Saturday, 27th July 2024

‘ವಿಷ್ಣುದಾದಾ’ನ ಸ್ಮಾಾರಕ ನಿರ್ಮಿಸಲು ಆತುರ ಯಾಕಿಲ್ಲ?

ಹತ್ತು ವರ್ಷಗಳು ಕಳೆದರೂ ವಿಷ್ಣುವರ್ಧನ್ ಅವರಿಗಾಗಿ ಒಂದು ಸ್ಮಾರಕ ಕಟ್ಟಲು ಸರಕಾರಗಳಿಗೆ ಆಗುತ್ತಿಲ್ಲ. ಬಿಜೆಪಿ, ಕಾಂಗ್ರೆೆಸ್, ಜೆಡಿಎಸ್ ಎಲ್ಲರೂ ಬಂದು ಹೋಗಿಯಾಯ್ತು.

‘ನಾಗರಹಾವು’ ಸಿನಿಮಾ ನೋಡದಿರುವ ಕನ್ನಡಿಗನ್ಯಾಾರೂ ಇರಲಿಕ್ಕಿಿಲ್ಲ. ಥಿಯೇಟರ್‌ನಲ್ಲಿಯೋ, ಟಿವಿಯಲ್ಲಿಯೋ, ಯೂಟ್ಯೂಬ್‌ನಲ್ಲಿಯೋ ಎಲ್ಲಾಾದರೊಮ್ಮೆೆ ನೋಡಿಯೇ ಇರುತ್ತಾಾರೆ. ತನ್ನ ಮೊದಲ ಚಿತ್ರದಲ್ಲಿಯೇ ಅಷ್ಟೊೊಂದು ಯಶಸ್ಸು ಕಂಡ ಅತಿ ಅಪರೂಪದ ನಾಯಕ ಡಾ. ವಿಷ್ಣುವರ್ಧನ್. ಹೆಸರು ಮಾಡುವುದು ಸುಲಭ, ಆದರೆ ಅದನ್ನು ಹಾಗೆಯೇ ಜೀವನ ಪರ್ಯಂತ ಉಳಿಸಿಕೊಳ್ಳುವುದು ಬಹಳ ಕಷ್ಟ. ತನ್ನ ಕೊನೆಯ ಉಸಿರಿನವರೆಗೂ ಹೆಸರು ಉಳಿಸಿಕೊಂಡು ಅಭಿಮಾನಿಗಳ ಮನದಲ್ಲಿ ದೇವರಾಗಿ ನಿಂತ ನಾಯಕ ವಿಷ್ಣುವರ್ಧನ್.

ತನ್ನ ವಿಶಿಷ್ಟ ಶೈಲಿಯ ಮೂಲಕ ಜನ ಮನ ಗೆದ್ದ ಕಲಾವಿದ. ಎಡಗೈ ನಾಯಕನಾದರೂ ಅದನ್ನೇ ತನ್ನ ಸ್ವತ್ತಾಾಗಿ ಬಳಸಿಕೊಂಡು ನಡೆಯುವ ಶೈಲಿ, ನೃತ್ಯ ಮಾಡುವ ಶೈಲಿ, ಫೈಟ್ ಮಾಡುವ ಶೈಲಿ, ಸನ್ನೆೆ ಮಾಡುವ ಶೈಲಿ ಎಲ್ಲದರಲ್ಲಿಯೂ ಬೇರೆ ನಾಯಕನಾಗಿ ವಿಭಿನ್ನವಾಗಿ ತೆರೆಯ ಮೇಲೆ ಆಧಿಪತ್ಯ ಸಾಧಿಸಿದ ಅತಿ ಅಪರೂಪದ ನಾಯಕ ವಿಷ್ಣುವರ್ಧನ್.

ಕಾಲೇಜು ಹುಡುಗನ ಪಾತ್ರದಲ್ಲಿಯೂ ಒಂದೇ ಸ್ಟೈಲ್, ಹಳ್ಳಿಿ ಹೈದನಾ ಪಾತ್ರಧಾರಿ ‘ಭೂತಯ್ಯನ ಮಗ ಅಯ್ಯು’ ಚಲನಚಿತ್ರದ ಪಾತ್ರಧಾರಿ ‘ಗುಳ್ಳ’ನ ಪಾತ್ರದಲ್ಲಿಯೂ ಅದೇ ಸ್ಟೈಲ್. ಗಂಧದ ಗುಡಿಯ ವಿಲನ್ ಪಾತ್ರಧಾರಿಯಲ್ಲಿಯೂ ಅದೇ ಸ್ಟೈಲ್. ತ್ಯಾಾಗಮಯಿ ಕರ್ಣನ ಪಾತ್ರದಲ್ಲಿಯೂ ಅದೇ ಸ್ಟೈಲ್, ಗುರು ಶಿಷ್ಯರು ಚಿತ್ರದ ಪೌರಾಣಿಕ ಚಿತ್ರದಲ್ಲಿ ಯೂ ಅದೇ ಸ್ಟೈಲ್, ಇನ್ನು ಸಾಮ್ರಾಾಟ್ ಚಿತ್ರದಲ್ಲಿಯೂ ಒಂದೇ ಸ್ಟೈಲ್‌ನಲ್ಲಿ ಮಿಂಚಿದ ನಟ ಡಾ. ವಿಷ್ಣುವರ್ಧನ್‌ರ ವೈಶಿಷ್ಟವೇ ಇದು. ತನ್ನ ಮ್ಯಾಾನರಿಸಂ ಅನ್ನು ಯಾವ ಚಿತ್ರದಲ್ಲಿಯೂ ಬದಲಾಯಿಸಿಲ್ಲ. ತಾನು 25 ವರ್ಷದ ಹುಡುಗನಾಗಿದ್ದಾಾಗಿಂದಲೂ ಅದೇ ಸ್ಟೈಲ್, ತನಗೆ 50 ವರ್ಷ ಆದ ಮೇಲೆಯೂ ಅದೇ ಮ್ಯಾಾನರಿಸಂ.

