Saturday, 27th July 2024

ನಟಿ, ಗಾಯಕಿ ಮಲ್ಲಿಕಾ ರಜಪೂತ್ ನಿಧನ

ಸುಲ್ತಾನಪುರ: ಟಿ, ಗಾಯಕಿ ಮಲ್ಲಿಕಾ ರಜಪೂತ್(35) ನಿಧನ ಹೊಂದಿದ್ದಾರೆ. ಉತ್ತರ ಪ್ರದೇಶದ ಸುಲ್ತಾನಪುರದ ಮಲ್ಲಿಕಾ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾ ಮೃತದೇಹ ಪತ್ತೆಯಾಗಿದೆ. ನಟಿ, ಗಾಯಕಿ ಮಲ್ಲಿಕಾ ರಜಪೂತ್ ನಿಧನ ಹೊಂದಿದ್ದಾರೆ.

ಉತ್ತರ ಪ್ರದೇಶದ ಸುಲ್ತಾನಪುರದ ಮಲ್ಲಿಕಾ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾ ಮೃತದೇಹ ಪತ್ತೆಯಾಗಿದೆ. ಸುಲ್ತಾನ್ಪುರದ ಖ್ಯಾತ ಗಾಯಕಿ ಮತ್ತು ನಟಿ ವಿಜಯ ಲಕ್ಷ್ಮಿ ಅಲಿಯಾಸ್ ಮಲ್ಲಿಕಾ ರಜಪೂತ್ ಅವರು ಫೆ.13ರಂದು ತಮ್ಮ ಸ್ವಗೃಹದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಅವರ ಮರಣೋತ್ತರ ಪರೀಕ್ಷೆಯ ಬಳಿಕ ವಷ್ಟೇ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕಷ್ಟು ಸಿನಿಮಾಗಳಿಗೆ ಹಾಡಿದ್ದ 35 ವರ್ಷದ ಗಾಯಕಿ ಕಮ್ ನಟಿ ಮಲ್ಲಿಕಾ ರಜಪೂರ್ ಅವರ ಮೃತದೇಹ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಕುಂಡ್ ಪ್ರದೇಶದ ತನ್ನ ಮನೆಯ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲಿಕಾ ತಾಯಿ ಮಾತನಾಡಿ, ಕದ ಒಡೆಸಿದಾಗ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು’ ಎಂದಿದ್ದಾರೆ. ಮಲ್ಲಿಕಾ ರಜಪೂತ್, ‘ರಿವಾಲ್ವರ್ ರಾಣಿ’ ಸಿನಿಮಾದಲ್ಲಿ ಕಂಗನಾ ರಣೌತ್ ಜೊತೆ ನಟಿಸಿದ್ದರು. ಗಾಯಕಿಯೂ ಆಗಿದ್ದ ಮಲ್ಲಿಕಾ ಶಾನ್​ರ ಆಲ್ಬಂನಲ್ಲಿ ಹಾಡಿದ್ದರು, ನಟಿಸಿದ್ದರು ಸಹ. ಕಥಕ್ ನೃತ್ಯಗಾರ್ತಿಯೂ ಆಗಿದ್ದ ಮಲ್ಲಿಕಾ ನೃತ್ಯ ಪ್ರದರ್ಶನಗಳನ್ನು ಸಹ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!