Wednesday, 19th June 2024

ಮುಂಗಾರಿನ ಆರ್ಭಟ: 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ವದೆಹಲಿ: ದೇಶದ ಹಲವು ಭಾಗಗಳಲ್ಲಿ ಮಂಗಳವಾರವೂ ಮುಂಗಾರಿನ ಆರ್ಭಟ ಮುಂದುವರಿದಿದ್ದು, ಕೇರಳದ 6 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.

ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಎರ್ನಾಕುಳಂ, ಕೊಟ್ಟಾಯಂ, ಇಡುಕ್ಕಿ, ತ್ರಿಶೂರ್‌, ಕಣ್ಣೂರು ಹಾಗೂ ಕಾಸರಗೋಡಿನಲ್ಲಿ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ಮುಂಬೈನಲ್ಲಿ ವರುಣಾ ಮತ್ತೆ ಮಂಗಳವಾರ ಆರ್ಭಟ ಮುಂದುವರಿಸಿ ದ್ದಾನೆ. ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಐಎಂಡಿ ಮುಂಬೈಗೆ ಹಳದಿ ಅಲರ್ಟ್‌ ನೀಡಿದೆ.

ಗುಜರಾತ್‌ನಲ್ಲಿ ಜು.6ರಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿಯೂ ಐಎಂಡಿ ಎಚ್ಚರಿಕೆ ನೀಡಿದೆ. ದೆಹಲಿ ಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿಯಬೇಕಿದ್ದ 1 ವಿಮಾನವನ್ನು ಲಖನೌಗೆ ಹಾಗೂ 2 ವಿಮಾನಗಳನ್ನು ಅಮೃತಸರ ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!