ನೀವು ‘ನಾಗರಹಾವು’ ಹಾಗೂ ‘ಆಪ್ತಮಿತ್ರ’ ಚಿತ್ರಗಳ ಕೆಲವೊಂದು ಸೀನುಗಳನ್ನು ನೋಡುತ್ತಿಿದ್ದರೆ, ಹೋಲಿಕೆ ಮಾಡಿದಾಗ ಅಷ್ಟೊೊಂದು ವ್ಯತ್ಯಾಾಸಗಳು ಕಾಣಿಸುವುದಿಲ್ಲ. ದಶಕಗಳ ಕಾಲ ಒಂದೇ ಮ್ಯಾಾನರಿಸಂ ಅನ್ನು ಕಾಪಾಡಿಕೊಂಡು ಬರುವುದು ಅಷ್ಟು ಸುಲಭದ ಕೆಲಸವಲ್ಲ.

ತನ್ನ ಈ ವಿಶಿಷ್ಟ ಮ್ಯಾಾನರಿಸಂನಿಂದಲೇ ಅತಿ ದೊಡ್ಡ ಹೆಸರು ಮಾಡಿದ ನಾಯಕರಿವರು. ಇದೇ ಮ್ಯಾಾನರಿಸಂ ತನ್ನ ನಿಜ ಜೀವನದಲ್ಲಿಯೂ ಕಾಪಾಡಿಕೊಂಡಿರುವುದು ಇವರ ಮತ್ತೊೊಂದು ಗರಿ. ಮನೆಯಲ್ಲಿಯೂ ಅಷ್ಟೇ ಒಂದೇ ಮ್ಯಾಾನರಿಸಂ, ಸ್ನೇಹಿತರೊಂದಿಗೆ ಇದ್ದಾಾಗಲೂ ಇದೇ ಮ್ಯಾಾನರಿಸಂ. ಅವರ ಜತೆಗಿದ್ದವರಿಗೆ ಎಂದೂ ವಿಷ್ಣುವರ್ಧನ್ ತೆರೆಯ ಮೇಲೆ ಇದ್ದ ರೀತಿಯೇ, ತೆರೆಯ ಹಿಂದೆಯೂ ಇದ್ದ ವಿಷಯ ಗೊತ್ತಿಿದೆ. ಅಂದಿನ ಕಾಲಘಟ್ಟದಲ್ಲಿ ಡಾ. ವಿಷ್ಣುವರ್ಧನ್‌ರಿಗೆ ಇದ್ದ ಅಭಿಮಾನಿಗಳ ಸಂಖ್ಯೆೆಯೂ ಅಪಾರ. ಅವರ ಮೇಲೆ ಹಣ ಹಾಕಿದ್ದ ನಿರ್ಮಾಪಕರು ಕೈ ಸುಟ್ಟುಕೊಂಡಿರುವ ಉದಾಹರಣೆ ಬಹಳ ವಿರಳ. ಸೂಪರ್‌ಹಿಟ್ ಸಿನಿಮಾಗಳು ಹಲವಾರು ತೆರೆಗೆ ಬಂದವು, ನೆಲ ಕಚ್ಚಿಿದ ಸಿನಿಮಾಗಳು ಕೆಲವೇ ಕೆಲವು ಮಾತ್ರ. ಕಣ್ಣು ಮುಚ್ಚಿಿಕೊಂಡು ಇವರ ಮೇಲೆ ಹಣ ಹೂಡುವುದಕ್ಕೆೆ ನಿರ್ಮಾಪಕರಿಗೆ ತಮ್ಮ ಹಣದ ಮೇಲೆ ಎಂದಿಗೂ ವಿಶ್ವಾಾಸವಿರುತ್ತಿಿತ್ತು. ಬೇರೆ ನಾಯಕರ ರೀತಿ ಸಾರ್ವಜನಿಕ ಜೀವನದಲ್ಲಿ ಡಾ.ವಿಷ್ಣುವರ್ಧನ್ ಕಾಣಿಸಿಕೊಂಡಿದ್ದು ಸ್ವಲ್ಪ ಕಡಿಮೆಯೇ, ಅದರಲ್ಲಿಯೂ ತಾವು ನಿಧನ ಹೊಂದುವ ಕೆಲವು ವರ್ಷಗಳ ಹಿಂದೆಯಂತೂ ಆಧ್ಯಾಾತ್ಮದ ಕಡೆಗೆ ಅತಿ ಹೆಚ್ಚು ಒಲವನ್ನು ಹೊಂದಿದ್ದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳವುದನ್ನು ಕಡಿಮೆ ಮಾಡಿದ್ದರು.

