Wednesday, 6th December 2023

ಇಹಲೋಕ ಯಾತ್ರೆ ಮುಗಿಸಿದ ನಟ ಶಿವರಾಂ

ಬೆಂಗಳೂರು: ಹಿರಿಯ ನಟ ಶಿವರಾಂ ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಅಪಘಾತದಿಂದಾಗಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಶಿವರಾಂ ಅವರಿಗೆ ಬ್ರೇನ್​ ಡ್ಯಾಮೇಜ್​ ಆಗಿತ್ತು. ಕಳೆದ ಎರಡು ದಿನಗಳಿಂದ ಶಿವರಾಂರನ್ನು ಬದುಕಿಸಿ ಕೊಳ್ಳಲು ಸಾಧ್ಯವಾಗಲಿಲ್ಲ.

ಹೊಸಕೇರೆಹಳ್ಳಿ ಬಳಿ ಸಂಭವಿಸಿದ ಅಪಘಾತದಿಂದ ನಟ ಶಿವರಾಂ ಕೋಮಾಗೆ ತೆರಳಿದ್ದರು. ತಲೆಗೆ ಬಲವಾದ ಏಟು ಬಿದ್ದ ಹಿನ್ನೆಲೆಯಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಚಿಕಿತ್ಸೆ ಫಲಿಸದೇ ಶಿವರಾಂ ನಿಧನರಾಗಿದ್ದಾರೆ.

1958ರಲ್ಲಿ ಸಿನಿಮಾ ಲೋಕಕ್ಕೆ ಕಾಲಿಟ್ಟ ಶಿವರಾಂ ಚಂದನವನಕ್ಕೆ ಸಾಕಷ್ಟು ಸೇವೆಗಳನ್ನು ನೀಡಿದ್ದಾರೆ. ಸಹಾಯಕ ನಿರ್ದೇಶಕ ರಾಗಿ ಸಿನಿರಂಗಕ್ಕೆ ಪಾದಾ ರ್ಪಣೆ ಮಾಡಿದ್ದ ಶಿವರಾಂ ಬಳಿಕ ಪೋಷಕ ಪಾತ್ರದಲ್ಲಿ ಮಿಂಚಿದ್ದರು. ಚಲಿಸುವ ಮೋಡಗಳು, ಶ್ರಾವಣ ಬಂತು. ಹಾಲುಜೇನು, ಹೊಂಬಿಸಲು, ಗುರು ಶಿಷ್ಯರು ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ಶಿವರಾಂ ಬಣ್ಣ ಹಚ್ಚಿದ್ದರು.

error: Content is protected !!