ತತ್ತ್ವಗಳನ್ನೂ ಬದಲಿಸಿಕೊಳ್ಳುವುದು ಅನಿವಾರ್ಯ. ಜನರಿಗೆ ಉತ್ತಮ ಆಡಳಿತ ನೀಡಲು ಕೆಲವೊಮ್ಮೆೆ ವೈಯಕ್ತಿಿಕ ಹಿತಾಸಕ್ತಿಿಗಳನ್ನು ಮರೆತು, ಒಂದಾಗಬೇಕಾಗುತ್ತದೆ. ನಾವೂ ಈಗ ಒಂದಾಗಿದ್ದೇವೆ’ ಎಂದು ಹೇಳಿದರೆ ಜನರಿಗೆ ಬೇರೆ ಆಯ್ಕೆೆಗಳೇನಿವೆ?!

ಆಗ ಬಿಜೆಪಿ – ಕಾಂಗ್ರೆೆಸ್ ಮೈತ್ರಿಿ ಸರಕಾರವನ್ನು ಜನ ದೂಸರಾ ಮಾತಾಡದೇ ಒಪ್ಪಿಿಕೊಳ್ಳಲೇ ಬೇಕಾಗುತ್ತದೆ. ಆ ದಿನಗಳು ಬಹಳ ದೂರವೇನಿಲ್ಲ. ಹಾಗೆ ನೋಡಿದರೆ, ಕೆಲವೊಂದು ವಿಷಯಗಳನ್ನು ಬಿಟ್ಟರೆ ಬಿಜೆಪಿ – ಕಾಂಗ್ರೆೆಸ್‌ಗೆ ಹೇಳಿಕೊಳ್ಳುವಂಥ ವ್ಯತ್ಯಾಾಸಗಳೇನಿಲ್ಲ. ಎರಡೂ ಪಕ್ಷಗಳೂ ಪರಸ್ಪರ ನಾಯಕರನ್ನು ವಿನಿಮಯ ಮಾಡಿಕೊಂಡಿವೆ. ಒಂದು ಕಾಲದಲ್ಲಿ ಕಾಂಗ್ರೆೆಸ್ಸಿಿನಲ್ಲಿದ್ದವರು ಇಂದು ಬಿಜೆಪಿಯಲ್ಲಿದ್ದಾರೆ. ಬಿಜೆಪಿಯ ನಾಯಕರು ಕಾಂಗ್ರೆೆಸ್‌ನಲ್ಲಿದ್ದಾರೆ. ಎರಡೂ ಪಕ್ಷಗಳಿಗೆ ಹೆಚ್ಚಿಿನ ವ್ಯತ್ಯಾಾಸವೇನಿಲ್ಲ. ಎರಡೂ ಪಕ್ಷಗಳ ಸಿದ್ಧಾಾಂತ ಎಷ್ಟೇ ಭಿನ್ನವಾಗಿರಲಿ, ಅವನ್ನು ಆಚರಣೆಗೆ ತರುವವರು ರಾಜಕಾರಣಿಗಳೇ ತಾನೇ? ಅವರು ತಮ್ಮ ತಮ್ಮ ಹಿತಾಸಕ್ತಿಿ ಕಾಯಲು ಯಾವ ಹಂತಕ್ಕಾಾದರೂ ಹೋಗಬಹುದು. ಆಗ ಅವರು ಎಂಥ ಸಿದ್ಧಾಾಂತಕ್ಕಾಾದರೂ ತಿಲಾಂಜಲಿ ಇಡಬಲ್ಲರು. ಅಧಿಕಾರವೇ ಮುಖ್ಯವಾದಾಗ, ತತ್ತ್ವ, ಸಿದ್ಧಾಾಂತ, ಭೂಮಿಕೆಗಳೆಲ್ಲ ಗೌಣವಾಗುತ್ತದೆ. ಹೀಗಾಗಿ ಬಿಜೆಪಿ-ಕಾಂಗ್ರೆೆಸ್ ಸರಕಾರ ರಚನೆಯಾಗುವುದು ಅಸಾಧ್ಯವೇನಲ್ಲ ಎಂದೆನಿಸುತ್ತದೆ. ಆಗ ರಾಜಕಾರದಲ್ಲಿ ಏನು ಬೇಕಾದರೂ ಸಾಧ್ಯ ಎಂಬ ಮಾತು ಇನ್ನಷ್ಟು ಹೊಳಪು ಪಡೆದುಕೊಳ್ಳುತ್ತದೆ, ಅದಕ್ಕೊೊಂದು ವಿಶೇಷ ಅರ್ಥ ಬರುತ್ತದೆ. ನಾನು ಆ ದಿನಗಳನ್ನು ಎದುರು ನೋಡುತ್ತಿಿದ್ದೇನೆ. ನಮ್ಮ ರಾಜಕಾರಣಿಗಳು ನನ್ನಂಥ ಕೋಟ್ಯಂತರ ಜನರಲ್ಲಿ ಬೇಸರ ಮೂಡಿಸುವುದಿಲ್ಲ ಎಂಬ ಭರವಸೆಯೂ ಇದೆ.