2008ರಲ್ಲಿ ಸಿಎನ್‌ಎನ್‌ಟಿವಿಯವರು ನಡೆಸಿದ ಸಮೀಕ್ಷೆೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಖ್ಯಾಾತಿ ಹೊಂದಿರುವ ನಾಯಕರು ಪ್ರಶಂಸೆಗೆ ಪಾತ್ರರಾಗಿದ್ದರು. ಕನ್ನಡದೇ ಆದ ಅಭಿಮಾನಿ ಬಳಗವನ್ನು ಗೊಂದಿದ್ದ ವಿಷ್ಣುವರ್ಧನ್‌ಗೆ ದಕ್ಷಿಿಣ ಭಾರತದಾದ್ಯಂತ ಸ್ನೇಹಿತರಿದ್ದರು. ಎಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಿಲ್ಲ, ಶಂಕರ್‌ನಾಗ್‌ರವರ ‘ಮಾಲ್ಗುಡಿ ಡೇಸ್’ ಧಾರವಾಹಿಯಲ್ಲಿ ವೆಂಕಟರಾವ್ ಎಂಬ ಪಾತ್ರದಲ್ಲಿ ಕಿರುತೆರೆಯಲ್ಲಿಯೂ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು.

ಅಂದಿನ ಕಾಲದಲ್ಲಿ ಸ್ಟಾಾರ್ ನಟರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಅಷ್ಟು ಸುಲಭದ ವಿಷಯಾಗಿರಲಿಲ್ಲ. ಅಪ್ಪಿಿತಪ್ಪಿಿ ಕಿರುತೆರೆಯಲ್ಲಿ ಕಾಣಿಸಿದರೆ ನಿರ್ದೇಶಕರು ಹಾಗೂ ನಿರ್ಮಾಪಕರು ಆ ನಾಯಕನನ್ನು ಸಿನಿಮಾಗಳಿಗೆ ಆಯ್ಕೆೆ ಮಾಡಿಕೊಳ್ಳುತ್ತಲೇ ಇರುಲಿಲ್ಲ. ಈ ಕಿರುತೆರೆಯ ಧಾರವಾಹಿ ಪಾತ್ರ ಶಂಕರ್ ನಾಗ್ ಹಾಗೂ ವಿಷ್ಣುವರ್ಧನ್‌ರ ಸ್ನೇಹಕ್ಕೆೆ ಸಾಕ್ಷಿಿಯಾಗಿತ್ತು.

ಸ್ನೇಹ ಎಂದಾಕ್ಷಣ ನೆನಪಾಗುವುದು ವಿಷ್ಣುವರ್ಧನ್ ಸ್ಥಾಾಪಿಸಿದ್ದ ‘ಸ್ನೇಹಲೋಕ’ ಎಂಬ ಸಂಸ್ಥೆೆ. ಸಮಾಜದಲ್ಲಿರುವ ಸಮಸ್ಯೆೆಗಳಿಗೆ ಸ್ಪಂದಿಸಲು, ಬಡವರಿಗೆ ಸಹಾಯ ಮಾಡಲು ಈ ಸಂಸ್ಥೆೆ ಸ್ಥಾಾಪಿಸಲಾಗಿತ್ತು. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾದಾಗ ಪಾದಯಾತ್ರೆೆ ನಡೆಸಿ ಜನರಿಂದ ಹಣ ಸಂಗ್ರಹಿಸಿ ‘ಸ್ನೇಹಲೋಕ’ದ ಮೂಲಕ ನಿರಾಶ್ರಿಿತರಿಗೆ ಸಹಾಯ ಮಾಡಿದ್ದರು. ಇನ್ನು ಇದೇ ಸಂಸ್ಥೆೆಯಡಿ ‘ಮೇಲುಕೋಟೆ’ ಗ್ರಾಾಮವನ್ನು ದತ್ತು ತೆಗೆದುಕೊಂಡು ಅಲ್ಲಿನ ನೀರಿನ ಸಮಸ್ಯೆೆಯ ಬಗ್ಗೆೆ ಹಲವು ಕ್ರಮಗಳನ್ನು ಕೈಗೊಂಡಿದ್ದರು.

