Tuesday, 27th February 2024

ಮದುವೆ ಮಂಟಪದಲ್ಲಿಯೇ ಅಗಲಿದ ನಟನಿಗೆ ಶ್ರದ್ಧಾಂಜಲಿ

ಮೈಸೂರು: ಮೈಸೂರಿನಲ್ಲಿ ನವ ದಂಪತಿಗಳು, ಮದುವೆ ಮಂಟಪದಲ್ಲಿಯೇ ಅಗಲಿದ ನಟ ಪುನೀತ್ ರಾಜ್ ಕುಮಾರ್ ಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ಶುಕ್ರವಾರ ಮೃತಪಟ್ಟ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇಡೀ ಕರುನಾಡೆ ಅವರ ನಿಧನಕ್ಕೆ ಕಂಬನಿ ಮಿಡಿಯಿತು.

ಮೈಸೂರಿನ ಸಿದ್ಧಾರ್ಥ ನಗರದಲ್ಲಿನ ಕನಕ ಭವನದಲ್ಲಿ ಮನು ಕಿರಣ್ ಹಾಗೂ ಲಾವಣ್ಯ ವಿವಾಹದ ಮದುವೆ ಸಮಾರಂಭ ನಡೆಯುತ್ತಿತ್ತು. ಮತ್ತೊಂದೆಡೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಅಂತ್ಯ ಸಂಸ್ಕಾರ ಇದೇ ಸಂದರ್ಭದಲ್ಲಿ ನಡೆಯುತ್ತಿತ್ತು. ಈ ಹಿನ್ನಲೆ ಯಲ್ಲಿ ಅವರ ಮದುವೆ ಸಮಾರಂಭದಲ್ಲೂ ಅಗಲಿದ ನಟನ ಪೋಟೋವನ್ನಿರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನೂತನ ವಧು-ವರರಷ್ಟೇ ಅಲ್ಲದೇ ಸಂಬಂಧಿಕರು, ಸ್ನೇಹಿತರಾಧಿಯಾಗಿ, ಎಲ್ಲರೂ ಮೇಣದ ಬತ್ತಿ ಹಿಡಿದು, ಅಗಲಿದ ರಾಜಕುಮಾರನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!