ಈ ಮಾತನ್ನು ಯಾಕೆ ಹೇಳುತ್ತಿಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಮಹಾರಾಷ್ಟ್ರದಲ್ಲಿ ನಡೆಯುತ್ತಿಿರುವ ವಿದ್ಯಮಾನಗಳನ್ನು ಗಮನಿಸಿದರೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಮತ್ತೊೊಮ್ಮೆೆ ದಿಟ ಮಾಡಿದೆ. ಈ ಜನ್ಮದಲ್ಲಿ ಶಿವಸೇನೆ ಮತ್ತು ಕಾಂಗ್ರೆೆಸ್ ಒಂದಾಗಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಶಿವಸೇನೆ ಬಿಜೆಪಿಗಿಂತ ಉಗ್ರವಾಗಿ, ಕಟುವಾಗಿ ಕಾಂಗ್ರೆೆಸ್ಸನ್ನು ಟೀಕಿಸುತ್ತಿಿತ್ತು. ಬಿಜೆಪಿ ಒಂದು ಸಂಯಮ ಇಟ್ಟುಕೊಂಡು ಕಾಂಗ್ರೆೆಸ್ಸನ್ನು ಟೀಕಿಸಿದರೆ, ಶಿವಸೇನೆ ಮಾತ್ರ ಅತ್ಯುಗ್ರ ಪದಗಳಲ್ಲಿ ಕಾಂಗ್ರೆೆಸ್ಸನ್ನು ಟೀಕಿಸುತ್ತಿಿತ್ತು. ಶಿವಸೇನೆ ಸಂಸ್ಥಾಾಪಕ ಬಾಳ್ ಠಾಕ್ರೆೆ ಅವರಂತೂ ಕಾಂಗ್ರೆೆಸ್ಸನ್ನು ಅತಿ ಕೆಟ್ಟ ಪದಗಳಲ್ಲಿ, ಹೀನಾಯವಾಗಿ ಟೀಕಿಸುತ್ತಿಿದ್ದರು. ಕಾಂಗ್ರೆೆಸ್ ವಿರೋಧದಲ್ಲೇ ಶಿವಸೇನೆಯ ಅಸ್ತಿಿತ್ವವಿತ್ತು.

‘ಈ ದೇಶವನ್ನು ಕೊಳ್ಳೆೆ ಹೊಡೆದಿದ್ದೇ ಕಾಂಗ್ರೆೆಸ್. ನೆಹರು ಮತ್ತು ಇಂದಿರಾ ಈ ದೇಶವನ್ನು ನೈತಿಕವಾಗಿ ಅಧೋಗತಿಗೆ ತಳ್ಳಿಿದವರು. ಕಾಂಗ್ರೆೆಸ್ ಇರುವ ತನಕ ಈ ದೇಶ ಉದ್ಧಾಾರವಾಗುವುದಿಲ್ಲ. ಮುಸಲ್ಮಾಾನರ ಓಲೈಕೆ ಮಾಡಿದ್ದೇ ಈ ದೇಶ ಇಂದು ಈ ಸ್ಥಿಿತಿಗೆ ಇಳಿದಿರುವುದಕ್ಕೆೆ ಕಾರಣ. ನೆಹರು ನೈತಿಕವಾಗಿ ಭ್ರಷ್ಟರಾಗಿದ್ದರು. ಅವರ ಮಗಳಾದ ಇಂದಿರಾ ತಂದೆಯನ್ನೂ ಮೀರಿಸಿದಳು. ಅವಳ ಮಗ ರಾಜೀವ್ ತನ್ನ ತಾತ ಮತ್ತು ತಾಯಿಯ ಸಂಪ್ರದಾಯವನ್ನು ಮುಂದುವರಿಸಿದ. ಕಾಂಗ್ರೆೆಸ್ ಅಧಿಕಾರದಲ್ಲಿ ಮುಂದುವರಿದಿದ್ದೇ ಆದಲ್ಲಿ ಈ ದೇಶ ಸರ್ವನಾಶವಾಗುತ್ತದೆ’ ಎಂದು ಬಾಳ್ ಠಾಕ್ರೆೆ ಮುಂಬೈ ಶಿವಾಜಿ ಪಾರ್ಕಿನಲ್ಲಿ ಭಾಷಣ ಮಾಡುತ್ತಿಿದ್ದರೆ, ಲಕ್ಷಾಂತರ ಶಿವಸೈನಿಕರ ಜಯಘೋಷ ಮುಗಿಲು ಮುಟ್ಟಿಿತ್ತು. ಠಾಕ್ರೆೆಗೆ ಏಕ ಮಾತ್ರ ಪರಮ ಶತ್ರುವೆಂದರೆ ಕಾಂಗ್ರೆೆಸ್. ಹಿಂದುತ್ವದ ಸಿದ್ಧಾಾಂತದಲ್ಲಿ ಅವರು ಶಿವಸೇನೆಯನ್ನು ಕಟ್ಟಿಿದರು. ‘ನನ್ನ ಮೈಯಲ್ಲಿ ಹರಿಯುವುದು ಹಿಂದೂ ರಕ್ತ, ಅದು ಕಾಂಗ್ರೆೆಸ್ ವಿರೋಧಿ ರಕ್ತ, ಅದು ನೆಹರು-ಇಂದಿರಾ ಕುಟುಂಬವನ್ನು ದ್ವೇಷಿಸುವ ರಕ್ತ. ನನ್ನ ಉಸಿರಿರುವ ತನಕ ಈ ರಕ್ತ ಕೆಂಪಾಗಿಯೇ ಇರುತ್ತದೆ. ನನ್ನ ರಕ್ತವಾಗಲಿ, ಅದರ ಬಣ್ಣವಾಗಲಿ ಬದಲಾಗುವುದಿಲ್ಲ’ ಎಂದು ಠಾಕ್ರೆೆ ತಮ್ಮ ಮುಖವಾಣಿ ‘ಸಾಮ್ನಾಾ’ ಪತ್ರಿಿಕೆಯಲ್ಲಿ ಮುಖಪುಟ ಸಂಪಾದಕೀಯ ಬರೆದಿದ್ದರು.

