Friday, 24th May 2024

ಇಂದೋರ್​, ಸೂರತ್​ ನಗರಗಳಿಗೆ 2020ರ ಸ್ಮಾರ್ಟ್​ ಸಿಟಿ ಗರಿ

ನವದೆಹಲಿ: ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಇಂದೋರ್​ ಹಾಗೂ ಸೂರತ್​ ನಗರಗಳನ್ನ 2020ರ ಸ್ಮಾರ್ಟ್​ ಸಿಟಿ ಮಿಷನ್​ ಸ್ಪರ್ಧೆಯ ವಿಜೇತ ನಗರಗಳು ಎಂದು ಘೋಷಣೆ ಮಾಡಿದೆ.

ಸ್ಮಾರ್ಟ್​ ಸಿಟಿ ಸ್ಪರ್ಧೆಯ ಆರನೇ ವಾರ್ಷಿಕೋತ್ಸವದ ಅಂಗವಾಗಿ, ನಡೆಸಲಾದ ಆನ್​​ಲೈನ್​ ಕಾರ್ಯಕ್ರಮದಲ್ಲಿ ವಿಜೇತರ ಪಟ್ಟಿಯನ್ನ ಘೋಷಣೆ ಮಾಡಲಾಗಿದೆ. ಉತ್ತರ ಪ್ರದೇಶ ರಾಜ್ಯ ಅಗ್ರಗಣ್ಯ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳನ್ನ ಮಧ್ಯಪ್ರದೇಶ ಹಾಗೂ ತಮಿಳುನಾಡು ಪಡೆದುಕೊಂಡಿದೆ.

ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಚಂಡೀಗಢ ಹಾಗೂ ಉತ್ತರಾಖಂಡ್​ ರಾಜ್ಯಗಳ ಹೆಸರನ್ನ ಘೋಷಿಸಿದೆ. 2019ನೇ ಸಾಲಿನಲ್ಲಿ ಸೂರತ್​​ ಮಾತ್ರ ಸ್ಮಾರ್ಟ್​ ಸಿಟಿ ನಗರದ ಪ್ರಶಸ್ತಿಯನ್ನ ಬಾಚಿಕೊಂಡಿತ್ತು. ಇದೇ ಮೊದಲ ಬಾರಿಗೆ ಸ್ಮಾರ್ಟ್​ ಸಿಟಿ ನಗರಗಳ ಆಯ್ಕೆಯನ್ನ ಪರಿಗಣಿಸಿ ರಾಜ್ಯಗಳಿಗೂ ಪ್ರಶಸ್ತಿ ನೀಡಲಾಗಿದೆ.

ಸ್ಮಾರ್ಟ್​ ಸಿಟಿ ಲೀಡರ್​ಶಿಪ್​ ವಿಭಾಗದಲ್ಲಿ ಅಹಮದಾಬಾದ್ ಪ್ರಥಮ, ವಾರಣಾಸಿ ದ್ವಿತೀಯ ಹಾಗೂ ರಾಂಚಿ ಮೂರನೇ ಸ್ಥಾನವನ್ನ ಪಡೆದುಕೊಂಡಿದೆ. ಸೂರತ್​, ಇಂದೋರ್​, ಅಹಮದಾಬಾದ್​, ಪುಣೆ, ವಿಜಯವಾಡ, ರಾಜಕೋಟ್, ವಡೋದರಾ, ವಿಶಾಖಪಟ್ಟಣಂ, ಪಿಂಪ್ರಿ- ಚಿಂಚ್ವಾಡ ಹವಾಮಾನ ಸ್ಮಾರ್ಟ್ ನಗರಗಳ ಮೌಲ್ಯಮಾಪನ ಚೌಕಟ್ಟಿನಲ್ಲಿ 4 ಸ್ಟಾರ್​ ರೇಟಿಂಗ್​ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!