ನಿಮಗೆ ಇದೆಲ್ಲಾಾ ಈಗ ಸಣ್ಣ ವಿಷಯವೆನಿಸಬಹುದು, ಅಂದಿನ ಕಾಲಘಟ್ಟದಲ್ಲಿ ಈ ರೀತಿಯ ಸಹಾಯವನ್ನು ಮಾಡುವುದು ಅಷ್ಟು ಸುಲಭವಿರಲಿಲ್ಲ. ಈಗ ಎಲ್ಲರೂ ಸಹಾಯ ಮಾಡಲು ಮುಂದೆ ಬರುತ್ತಾಾರೆ. ಎಲ್ಲರೂ ಹಣ ಸಂಗ್ರಹಿಸಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾಾರೆ. ಯಾರೂ ಮಾಡದ ಕೆಲಸವನ್ನೇನೂ ಅವರು ಮಾಡಿದ್ದಾಾರೆಂದು ಹೇಳುತ್ತಿಿಲ್ಲ, ಆದರೆ, ಅವರ ಮನಸ್ಸಿಿನಲ್ಲಿದ್ದ ಸಮಾಜ ಸೇವೆಯ ಒಂದು ಬಾಗವಷ್ಟು ಕೇವಲ ಸಿನಿಮಾ ಮಾತ್ರವಲ್ಲದೇ, ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಷ್ಟಕ್ಕೆೆ ಸ್ಪಂದಿಸಿದರಷ್ಟೇ ಅವರು ಸಂಪಾದಿಸಿದ ಅಭಿಮಾನಿ ಬಳಗವನ್ನು ಉಳಿಸಿಕೊಳ್ಳಲು ಸಾಧ್ಯ. 220ಕ್ಕೂ ಅಧಿಕ ಸಿನಿಮಾಗಳನ್ನು ಅಭಿನಯಿಸಿದ ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿಿನಲ್ಲಿ ಅಚ್ಚಳಿಯದೇ ಉಳಿದಿದ್ದಾಾರೆ.

ಇಷ್ಟೆೆಲ್ಲಾಾ ಹೆಸರು ವಾಸಿಯಾಗಿದ್ದ ವಿಷ್ಣುವರ್ಧನ್ ಎಂದೋ ರಾಜಕೀಯಕ್ಕೆೆ ಬರಬಹುದಿತ್ತು. ತಮ್ಮ ಅಭಿಮಾನಿ ಬಳಗವೇ ಅವರ ಬಹುದೊಡ್ಡ ಶಕ್ತಿಿಯಾಗಿತ್ತು. ಆದರೂ ಅವರಿಗೆ ಯಾಕೋ ರಾಜಕೀಯದಲ್ಲಿ ಆಸಕ್ತಿಿಯಿರಲಿಲ್ಲ. ಇನ್ನು ‘ಗಂಧದ ಗುಡಿ’ ಚಲನಚಿತ್ರದ ಶೂಟಿಂಗ್ ಸಮಯದಲ್ಲಾಾದ ಘಟನೆಯು ಕರ್ನಾಟಕದ ಅಭಿಮಾನಿಗಳಲ್ಲಿ ದೊಡ್ಡದೊಂದು ಒಡಕನ್ನೇ ಹುಟ್ಟುಹಾಕಿತ್ತು. ಇಂತಹ ಬದಕಿನ ನಡುವೆಯೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದ ನಾಯಕ ಡಾ.ವಿಷ್ಣುವರ್ಧನ್, ಸ್ವತಃ ಡಾ. ರಾಜ್‌ಕುಮಾರ್ ಅವರೇ ಈ ಘಟನೆಯ ಬಗ್ಗೆೆ ವಿವರಣೆಯನ್ನು ನೀಡಿದ್ದರೂ ಸಹ ಅಭಿಮಾನಿಗಳು ಕೇಳುವ ತಾಳ್ಮೆೆಯನ್ನು ತೋರಲಿಲ್ಲ. ಹಲವಾರು ದಿನಗಳ ಕಾಲ ಯಾರ ಕಣ್ಣಿಿಗೂ ಕಾಣದೆಯೇ ಓಡಾಡಿದ ನಾಯಕ ವಿಷ್ಣುವರ್ಧನ್ ತಮ್ಮ ಕೊನೆಯ ದಿನಗಳವರೆಗೂ ತನ್ನದಲ್ಲದ ತಪ್ಪಿಿಗೆ ಯೋಚಿಸುತ್ತಾಾ ದಿನ ಕಳೆದರು.