‘ನಾನು ಬ್ರಿಿಟಿಷರನ್ನಾಾದರೂ ಒಪ್ಪಿಿಕೊಳ್ಳುತ್ತೇನೆ, ಆದರೆ ಕಾಂಗ್ರೆೆಸ್ಸನ್ನು ಒಪ್ಪುುವ ಪ್ರಶ್ನೆೆಯೇ ಇಲ್ಲ. ಒಂದು ವೇಳೆ ಬ್ರಿಿಟಿಷರು ಭಾರತಕ್ಕೆೆ ಮರಳಿ ಬಂದರೆ, ಅವರು ಮತ್ತೊೊಮ್ಮೆೆ ನಮ್ಮನ್ನು ಆಳುವುದಾದರೆ ಅದನ್ನು ಸ್ವಾಾಗತಿಸುತ್ತೇನೆ. ಆದರೆ ಕಾಂಗ್ರೆೆಸ್ ಆಡಳಿತವನ್ನು ಈ ಜನ್ಮದಲ್ಲಿ ಸಹಿಸುವುದಿಲ್ಲ. ಕಾರಣ ಬ್ರಿಿಟಿಷರು ತಮ್ಮ ಬೇಳೆ ಬೇಯಿಸಿಕೊಳ್ಳಬಹುದು. ಆದರೆ ಅವರು ಮನೆ ದೇಶ ಮುರುಕರಲ್ಲ. ಆದರೆ ಕಾಂಗ್ರೆೆಸ್ಸಿಿನವರು ಮನೆಹಾಳರು, ದೇಶ ಕಂಟಕರು. ಈ ದೇಶ ವಿರೋಧಿಗಳನ್ನು ನಾನು ಯಾವ ಕಾರಣಕ್ಕೂ ಸಹಿಸಿಕೊಳ್ಳಲಾರೆ’ ಎಂದು ಬಾಳ್ ಠಾಕ್ರೆೆ ಒಂದಲ್ಲ, ಎರಡಲ್ಲ, ನೂರಾರು ಸಲ ಹೇಳಿದ್ದರು. ಅವರಿಗೆ ಕಾಂಗ್ರೆೆಸ್ ಕಂಡರೆ ಆಗುತ್ತಿಿರಲಿಲ್ಲ.

