Saturday, 27th July 2024

ಅಕ್ರಮ ಗಣಿಗಾರಿಕೆ ಪ್ರಕರಣ: ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ED ಶೋಧ

ಚಂಡೀಗಢ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಬುಧವಾರ ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ಶೋಧ ನಡಿಸಿ 3.5 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕುಖ್ಯಾತ ಭೋಲಾ ಡ್ರಗ್ಸ್​, ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆ ರೋಪರ್ ಜಿಲ್ಲೆಯ 13 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಗಳಲ್ಲಿ ನಾಸಿಬ್‌ಚಂದ್ ಮತ್ತು ಶ್ರೀರಾಮ್ ಕ್ರಷರ್‌ಗಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣವು ಪಂಜಾಬ್‌ನಲ್ಲಿ 2013-14ರ ಅವಧಿಯಲ್ಲಿ ಪತ್ತೆಯಾದ ಬಹುಕೋಟಿ ಸಿಂಥೆಟಿಕ್ ಮಾದಕ ದ್ರವ್ಯ ದಂಧೆಗೆ ಸಂಬಂಧಿಸಿದೆ. ಪಂಜಾಬ್ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಪ್ರಕರಣವನ್ನು ದಾಖಲಿಸಿದೆ.

ಆಪಾದಿತ ಕಿಂಗ್‌ಪಿನ್ ಜಗದೀಶ್ ಸಿಂಗ್ ಅಲಿಯಾಸ್ ಭೋಲಾನನ್ನು ಗುರುತಿಸಲು ಈ ಪ್ರಕರಣವನ್ನು ಸಾಮಾನ್ಯವಾಗಿ ಭೋಲಾ ಡ್ರಗ್ ಕೇಸ್ ಎಂದು ಕರೆಯಲಾಗುತ್ತದೆ. ಭೋಲಾ ಅವರನ್ನು ಜನವರಿ 2014ರಲ್ಲಿ ಇಡಿ ಬಂಧಿಸಿತ್ತು.

Leave a Reply

Your email address will not be published. Required fields are marked *

error: Content is protected !!