ತಾವು ಎಲ್ಲಿಗೆ ಹೋದರೂ ಎಲ್ಲಿಂದಾದರೊಂದು ಗಂಧದ ಗುಡಿಯ ವಿಚಾರ ಅಭಿಮಾನಿಗಳ ಬಾಯಲ್ಲಿ ಕೇಳಿ ಬರುತ್ತಿಿತ್ತು. ಎಂ.ಪಿ.ಶಂಕರ್ ತಾವೇ ಮಾಡಿದ ಅಚಾತುರ್ಯದಿಂದ ಹೀಗಾಯ್ತು ಅಂತ ಎಷ್ಟೇ ಹೇಳಿದರೂ ಜನ ಕೇಳಲು ತಯಾರಿರಲಿಲ್ಲ. ಸಾಧಕರನ್ನು ಗುರುತಿಸಿ ಅವರ ಸಾಧನೆಗೆ ತಕ್ಕಂತೆ ಸರಕಾರಗಳು ಪ್ರತಿಯೊಬ್ಬ ಸಾಧಕರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ವಿಷ್ಣುವರ್ಧನ್‌ರವರ ವಿಚಾರದಲ್ಲಿ ಈ ಸರಕಾರಗಳು ಅಷ್ಟೊೊಂದು ಆಸಕ್ತಿಿ ತೋರದಿರುವುದು ದುರದೃಷ್ಟಕರ ಸಂಗತಿ.

ಎಲ್ಲರಂತೆಯೇ ಅವರ ಹೆಸರಿನಲ್ಲೊೊಂದು ಪ್ರಶಸ್ತಿಿಯನ್ನು ಘೋಷಿಸಿದ್ದಾಾರೆ. ಕೇಂದ್ರ ಸರಕಾರವು ಅಂಚೆಚೀಟಿಯನ್ನು ಇವರ ಹೆಸರಲ್ಲಿ ಜಾರಿಗೆ ತಂದಿದೆ. 12 ಕಿಮೀ ಉದ್ದದ ರಸ್ತೆೆಯನ್ನು ಉತ್ತರಹಳ್ಳಿಿ ರಸ್ತೆೆಯೊಂದಕ್ಕೆೆ ನಾಮಕರಣ ಮಾಡಿದೆ.

ಬಾಲಕೃಷ್ಣರವರ ಅಭಿಮಾನ್ ಸ್ಟುಡಿಯೋದಲ್ಲೊೊಂದು ಸ್ಮಾಾರಕ ನಿರ್ಮಾಣ ಮಾಡಲು ಹೆಣಗಾಡುತ್ತಿಿದ್ದಾಾರೆ, ವಿಷ್ಣುವರ್ಧನ್ ರವರ ಪತ್ನಿಿ ಭಾರತಿಯವರು. ಬಾಲಕೃಷ್ಣನವರ ಜಾಗದಲ್ಲಿ ವಿಷ್ಣುರವರ ಸ್ಮಾಾರಕ ನಿರ್ಮಿಸಿ ಕೊಡಲು ಹಠ ಹಿಡಿದಿರುವುದು ಸಹ ತಪ್ಪೇ. ಯಾರೇ ಆಗಲಿ ಖಾಸಗಿ ಜಾಗದಲ್ಲಿ ಸ್ಮಾಾರಕವನ್ನು ನಿರ್ಮಿಸಿ ಕೊಡಿಯೆಂದು ಕೇಳಬಾರದು. ಸರಕಾರವು ಈ ನಿಟ್ಟಿಿನಲ್ಲಿ ಆಗಲೇ ಗಮನ ಹರಿಸಿ ಒಳ್ಳೆೆಯ ಜಾಗವೊಂದನ್ನು ನೀಡಬಹುದಿತ್ತು.

ಅಂಬರೀಶ್‌ರವರ ನಿಧನದ ಸಂದರ್ಭದಲ್ಲಿ ಸರಕಾರವು ಕೈಗೊಂಡ ಕ್ರಮಗಳನ್ನು ವಿಷ್ಣುರವರ ನಿಧನದ ಸಮಯದಲ್ಲಿ ಕೈಗೊಳ್ಳಲಿಲ್ಲ. ಅಂಬಿಯವರ ಬಗ್ಗೆೆ ತೋರುತ್ತಿಿರುವ ಕಾಳಜಿಯನ್ನು ವಿಷ್ಣು ಅವರಿಗೆ ತೋರಲಿಲ್ಲ. ಅಲ್ಲಿಯೂ ರಾಜಕೀಯ, ವಿಷ್ಣುವರ್ಧನ್ ಅಭಿಮಾನಿಗಳ ಎಷ್ಟು ಲಕ್ಷ ವೋಟುಗಳನ್ನು ಈ ಸರಕಾರಗಳು ತೆಗೆದುಕೊಂಡಿಲ್ಲ ಹೇಳಿ? ಅವರ ಹೆಸರನ್ನು ಹೇಳಿ ಎಷ್ಟು ಜನ ನಾಯಕರು ರಾಜಕೀಯದಲ್ಲಿ ಮೇಲೆ ಬಂದಿಲ್ಲ? ಅವರ ಅಭಿಮಾನಿಗಳೇ ರಾಜಕೀಯದಲ್ಲಿ ಮೇಲೆ ಬಂದಿರುವ ಹಲವು ಉದಾಹರಣೆಗಳಿವೆ. ಇಷ್ಟೆೆಲ್ಲಾಾ ಮಾಡಿದ ವಿಷ್ಣುವರ್ಧನ್‌ರಿಗೆ ಇನ್ನು ಸರಿಯಾದ ಮರ್ಯಾದೆ ಸರಕಾರದಿಂದ ಸಿಗದಿರುವುದು ವಿಪರ್ಯಾಸವೇ ಸರಿ.