ಹಾಗಂತ ಶಿವಸೇನೆ ಸ್ಥಾಾಪಿಸಿದ ಹನ್ನೊೊಂದು ವರ್ಷಗಳ ನಂತರ ಅಂದರೆ 1971 ರಲ್ಲಿ ಠಾಕ್ರೆೆ ಕಾಂಗ್ರೆೆಸ್ ಜತೆಗೆ ಮೈತ್ರಿಿ ಮಾಡಿಕೊಂಡಿದ್ದರು. ಇಂದಿರಾ ಗಾಂಧಿ ತುರ್ತುಸ್ಥಿಿತಿ ಘೋಷಿಸಿದಾಗ ಠಾಕ್ರೆೆ ಆ ನಿರ್ಧಾರವನ್ನು ಬೆಂಬಲಿಸಿದ್ದರು. 1980ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಠಾಕ್ರೆೆ ಕಾಂಗ್ರೆೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಂತುಳೆ ಮುಖ್ಯಮಂತ್ರಿಿ ಆಗುವಲ್ಲಿ ಠಾಕ್ರೆೆ ಮಹತ್ವದ ಪಾತ್ರವಹಿಸಿದ್ದರು. ಆದರೆ ಬಿಜೆಪಿ ಸ್ಥಾಾಪನೆಯಾದ ನಂತರ, ಠಾಕ್ರೆೆ ಕಾಂಗ್ರೆೆಸ್ ಜತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡರು. 1989ರಿಂದ ಬಿಜೆಪಿ-ಶಿವಸೇನಾ ಮೈತ್ರಿಿಆರಂಭವಾಯಿತು. 1984ರಲ್ಲಿ ಶರದ್ ಪವಾರ್ ಕಾಂಗ್ರೆೆಸ್ಸೇತರ ಮೈತ್ರಿಿಕೂಟ ರಚಿಸಿದಾಗ, ಶಿವಸೇನೆ ಅದರಲ್ಲಿ ಸೇರಲಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ-ಶಿವಸೇನೆ ಸಂಬಂಧ ಅಬಾಧಿತವಾಗಿ ಮುಂದುವರಿದುಕೊಂಡು ಬಂದಿತು. ಬಿಜೆಪಿ ಜತೆ ನಮಗೆ ಯಾವುದೇ ಸಮಸ್ಯೆೆ ಇಲ್ಲ. ‘ನಾವು ಸ್ನೇಹಿತರಂತೆ ಇರುವ ಅಣ್ಣ-ತಮ್ಮಂದಿರು’ ಎಂದು ಠಾಕ್ರೆೆ ಬಿಜೆಪಿ-ಶಿವಸೇನೆ ಸಂಬಂಧವನ್ನು ಚುಟುಕಾಗಿ ಮತ್ತು ಆಪ್ತವಾಗಿ ಬಣ್ಣಿಿಸಿದ್ದರು.

ಕಾಂಗ್ರೆೆಸ್ ನೇತೃತ್ವವನ್ನು ಸೋನಿಯಾ ಗಾಂಧಿ ಅವರು ವಹಿಸಿಕೊಂಡ ನಂತರ ಠಾಕ್ರೆೆ ಅದನ್ನು ಉಗ್ರವಾಗಿ ಖಂಡಿಸಿದ್ದರು. ವಿದೇಶಿ ಮಹಿಳೆಯೊಬ್ಬಳು ಪಕ್ಷದ ಅಧ್ಯಕ್ಷರಾಗುವುದು ಅಥವಾ ದೇಶದ ಪ್ರಧಾನಿ ಆಗುವುದು ಗುಲಾಮಿ ಸಂಸ್ಕೃತಿಯ ಪ್ರತೀಕ ಎಂದು ಠಾಕ್ರೆೆ ಬಲವಾಗಿ ನಂಬಿದ್ದರು. ಈ ವಿಷಯವಾಗಿ ಅವರು ಬರೆದ ಸಂಪಾದಕೀಯಗಳೆಷ್ಟೋೋ, ಮಾಡಿದ ಭಾಷಣಗಳೆಷ್ಟೋೋ!
ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದ ಠಾಕ್ರೆೆ ಕಾಂಗ್ರೆೆಸ್ಸಿಿನ ನೀತಿಗಳನ್ನು ಕಟುವಾಗಿ ವಿರೋಧಿಸುತ್ತಿಿದ್ದರು. ಅದರಲ್ಲೂ ಕಾಂಗ್ರೆೆಸ್ಸಿಿನ ಮುಸ್ಲಿಿಂ ವೋಟ್‌ಬ್ಯಾಾಂಕ್ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುತ್ತಿಿದ್ದರು. ತಮ್ಮ ಕೊನೆಯ ಉಸಿರು ಇರುವ ತನಕವೂ ಅವರು ಈ ನಿಲುವನ್ನು ಬದಲಿಸಲಿಲ್ಲ. ಬಿಜೆಪಿಯೊಂದಿಗೆ ಅವರ ತಕರಾರುಗಳಿದ್ದರೂ, ಅದನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸುತ್ತಿಿರಲಿಲ್ಲ. ಬಿಜೆಪಿ ನಾಯಕರ ಜತೆಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಿಿದ್ದರು. ಆದರೆ ಅವರೆಂದೂ ಮೈತ್ರಿಿ ಕಡಿದುಕೊಳ್ಳುವ ಹಂತಕ್ಕೆೆ ತಮ್ಮ ಭಿನ್ನಾಾಭಿಪ್ರಾಾಯಗಳನ್ನು ತೆಗೆದುಕೊಂಡು ಹೋಗಲಿಲ್ಲ.

