Wednesday, 29th May 2024

ಮಹಾರಾಷ್ಟ್ರದ ಮಾಜಿ ಸಚಿವ ಉಂಡಾಲ್ಕರ್ ನಿಧನ

ಸತಾರಾ: ಮಹಾರಾಷ್ಟ್ರದ ಮಾಜಿ ಸಚಿವ, ಏಳು ಬಾರಿಯ ಕಾಂಗ್ರೆಸ್ ಶಾಸಕ ವಿಲಾಸ್ ಪಾಟೀಲ್ ಉಂಡಾಲ್ಕರ್(82 ವರ್ಷ) ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಉಂಡಾಲ್ಕರ್ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಕಾಕಾ ಎಂದೇ ಪ್ರಸಿದ್ದರಾಗಿದ್ದ ಉಂಡಾಲ್ಕರ್ 2014ರ ವರೆಗೆ ಖಾರದ್ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ 7 ಬಾರಿ ಆಯ್ಕೆಯಾಗಿದ್ದರು. ಈ ಕ್ಷೇತ್ರವನ್ನು ಸದ್ಯ ಪೃಥ್ವಿ ರಾಜ್ ಚೌಹಣ್ ಪ್ರತಿ ನಿಧಿಸುತ್ತಿದ್ದಾರೆ.

2014 ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿ ಪೃಥ್ವಿರಾಜ್ ಚವಾಣ್ ಗೆ ನೀಡಿತು. ಉಂಡಾಲ್ಕರ್ ಚವಾಣ್ ವಿರುದ್ಧ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!