ಅಂಬರೀಶ್‌ರವರ ನಿಧನದ ಪ್ರಕ್ರಿಿಯೆಗಳನ್ನು ಸರಕಾರವು ಯಾವ ರೀತಿಯಲ್ಲಿ ನಡೆಸಿತು ಎಂಬುದನ್ನು ಇಡೀ ರಾಜ್ಯವೇ ನೋಡಿದೆ. ಮುಖ್ಯಮಂತ್ರಿಿ ಕುಮಾರಸ್ವಾಾಮಿಯಂತೂ ತಮ್ಮ ಇಡೀ ಕೆಲಸವನ್ನು ಬಿಟ್ಟು ಎರಡು ದಿನಗಳ ಕಾಲ ಅಂಬಿಯವರ ಪಾರ್ಥಿವ ಶರೀರ ಬಳಿಯೇ ಇದ್ದರು. ಹೆಲಿಕಾಪ್ಟರ್‌ನಿಂದ ಪಾರ್ಥಿವ ಶರೀರವನ್ನು ಮಂಡ್ಯ ಜಿಲ್ಲೆೆಯ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆೆ ಕರೆದೊಯ್ದುರು. ಕಂಠೀರವ ಕ್ರೀಡಾಂಗಣದವರೆಗೂ ಬೆಂಗಳೂರಿನ ರಸ್ತೆೆಗಳಲ್ಲಿ ಲಕ್ಷಾಾಂತರ ಜನರ ನಡುವೆ ಅಂಬಿಯ ಶರೀರವನ್ನು ಮೆರವಣಿಗೆಯಲ್ಲಿ ಕರೆತರುವ ಸಕಲ ವ್ಯವಸ್ಥೆೆಯನ್ನು ಮಾಡಲಾಯಿತು. ಸರಕಾರದ ಇಡೀ ಮಂತ್ರಿಿ ಮಂಡಲವೇ ಕಂಠೀರವ ಸ್ಟುಡಿಯೋದಲ್ಲಿತ್ತು. ಹಳೇ ಮೈಸೂರು ಭಾಗದ ಶಾಸಕರು, ಸಂಸದರು, ವಿರೋಧ ಪಕ್ಷದ ನಾಯಕರು ಎಲ್ಲರೂ ಇದ್ದರು. ಸ್ವತಃ ಡಿ.ಕೆ.ಶಿವಕುಮಾರ್ ಉಸ್ತುವಾರಿ ವಹಿಸಿ ಎಲ್ಲಾಾ ಪ್ರಕ್ರಿಿಯೆಗಳನ್ನು ನೋಡಿಕೊಂಡರು.

ಇಷ್ಟೆೆಲ್ಲಾಾ ಇವರು ಮಾಡಿದ್ದು ಅಂಬಿ ಮೇಲಿನ ಅಭಿಮಾನದಿಂದ ಮಾತ್ರವೇ ಎಂಬ ಅನುಮಾನ ಎಲ್ಲರಲ್ಲಿ ಇಂದೂ ಇದೆ. ಜೆಡಿಎಸ್ ಪಕ್ಷಕ್ಕೆೆ 7 ಸೀಟುಗಳನ್ನು ನೀಡಿದ ಮಂಡ್ಯ ಜಿಲ್ಲೆೆಯ ಜನತೆಯ ಉಪಕಾರ ತೀರಿಸಲು ಕುಮಾರಸ್ವಾಾಮಿ ಮಾಡಲೇ ಬೇಕಿತ್ತು. ಒಕ್ಕಲಿಗರ ಮತ ಬ್ಯಾಾಂಕ್ ಭದ್ರ ಮಾಡಿಕೊಳ್ಳಲು ಕುಮಾರಸ್ವಾಾಮಿ ಇಷ್ಟೊೊಂದು ಮಾಡಿದರೆಂಬ ಅನುಮಾನ ಎಲ್ಲರನ್ನು ಇಂದಿಗೂ ಕಾಡುತ್ತಿಿದೆ. ಅಂಬಿಯ ವಿಚಾರದಲ್ಲಿ ಇಷ್ಟೆೆಲ್ಲಾಾ ಮಾಡಿದರೂರು ಮಂಡ್ಯದ ಜನರು 2019ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಾಮಿಗೆ ಸೊಪ್ಪುು ಹಾಕಲಿಲ್ಲ.