ಬಾಳ್ ಠಾಕ್ರೆೆಗೆ ಶದ್ ಪವಾರ್ ಅವರನ್ನು ಕಂಡರೂ ಆಗುತ್ತಿಿರಲಿಲ್ಲ. ಮಹಾರಾಷ್ಟ್ರ ರಾಜಕಾರಣದ ಶಕುನಿ ಎಂದೇ ಅವರನ್ನು ಬಣ್ಣಿಿಸುತ್ತಿಿದ್ದರು. ಅದರಲ್ಲೂ ಶರದ್ ಪವಾರ್ ಕಾಂಗ್ರೆೆಸ್ಸಿಿನಿಂದ ಸಿಡಿದು ಬಂದಾಗ, ಅವರನ್ನು ವಿರೋಧಿಸಿದವರಲ್ಲಿ ಠಾಕ್ರೆೆಯವರೇ ಅಗ್ರಗಣ್ಯರು. ತಮ್ಮ ‘ಸಾಮ್ನಾಾ’ ಪತ್ರಿಿಕೆಯಲ್ಲಿ ಠಾಕ್ರೆೆಯವರು ‘ಪವಾರ್ ರಾಜ್ಯರಾಜಕಾರಣಕ್ಕೆೆ ಅಂಟಿದ ಕುಷ್ಠ ರೋಗ’ ಎಂದು ಬರೆದಿದ್ದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಜಟಾಪಟಿಗೆ ಕಾರಣವಾಗಿತ್ತು. ಪವಾರ್ ಬ್ರಾಾಂಡ್ ಆಫ್ ಪಾಲಿಟಿಕ್‌ಸ್‌‌ನ್ನು ಠಾಕ್ರೆೆ ಎಂದೂ ಸಹಿಸಿಕೊಂಡವರಲ್ಲ.

ಬಾಳ್ ಠಾಕ್ರೆೆ ನಿಧನದ ನಂತರ ಶಿವಸೇನೆ ಧೋರಣೆಯಲ್ಲಿ ಗಣನೀಯ ಬದಲಾವಣೆಯೇನೂ ಆಗಿರಲಿಲ್ಲ. ಬಿಜೆಪಿ ಜತೆ ಸದಾ ಚೌಕಾಶಿ, ಸಣ್ಣ ಪುಟ್ಟ ದುಸುಮುಸುಗಳನ್ನು ಸದಾ ಇಟ್ಟುಕೊಂಡಿದ್ದರೂ, ಮೈತ್ರಿಿ ಕಡಿದುಕೊಳ್ಳುವ ಮಟ್ಟಕ್ಕೆೆ ಹೋಗಿರಲಿಲ್ಲ. ಎನ್‌ಡಿಎ ಪ್ರಮುಖ ಅಂಗ ಪಕ್ಷವಾಗಿಯೇ ಶಿವಸೇನೆ ಮುಂದುವರಿದಿತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಶಿವಸೇನೆ ಮುಖ್ಯಮಂತ್ರಿಿ ದೇವೇಂದ್ರ ಫಡ್ನವೀಸ್ ಅವರಿಗೆ ಕೊಡಬಾರದ ಕಾಟ ಕೊಟ್ಟರೂ ಅವರು ಅವೆಲ್ಲವನ್ನೂ ಸಹಿಸಿಕೊಂಡರು.
ಮೊನ್ನೆೆ ನಡೆದ ಮಹಾರಾಷ್ಟ್ರ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲೂ ಶಿವಸೇನೆ ಸೀಟು ಹಂಚಿಕೆಯಲ್ಲಿ ಖ್ಯಾಾತೆ ತೆಗೆದರೂ, ಬಿಜೆಪಿ ಅವೆಲ್ಲವನ್ನೂ ಸರಿಪಡಿಸಿಕೊಂಡಿತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಶಿವಸೇನೆ ಮುಖಂಡರ ಹಠಮಾರಿ ಧೋರಣೆಯಿಂದ ಬಿಜೆಪಿ ನಾಯಕರು ರೋಸಿ ಹೋಗಿದ್ದರು. ಆದರೆ ಮೈತ್ರಿಿ ಧರ್ಮ ಪಾಲನೆಯ ದೃಷ್ಟಿಿಯಿಂದ ಶಿವಸೇನೆಯನ್ನು ಸಂಬಾಳಿಸಿಕೊಂಡು ಬಂದರು.

ಆದರೆ ಚುನಾವಣಾ ಫಲಿತಾಂಶ ಬರುತ್ತಿಿದ್ದಂತೆ, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದಿದ್ದಾಗ, ಸರಕಾರ ರಚನೆಗೆ ಒಬ್ಬರು ಮತ್ತೊೊಬ್ಬರನ್ನು ನೆಚ್ಚಿಿಕೊಳ್ಳುವುದು ಅನಿವಾರ್ಯವಾದಾಗ, ಶಿವಸೇನೆಯ ವರಸೆ ಬದಲಾಯಿತು. ಬಿಜೆಪಿಗಿಂತ ಅರ್ಧದಷ್ಟು ಸೀಟು ಪಡೆದ ಶಿವಸೇನೆ ಮುಖ್ಯಮಂತ್ರಿಿ ಪಟ್ಟ ತನಗೇ ಬೇಕೆಂದು ಪಟ್ಟು ಹಿಡಿಯಿತು. ಈ ಚೌಕಾಶಿ ಇಲ್ಲದಿದ್ದರೆ ಬಿಜೆಪಿ-ಶಿವಸೇನೆ ಸುರಳೀತವಾಗಿ ಸರಕಾರ ರಚಿಸಬಹುದಿತ್ತು. ಆದರೆ ಶಿವಸೇನೆ ನಾಯಕ ಉದ್ಧವ ಠಾಕ್ರೆೆ ತಮ್ಮ ಮಗನನ್ನು ಮುಖ್ಯಮಂತ್ರಿಿ ಮಾಡುವ ದೃಷ್ಟಿಿಯಿಂದ ತಮ್ಮ ಬೇಡಿಕೆಯನ್ನು ಸ್ವಲ್ಪವೂ ಸಡಿಲಿಸಲಿಲ್ಲ. ಇದರಿಂದ ನಾಲ್ಕು ದಶಕಗಳ ಬಿಜೆಪಿ – ಶಿವಸೇನೆ ಮೈತ್ರಿಿ ಮುರಿದುಹೋಯಿತು.

