Sunday, 23rd June 2024

ನಟಿ ಸಂಜನಾಗೆ ಅಶ್ಲೀಲ ಸಂದೇಶ ರವಾನೆ: ಫ್ಯಾಷನ್ ಡಿಸೈನರ್ ಪುತ್ರ ವಶಕ್ಕೆ

ಬೆಂಗಳೂರು: ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಸಂದೇಶ ರವಾನಿಸಿದ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರನನ್ನು ಇಂದಿರಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫೆ. 25 ರಂದು ರಾತ್ರಿ 12 ಗಂಟೆ ಸುಮಾರಿನಲ್ಲಿ ನಟಿ ಸಂಜನಾ ಅವರಿಗೆ ಕೆಟ್ಟ ಸಂದೇಶ ರವಾನಿಸಲಾಗಿದೆ. ಅಶ್ಲೀಲ ಸಂದೇಶ, ವಾಟ್ಸಪ್ ಚಾಟ್ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಡಗಿನ ಹೋಮ್ ಸ್ಟೇ ನಲ್ಲಿದ್ದ ಪ್ರಸಾದ್ ಬಿದ್ದಪ್ಪನ ಪುತ್ರನನ್ನು ವಿಚಾರಣೆ ನಡೆಸಿದಾಗ, ನಾನು ಅಶ್ಲೀಲ ಸಂದೇಶ ರವಾನಿಸಿಲ್ಲ. ನಾನು ಸಂಜನಾ ನಂಬರ್ ಬ್ಲಾಕ್ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ನಟಿ ಸಂಜನಾ ನೀಡಿರುವ ದಾಖಲೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ.

ಸೈಬರ್ ವಂಚಕರಿಗೆ ಸಿಮ್ ಕಾರ್ಡ್ ನೀಡಿ ದೋಖಾ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.

error: Content is protected !!