Saturday, 27th July 2024

ಅಕ್ಟೋಬರ್​ನಲ್ಲಿ ಭಾರತ್​ ಜೋಡೋ 2.0 ಯಾತ್ರೆಗೆ ರಾಹುಲ್​ ಅಣಿ

ಲಖನೌ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು 2ನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಅಕ್ಟೋಬರ್​ನಲ್ಲಿ ಆರಂಭಿಸುವ ಸಾಧ್ಯತೆ ಇದೆ.

ಗುಜರಾತ್​​ನಿಂದ ಮೇಘಾಲಯವರೆಗೆ ಯಾತ್ರೆ ನಡೆಸಲಿದ್ದಾರೆ ಎಂದು ಪಕ್ಷದ ನಾಯಕರ ಮಟ್ಟದಲ್ಲಿ ವರದಿಯಾಗಿದೆ.

ಎರಡನೇ ಹಂತದ ಭಾರತ್ ಜೋಡೋ ಕುರಿತು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ಅವರು ಕಳೆದ ಸಲ ದಕ್ಷಿಣೋತ್ತರವಾಗಿ ಯಾತ್ರೆ ನಡೆಸಿದ್ದರು. ಈ ಬಾರಿ ಪಶ್ಚಿಮದಿಂದ ಪೂರ್ವದ ರಾಜ್ಯಗಳಲ್ಲಿ ಪಾದಯಾತ್ರೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕನಿಷ್ಠ 15 ರಿಂದ 20 ದಿನಗಳ ಕಾಲ ರಾಹುಲ್ ಗಾಂಧಿ ಅವರ 2ನೇ ಹಂತದ ಭಾರತ್ ಜೋಡೋ ಯಾತ್ರೆಯು ಸಾಗಲಿದ್ದು, ರಾಜ್ಯ ಕಾಂಗ್ರೆಸ್ ಸಮಿತಿ ಸದ ಸ್ಯರು ಸಿದ್ಧತೆ ನಡೆಸಿದ್ದಾರೆ. ರಾಜ್ಯದ 30 ರಿಂದ 35 ಲೋಕಸಭಾ ಕ್ಷೇತ್ರಗಳಲ್ಲಿ ಯಾತ್ರೆ ಹಾದುಹೋಗಲಿದೆ.

ಯಾತ್ರೆಯು ಮುಖ್ಯವಾಗಿ ಬುಂದೇಲ್‌ಖಂಡದ ಮೂಲಕ ಬಿಜ್ನೋರ್, ನಗೀನಾ, ಅಮ್ರೋಹಾ, ಮೊರಾದಾ ಬಾದ್, ಸಂಭಾಲ್, ರಾಂಪುರ, ಕಾನ್ಪುರ್, ಲಖನೌ ಸೇರಿದಂತೆ ಹಲವು ಕ್ಷೇತ್ರಗಳನ್ನು ಪ್ರವೇಶಿಸಲಿದೆ.

ಇದರ ಜೊತೆಗೆ ಮುಸ್ಲಿಂ-ದಲಿತ ಜಾತಿ ಸಮೀಕರಣವನ್ನು ಒಟ್ಟುಗೂಡಿಸಿ ಪಕ್ಷವು ಈ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಯೋಜಿಸಿದೆ. ಇದಕ್ಕಾಗಿ ಯಾತ್ರೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಯಾತ್ರೆಯಲ್ಲಿ ರಾಹುಲ್ ಗಾಂಧಿ 2009ರ ಚುನಾ ವಣೆಯಂತೆ ಮತ್ತೊಮ್ಮೆ ಬಿಗಿ ಹಿಡಿತ ಸಾಧಿಸಲು ಸಾಧ್ಯವಿರುವ ಪ್ರತಿಯೊಂದು ಕ್ಷೇತ್ರವನ್ನು ಪರ್ಯಟನೆ ಮಾಡಲು ಸಜ್ಜಾಗಿ ದ್ದಾರೆ.

ಮೊದಲ ಹಂತದಲ್ಲಿ ರಾಹುಲ್​ ಗಾಂಧಿ ಅವರು ದಕ್ಷಿಣೋತ್ತರವಾಗಿ ತಮಿಳುನಾಡಿನಿಂದ ಜಮ್ಮು ಕಾಶ್ಮೀರದವರೆಗೆ ಯಾತ್ರೆ ನಡೆಸಿದ್ದರು. ಹಲವು ರಾಜ್ಯಗಳಲ್ಲಿ ಯಾತ್ರೆ ಮುನ್ನಡೆಸಿದ್ದರು. ಕರ್ನಾಟಕದಲ್ಲೂ ಯಾತ್ರೆ ನಡೆಸಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!