ಮೊನ್ನೆೆಯ ಚುನಾವಣೆಯಲ್ಲಿ ಬಿಜೆಪಿ – ಶಿವಸೇನೆ ಮೈತ್ರಿಿ ಮಾಡಿಕೊಂಡು, ಪರಸ್ಪರ ಹೊಂದಾಣಿಕೆ ಮೇಲೆ ಸೀಟು ಹಂಚಿಕೊಂಡು ಚುನಾವಣೆ ಎದುರಿಸಿದ್ದವು ತಾನೇ. ಶಿವಸೇನೆಯ ನಾಯಕರು ಕಾಂಗ್ರೆೆಸ್ ಮತ್ತು ಎನ್‌ಸಿಪಿ ನಾಯಕರನ್ನು ಬಾಯಿಗೆ ಬಂದಂತೆ ನಿಂದಿಸಿದ್ದರು. ಕಾಂಗ್ರೆೆಸ್-ಎನ್‌ಸಿಪಿಯೇ ಶಿವಸೇನೆಯ ವೈರಿಗಳು. ಈ ಎರಡೂ ಪಕ್ಷಗಳನ್ನು ಉದ್ಧವ್ ಠಾಕ್ರೆೆ ಮತ್ತು ಅವರ ಮಗ ಆದಿತ್ಯ ಠಾಕ್ರೆೆ ತೀರಾ ಕಟುವಾಗಿ ನಿಂದಿಸಿದ್ದರು. ಆದರೆ ಸರಕಾರ ರಚನೆಯ ಹಂತದಲ್ಲಿ ಯಾವಾಗ ಬಿಜೆಪಿ ಸೊಪ್ಪುು ಹಾಕಲಿಲ್ಲವೋ, ಮೈತ್ರಿಿ ಮುರಿದುಕೊಳ್ಳುವುದು ಖಾತ್ರಿಿಯಾಯಿತೋ, ಉದ್ಧವ್ ಠಾಕ್ರೆೆ ಹೋಗಿಹೋಗಿ ಶರದ್ ಪವಾರ್ ಅವರ ಮುಂದೆ ಶಿರಬಾಗಿದರು. ಇದು ಶಿವಸೇನೆಯ ನೈತಿಕ ಅಧಃಪತನ! ಎನ್‌ಸಿಪಿ ಮತ್ತು ಕಾಂಗ್ರೆೆಸ್ ಬೆಂಬಲ ಪಡೆದು ಸರಕಾರ ರಚನೆಗೆ ಮುಂದಾದರು. ಇದು ಶಿವಸೇನೆಯ ದಿವಾಳಿತನ ಮತ್ತು ಅಸಹ್ಯ ರಾಜಕಾರಣದ ಪರಾಕಾಷ್ಠೆೆಗೆ ಹಿಡಿದ ಕನ್ನಡಿ.

ಇಪ್ಪತ್ತು ದಿನಗಳ ಹಿಂದಿನವರೆಗೆ ಯಾರನ್ನು ವಾಚಾಮಗೋಚರ ಬಯ್ಯುತ್ತಿಿದ್ದರೋ, ಅವರ ಮನೆ ಮುಂದೆ ನಿಂತು, ನನ್ನ ಮಗನನ್ನು ಮುಖ್ಯಮಂತ್ರಿಿ ಮಾಡಲು ನಿಮ್ಮ ಸಹಕಾರ ಬೇಕು ಎಂದು ದೈನೇಸಿಯಾಗಿ ಬೇಡುವ ಹಂತಕ್ಕೆೆ ಉದ್ಧವ್ ಠಾಕ್ರೆೆ ಹೋಗಿದ್ದು ಅವರ ರಾಜಕೀಯ ಬದುಕಿನ ರಸಾತಲ. ಅಷ್ಟೇ ಅಲ್ಲ, ನಾವು ಸರಕಾರ ರಚಿಸೋಣ, ನಿಮ್ಮ ಬೆಂಬಲ ಬೇಕು ಎಂದು ಕಾಂಗ್ರೆೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸ್ವತಃ ಉದ್ಧವ್ ಠಾಕ್ರೆೆ ಫೋನ್ ಮಾಡಿದ್ದು ಅವರು ಇಲ್ಲಿ ತನಕ ಕಾದುಕೊಂಡು ಬಂದಿದ್ದ ರಾಜಕೀಯ ಪಾವಿತ್ರ್ಯ ಮೂರಾಬಟ್ಟೆೆಯಾಯಿತು. ಅಂದರೆ ಇಷ್ಟು ದಿನಗಳವರೆಗೆ ಕಾಪಾಡಿಕೊಂಡು ಬಂದಿದ್ದ ಸಿದ್ಧಾಾಂತಗಳನ್ನೆೆಲ್ಲ ಉದ್ಧವ್ ಠಾಕ್ರೆೆ ಏಕಾಏಕಿ ಗಾಳಿಗೆ ತೂರಿಬಿಟ್ಟರು. ಅಧಿಕಾರಕ್ಕಾಾಗಿ ತಾವು ಎಂಥ ನೀಚ, ಹೀನಾತಿಹೀನ ನಿರ್ಧಾರವನ್ನಾಾದರೂ ತೆಗೆದುಕೊಳ್ಳುತ್ತೇನೆ ಎಂಬುದನ್ನು ತೋರಿಸಿಕೊಟ್ಟರು.