ಆ ಚುನಾವಣೆಯ ಸಂದರ್ಭದಲ್ಲಿ ಅವರ ನಾಯಕರುಗಳು ಆಡಿದ ಕೆಟ್ಟ ಮಾತುಗಳಿಂದಲೇ ಎಲ್ಲರಿಗೂ ಅಂಬಿ ಅಂತ್ಯಕ್ರಿಿಯೆಯು ಹಿಂದಿನದ ರಹಸ್ಯವು ಅರಿವಾಗಿತ್ತು. ಅಂಬಿಯ ಮೇಲೆ ಅಷ್ಟೊೊಂದು ಪ್ರೀತಿ ಇದ್ದರೆ ಚುನಾವಣೆಯಲ್ಲಿ ಸುಮಲತಾರವರ ಬಗ್ಗೆೆ ಆ ರೀತಿಯ ಮಾತುಗಳನ್ನು ಆಡುತ್ತಿಿರಲಿಲ್ಲ. ರಾಜಕೀಯ ದೃಷ್ಟಿಿಯಿಂದಲೇ ಆದರೂ ಸಹ ಅಂಬಿಯವರಿಗೆ ಸಿಕ್ಕ ವಿದಾಯವು ವಿಷ್ಣುವರ್ಧನ್‌ಗೆ ಸಿಗಲಿಲ್ಲ, ಅಂಬಿಯ ಅಂತ್ಯಕ್ರಿಿಯೆಯನ್ನು ‘ಕಂಠೀರವ’ ಸ್ಟುಡಿಯೋದಲ್ಲಿ ಮಾಡಿದ ಹಾಗೆಯೇ ವಿಷ್ಣುವಿನ ಅಂತ್ಯಕ್ರಿಿಯೆಯನ್ನು ಅಲ್ಲಿಯೇ ಮಾಡಬಹುದಿತ್ತು.

ಸರಕಾರದ ಈ ಮಲತಾಯಿಯ ಧೋರಣೆಯಿಂದಲೇ ವಿಷ್ಣು ಅಭಿಮಾನಿಗಳಿಗೆ ಇಂದಿಗೂ ಬೇಜಾರಿದೆ. ವಿಷ್ಣು ನಮ್ಮನ್ನೆೆಲ್ಲಾಾ ಅಗಲಿ ಇಂದಿಗೆ ಸುಮಾರು 10 ವರ್ಷಗಳು ಕಳೆದವು. ಅವರ ನೆನಪಿನಲ್ಲಿ ಅವರ ಅಭಿಮಾನಿಗಳು ಅಲ್ಲಲ್ಲಿ ನಿರ್ಮಿಸಿರುವ ಪುತ್ಥಳಿಗಳನ್ನು ಬಿಟ್ಟರೆ ಅಷ್ಟೊೊಂದು ಹೇಳಿಕೊಳ್ಳುವ ವಿಚಾರಗಳಿಲ್ಲ. ಅಭಿಮಾನಿಗಳಿಂದಲೇ ಬೆಳೆದ ನಾಯಕನಿಗೆ ಕೊನೆಗೆ ಅಭಿಮಾನಗಳೇ ದೇವರು ಎಂಬಂತೆ ಅವರೇ ನೋಡಿಕೊಳ್ಳುತ್ತಿಿದ್ದಾಾರೆ.

10 ವರ್ಷಗಳು ಕಳೆದರೂ ಸಹ ಅವರ ಒಂದು ಸ್ಮಾಾರಕವನ್ನು ಕಟ್ಟಲು ಸರಕಾರಗಳಿಗೆ ಆಗುತ್ತಿಿಲ್ಲ. ಬಿಜೆಪಿ, ಕಾಂಗ್ರೆೆಸ್, ಜೆಡಿಎಸ್ ಎಲ್ಲರೂ ಬಂದು ಹೋಗಿಯಾಯ್ತು. ತಮಗೆ ಬೇಕಾಗಿರುವ ಯಾವುದಾದರೂ ಒಂದು ಜಾಗವನ್ನು ಆಕ್ರಮಿಸಿಕೊಳ್ಳಬೇಕೆಂದರೆ ಕ್ಷಣ ಮಾತ್ರದಲ್ಲಿ ಓಡಾಡಿ ಮಾಡಿಸಿಕೊಳ್ಳುವ ರಾಜಕೀಯ ನಾಯಕರುಗಳಿಗೆ ವಿಷ್ಣುವಿನ ವಿಚಾರದಲ್ಲಿ ಮಾತ್ರ ಏನನ್ನೂ ಮಾಡಲಾಗಲಿಲ್ಲ. ಈಗ ಮೈಸೂರಿನಲ್ಲಿ ಜಾಗ ನೀಡಿ ಸ್ಮಾಾರಕ ನಿರ್ಮಿಸಲು ಚಿಂತಿಸಿದೆ. ಈ ವಿಚಾರವಾಗಿ ಅವರ ಕುಟುಂಬಸ್ಥರು ಜನರ ಮುಂದೆ ಬಂದು ತಮ್ಮ ವ್ಯಥೆಯನ್ನು ಹೇಳಿಕೊಳ್ಳುವ ಪರಿಸ್ಥಿಿತಿ ಎದುರಾದದ್ದು ಮಾತ್ರ ದುರದೃಷ್ಟಕರ.

