Saturday, 27th July 2024

ಸಿಐಡಿಯಲ್ಲಿ ಫ್ರೆಡೆರಿಕ್ಸ್ ಪಾತ್ರಧಾರಿ ದಿನೇಶ್ ಫಡ್ನಿಸ್ ಇನ್ನಿಲ್ಲ

ವದೆಹಲಿ: ದೂರದರ್ಶನದ ಜನಪ್ರಿಯ ಕಾರ್ಯಕ್ರಮ ಸಿಐಡಿಯಲ್ಲಿ ಫ್ರೆಡೆರಿಕ್ಸ್ ಪಾತ್ರ ನಿರ್ವಹಿಸುವ ಮೂಲಕ ಜನಪ್ರಿಯರಾಗಿದ್ದ ನಟ ದಿನೇಶ್ ಫಡ್ನಿಸ್(57 )ಮಂಗಳವಾರ ನಿಧನರಾದರು.

ನಟ ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಈ ಹಿಂದೆ, ನಟ ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂಬ ವರದಿಗಳು ವೈರಲ್ ಆಗಿದ್ದವು. ಡಿಸೆಂಬರ್ 1, ಶುಕ್ರವಾರ ರಾತ್ರಿ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಸಿಐಡಿಯ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!