ಉದ್ಧವ್ ಠಾಕ್ರೆೆ ತಮ್ಮ ಜನ್ಮದಲ್ಲಿ ಇಂಥ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸ್ವತಃ ಅವರೂ ಸಹ ಕನಸು-ಮನಸಿನಲ್ಲಿಯೂ ಎಣಿಸಿರಲಿಕ್ಕಿಿಲ್ಲ. ಆದರೆ ಅಧಿಕಾರದ ಆಸೆಯ ಮುಂದೆ ತಾವು ಎಷ್ಟು ಸಣ್ಣ ಮನಸ್ಸಿಿನವರು ಎಂಬುದನ್ನು ಅವರು ಸಾಬೀತುಪಡಿಸಿಬಿಟ್ಟರು.

ಇವೆಲ್ಲಕ್ಕಿಿಂತ ಮುಖ್ಯವಾಗಿ ತಮ್ಮ ತಂದೆ ಕಾಪಾಡಿಕೊಂಡು ಬಂದಿದ್ದ ಮೌಲ್ಯಗಳಿಗೆ ಎಳ್ಳು – ನೀರು ಬಿಡುವ ಮೂಲಕ ಬಾಳ್ ಠಾಕ್ರೆೆ ಅವರಿಗೂ ದ್ರೋಹ ಬಗೆದುಬಿಟ್ಟರು. ಬಾಳ್ ಠಾಕ್ರೆೆ ತಮ್ಮ ಮಗ ಮತ್ತು ಮೊಮ್ಮಗನಿಂದ ಇಂಥ ದೊಡ್ಡ ಮೋಸ, ದ್ರೋಹವನ್ನು ನಿರೀಕ್ಷಿಸಿರಲಿಕ್ಕಿಿಲ್ಲ. ಸ್ವರ್ಗದಲ್ಲಿರುವ ಅವರ ಆತ್ಮ ಅದೆಷ್ಟು ಜೋರಾಗಿ ಚೀರಿರಬಹುದು? ಸ್ವಲ್ಪವಾದರೂ ಮಾನ, ಮರ್ಯಾದೆ ಬೇಡವಾ? ಅಧಿಕಾರ ಎಲ್ಲರಿಗೂ ಬೇಕು. ಆದರೆ ಅದಕ್ಕಾಾಗಿ ನಮ್ಮನ್ನೇ ಮಾರಿಕೊಳ್ಳಬೇಕಾ? ಆತ್ಮಗೌರವವನ್ನೇ ಪಣಕ್ಕಿಿಡಬೇಕಾ? ತಾನು ಮತ್ತು ತನ್ನ ತಂದೆ ಯಾರ ವಿರುದ್ಧ ಹೋರಾಡಿದ್ದೇವೋ ಅವರ ಮುಂದೆಯೇ ಮಂಡಿಯೂರಿ ಕುಳಿತುಬಿಡುವುದಾ? ತಮ್ಮ ರಾಜಕೀಯ ವೈರಿಯನ್ನೇ ಸ್ವಾಾಭಿಮಾನ ಬಿಟ್ಟು ಬಿಗಿದಪ್ಪಿಿಕೊಂಡು ಬಿಡುವುದಾ? ತನ್ನ ರಾಜಕೀಯ ವೈರಿ ಪವಾರ್ ಹೇಳಿದರೆಂದು, ಅವರನ್ನು ಸಂಪ್ರೀತಗೊಳಿಸಲು ಬಿಜೆಪಿ ಜತೆಗಿನ ಮೈತ್ರಿಿಯನ್ನು ಏಕಾಏಕಿ ಕಡಿದುಕೊಂಡು ಬಿಡುವುದಾ? ಸೋನಿಯಾ ಗಾಂಧಿಗೆ ಫೋನ್ ಮಾಡಿ, ನನ್ನ ಮಗ ಮುಖ್ಯಮಂತ್ರಿಿಯಾಗಲು ನಿಮ್ಮ ಆಶೀರ್ವಾದ ಬೇಕು, ನಾವು-ನೀವು ಸೇರಿ ಸರಕಾರ ರಚಿಸಬೇಕು, ನಿಮ್ಮ ಸಹಕಾರ ಬೇಕು ಎಂದು ಅಂಗಲಾಚುವುದಾ? ಸೋನಿಯಾ ಗಾಂಧಿ ತಾಕೀತು ಮಾಡಿದ ಮಾತ್ರಕ್ಕೆೆ, ‘ಆಯಿತು.. ಆಯಿತು.. ನಾವು ಯಾವ ಕಾರಣಕ್ಕೂ ಹಿಂದುತ್ವವನ್ನು ನಮ್ಮ ಕಾರ್ಯಸೂಚಿಯಲ್ಲಿ ಇಟ್ಟುಕೊಳ್ಳುವುದಿಲ್ಲ, ಆ ಬಗ್ಗೆೆ ನಿಮಗೆ ಭರವಸೆ ಕೊಡುತ್ತೇವೆ’ ಎಂದುಬಿಡುವುದಾ? ಅಧಿಕಾರಕ್ಕಾಾಗಿ ಯಾವ ಹಂತಕ್ಕಾಾದರೂ ಹೋಗುವುದೆಂದರೇನು?

