Friday, 26th July 2024

ಪವನ್ ಕಲ್ಯಾಣ್ ಆಂಧ್ರಪ್ರದೇಶದ ಸಿಎಂ: ನಟಿ ಊರ್ವಶಿ ಪೋಸ್ಟ್ ವೈರಲ್

ಹೈದರಾಬಾದ್: ನಟಿ ರ್ವಶಿ ರೌಟೇಲಾ ಅವರು ಸಿನಿಮಾ ರಿಲೀಸ್​ಗೂ ಮೊದಲು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಮಾಡಿದ ತಪ್ಪಿಗೆ ಅನೇಕರು ಟೀಕೆ ಮಾಡಿದ್ದಾರೆ.
ಒಟ್ಟಿನಲ್ಲಿ ಹೆಸರು ಚಾಲ್ತಿಯಲ್ಲಿರಬೇಕು ಎಂದು ಅವರು ಬಯಸುತ್ತಾರೆ. ಈಗ ಊರ್ವಶಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಪವನ್ ಕಲ್ಯಾಣ್ ಅವರನ್ನು ಆಂಧ್ರಪ್ರದೇಶದ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.

‘ಬ್ರೋ’ ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ. ವರುಣ್ ತೇಜ್ ಹಾಗೂ ಪವನ್ ಕಲ್ಯಾಣ್​ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ದಲ್ಲಿ ಊರ್ವಶಿ ರೌಟೇಲಾ ಕೂಡ ಅಭಿನಯಿಸಿ ದ್ದಾರೆ. ಅವರು ಸಿನಿಮಾ ರಿಲೀಸ್​ಗೂ ಮೊದಲು ಪೋಸ್ಟ್ ಒಂದನ್ನು ಹಂಚಿಕೊಂಡಿ ದ್ದಾರೆ. ಈ ಪೋಸ್ಟ್​ನಲ್ಲಿ ಅವರು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಿಗೆ ಅನೇಕರು ಟೀಕೆ ಮಾಡಿದ್ದಾರೆ.

‘ಅಕ್ಕಾ ಅವರು ಸಿಎಂ ಅಲ್ಲ. ಅವರ ಎಂಎಲ್​ಎ ಆಗೋಕೂ ಸಾಧ್ಯವಾಗಿಲ್ಲ. ನಿಮಗೆ ಒಳ್ಳೆಯ ಡಾಕ್ಟರ್ ಅವಶ್ಯಕತೆ ಇದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!