ಹಿಂದಿ ಬ್ಯಾಾನರ್‌ಗಳನ್ನು ಕಿತ್ತು ಹಾಕಿ ಪ್ರತಿಭಟನೆ ಮಾಡುವ ಕನ್ನಡ ಸಂಘಟನೆಗಳು ನಿರಂತರವಾಗಿ ಹೋರಾಟವನ್ನು ಮಾಡಿ ಸರಕಾರದ ಮೇಲೆ ಒತ್ತಡ ಹೇರಲಿಲ್ಲ, ವಿಷ್ಣುವಿನಿಂದ ಸಹಾಯ ಪಡೆದ ರಾಜಕೀಯ ನಾಯಕರು ಸಹ ಒತ್ತಡ ಹೇರುವ ಕೆಲಸ ಮಾಡಲಿಲ್ಲ. ಕನ್ನಡ ಚಿತ್ರರಂಗವು ಕಂಡ ಧೀಮಂತ ನಾಯಕನ ವಿದಾಯವನ್ನು ಸರಿಯಾದ ರೀತಿಯಲ್ಲಿ ಸರಕಾರಗಳು ನಡೆಸಿಕೊಡಲಿಲ್ಲ, ಕನಿಷ್ಠ ಅವರ ಒಂದು ಸ್ಮಾಾರಕದ ವಿಚಾರದಲ್ಲಿ 10 ವರ್ಷಗಳ ರಾಜಕೀಯ ಮಾಡಬಾರದಿತ್ತು. ದೊಡ್ಡವರು ಹೇಳಿದ ಹಾಗೆ ಒಬ್ಬ ಮನುಷ್ಯ ಬದುಕಿರುವವರೆಗೂ ಅಷ್ಟೇ ಅವನಿಗೆ ಮರ್ಯಾದೆ, ನಿಧನವಾದ ಮೇಲೆ ಯಾರೂ ಕೇಳುವವರಿರುವುದಿಲ್ಲ. ಸರಕಾರದ ಮುಂದೆ ಬೇಡಿಕೊಳ್ಳವ ಅನಿವಾರ್ಯ, ಮಾತ್ರ ಯಾರಿಗೂ ಬರಬಾರದು.

ವಿಷ್ಣುದಾದಾ ಬದುಕಿದ್ದಾಾಗ ಅವರ ಮುಂದೆ ಬೇಡಿಕೊಳ್ಳಲು ಬರುತ್ತಿಿದ್ದವರೆಲ್ಲರೂ ಈಗ ದೊಡ್ಡ ನಾಯಕರಾಗಿ ಬೆಳೆದಿದ್ದಾಾರೆ. ಅಂತಹವರ ಮುಂದೆ ಹೋಗಿ ಬೇಡುವ ಪರಿಸ್ಥಿಿತಿ ಎದುರಾಗಿದ್ದು ಮಾತ್ರ ವಿಪರ್ಯಾಸ. ಆದರೆ, ಯಾರು ಏನೇ ಹೇಳಿದರೂ ವಿಷ್ಣುದಾದಾ ನಮ್ಮೆೆಲ್ಲರ ಮನಸ್ಸಿಿನಲ್ಲಿ ಎಂದಿಗೂ ಇದ್ದೇ ಇರುತ್ತಾಾರೆ. ಸರಕಾರವು ಇನ್ನಾಾದರೂ ಎಚ್ಚೆೆತ್ತುಕೊಂಡು ಮೈಸೂರುನಲ್ಲಿ ಡಿಸ್ನಿಿಲ್ಯಾಾಂಡ್ ಕಟ್ಟಲು ತೋರಿಸುತ್ತಿಿರುವ ಆತುರವನ್ನು ವಿಷ್ಣು ದಾದಾನ ಸ್ಮಾಾರಕವನ್ನು ನಿರ್ಮಿಸಲು ತೋರಿದರೆ ಉತ್ತಮ. ವಿಷ್ಣುವರ್ಧನ್ ಬದುಕಿದ್ದರೆ ಇಂದಿಗೆ 69 ವರ್ಷಗಳಾಗಿರುತ್ತಿಿತ್ತು. ಅವರು ನಮ್ಮನ್ನು ಆಗಲಿ 10 ವರ್ಷಗಳು ಕಳೆದರೂ ಸಹ ಅವರ ಚಿತ್ರಗಳು, ಗೀತೆಗಳು, ಡೈಲಾಗ್‌ಗಳು, ಸ್ಮೈಲ್, ಎಲ್ಲವೂ ಮನಸ್ಸಿಿನಲ್ಲಿ ಹಾಗೆಯೇ ಉಳಿದಿದೆ. ನಾವಂತೂ ಅವರನ್ನು ಆರಾಧಿಸಿಕೊಂಡು ಹೋಗುವುದನ್ನು ಮರೆಯುವುದು ಬೇಡ.

Leave a Reply

Your email address will not be published. Required fields are marked *

error: Content is protected !!