ಇಂದು ಉದ್ಧವ್ ಠಾಕ್ರೆೆ ಮಗನನ್ನು ಮುಖ್ಯಮಂತ್ರಿಿ ಮಾಡಲು ಏನು ಬೇಕಾದರೂ ಮಾಡಬಲ್ಲರು. ಬಾಳ್ ಠಾಕ್ರೆೆ ಫೋಟೋವನ್ನು ನಿಮ್ಮ ಕಚೇರಿಗಳಲ್ಲಿ ಬಳಸಕೂಡದು ಎಂದು ಎನ್‌ಸಿಪಿ ಅಥವಾ ಕಾಂಗ್ರೆೆಸ್ ತಾಕೀತು ಮಾಡಿತೆನ್ನಿಿ, ಉದ್ಧವ್ ಠಾಕ್ರೆೆ ಅದಕ್ಕೂ ತಲೆಯಲ್ಲಾಡಿಸಬಲ್ಲರು. ಮಗ ಮುಖ್ಯಮಂತ್ರಿಿ ಆಗುವುದಾದರೆ ಅದೆಲ್ಲ ಯಾವ ಲೆಕ್ಕ? ತಂದೆಯ ಧ್ಯೇಯ, ಮೌಲ್ಯಗಳನ್ನು ಗಾಳಿಗೆ ತೂರಿದವರಿಗೆ, *್ಛಠಿಛ್ಟಿಿ ್ಝ್ಝ ತಂದೆಯ ಫೋಟೋ ಯಾವ ಲೆಕ್ಕ?
ಬಾಳ್ ಠಾಕ್ರೆೆ ಅವರ ಮನೆಯ ಹೆಸರು ಮಾತೋಶ್ರೀ ಅಂತ. ಅಲ್ಲಿ ಉದ್ಧವ್ ಮತ್ತು ಅವರ ಮಗ ಆದಿತ್ಯ ಪಕ್ಷದ ನೀತಿ, ನಿಯಮ, ಸಿದ್ಧಾಾಂತಗಳನ್ನು ಇತಿಶ್ರೀ ಮಾಡಿದ್ದು ಸುಳ್ಳಲ್ಲ. ಇದಕ್ಕಿಿಂತ ದೊಡ್ಡ ಆತ್ಮ ವಂಚನೆ ಇನ್ನೊೊಂದಿರಲಿಕ್ಕಿಿಲ್ಲ. ಇಂದು ಉದ್ಧವ್ ಠಾಕ್ರೆೆ ಇಡೀ ದೇಶದ ಜನರ ಮುಂದೆ ಬೆತ್ತಲಾಗಿದ್ದಾರೆ. ತಮ್ಮೊೊಳಗಿರುವ ಅಧಿಕಾರದ ಧೂರ್ತತನವನ್ನು ನಗ್ನಗೊಳಿಸಿದ್ದಾರೆ. ತಮ್ಮೊೊಳಗಿದ್ದಿದ್ದು ಹುಲಿಯಲ್ಲ, ಕಳ್ಳಬೆಕ್ಕು ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಹೇಗಿದ್ದವರು ಹೇಗಾಗಿಬಿಡುತ್ತಾಾರೆ?

ಅವಕಾಶವಾದಿತನದ ಮತ್ತೊೊಂದು ಮುಖವಾಡ ಕಳಚಿಬಿದ್ದಿದೆ. ಶೇಮ್ ಶೇಮ್!

Leave a Reply

Your email address will not be published. Required fields are marked *

error: Content is protected !!