Friday, 24th May 2024

ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ನವಜಾತ ಶಿಶುಗಳ ಸಾವು

ಮಹಾರಾಷ್ಟ್ರ: ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸುಮಾರು 10 ನವಜಾತ ಶಿಶುಗಳು ಸಾವನ್ನಪ್ಪಿವೆ.

ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಶುಶ್ರೂಷ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಮಧ್ಯ ರಾತ್ರಿ 2 ಗಂಟೆ ಸಮಯ ದಲ್ಲಿ ಘಟನೆ ಸಂಭವಿಸಿದೆ. ದುರಂತ ನಡೆದ ನವಜಾತ ಶಿಶುಗಳ ಶುಶ್ರೂಷ ಘಟಕದಲ್ಲಿ ಒಟ್ಟು 17 ಹಸು ಗೂಸುಗಳನ್ನು ಇಡಲಾಗಿತ್ತು.

ಇನ್ನು 7 ಹಸುಗೂಸುಗಳನ್ನು ರಕ್ಷಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಸುಮಾರು 7 ಅಗ್ನಿಶಾಮಕ ವಾಹನಗಳು ಆಸ್ಪತ್ರೆ ಬಳಿ ಬಂದು 7 ಮಕ್ಕಳನ್ನು ರಕ್ಷಿಸಿದ್ದಾರೆ.

ದುರಾದೃಷ್ಟವಶಾತ್ ಇನ್ನುಳಿದ 10 ಮಕ್ಕಳನ್ನು ಕಾಪಾಡಲು ಸಾಧ್ಯವಾಗ ಲಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!