Saturday, 27th July 2024

ದೆಹಲಿ ಚಲೋ ಪ್ರತಿಭಟನೆ ಹಿಂದೆ ನೆರೆ ದೇಶಗಳ ಕೈವಾಡ: ಸಚಿವ ದಾನ್ವೆ ಆರೋಪ

ಔರಂಗಾಬಾದ್‌: ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಕೃಷಿ ಮಸೂದೆ ವಿರೋಧಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆ ಹದಿನಾಲ್ಕನೇ ದಿನವಿಟ್ಟಿದೆ. ಈ ನಡುವೆ ಕೇಂದ್ರ ಸಚಿವ ರಾವ್ ಸಾಹೇಬ್‌ ದಾನ್ವೆ ಅವರು, ಈ ಪ್ರತಿಭಟನೆ ಹಿಂದೆ ನೆರೆ ರಾಷ್ಟ್ರ ಪಾಕಿಸ್ತಾನ ಹಾಗೂ ಚೀನಾ ದೇಶಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭವೊಂದರಲ್ಲಿ ಮಾತನಾಡಿ, ಈ ಮೊದಲು ಸಿಎಎ ಹಾಗೂ ಎನ್‌ಆರ್‌ಸಿ ಮಸೂದೆ ಜಾರಿಗೆ ವಿರೋಧಿಸಿ ಪ್ರತಿಭಟಿಸುವಂತೆ ಮುಸ್ಲಿಮರ ಎತ್ತಿ ಕಟ್ಟಿದ್ದರು. ಆದರೆ, ಆ ಪ್ರತಿಭಟನೆ ವಿಫಲವಾಗಿತ್ತು. ಈಗ ಅದೇ ರೀತಿ, ಕೃಷಿ ಮಸೂದೆ ಜಾರಿಗೆ ತರದಂತೆ ತಡೆಯಲು ದೇಶದ ರೈತರನ್ನು ಪ್ರತಿಭಟಿಸುವಂತೆ ಮಾಡುವ ಹಿಂದೆ ನೆರೆರಾಷ್ಟ್ರಗಳ ಹುನ್ನಾರವಿದೆ ಎಂದು ಸಚಿವರು ಆರೋಪಿಸಿದರು.

ರೈತರು ನಡೆಸುತ್ತಿರುವ ಪ್ರತಿಭಟನೆ ಸ್ವತಃ ರೈತರದ್ದಲ್ಲ, ಬದಲಾಗಿ ನೆರೆದೇಶಗಳ ಕುಮ್ಮಕ್ಕು ಇದೆ ಎಂದರು.

ಸಿಎಎ, ಎನ್‌ಆರ್‌ಸಿ ವಿಚಾರದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟಲಾಯಿತು. ಅವರನ್ನು ದೇಶದಿಂದ ಗಡೀಪಾರು ಮಾಡಲಾಗುವುದ. ಎಲ್ಲೂ ನೆಲೆಇಲ್ಲವಾಗುವುದು. ಆದರೆ, ಇದುವರೆಗೂ ಯಾವುದೇ ಮುಸ್ಲಿಂ ನಾಗರೀಕ ದೇಶ ಬಿಟ್ಟು ಹೋದ ದೃಷ್ಠಾಂತವಿದೆಯೇ ಎಂದು ಪ್ರಸ್ನಿಸಿದರು.

Leave a Reply

Your email address will not be published. Required fields are marked *

error: Content is protected !!