Saturday, 27th July 2024

ಕಾಂತಾರಾ ಸಿನಿಮಾ ಗೆಟಪ್ ನಲ್ಲಿ ತಹಶೀಲ್ದಾರ್…!

ಹೈದರಾಬಾದ್: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕನ್ನಡದ ಕಾಂತಾರ ವೇಷದಲ್ಲಿ ತಹಶೀಲ್ದಾರ್ ಕಾಂತಾರಾ ಆಗಮಿಸಿ ಅಧಿಕಾರಿಗಳನ್ನೇ ತಬ್ಬಿಬ್ಬುಗೊಳಿಸಿರುವ ಘಟನೆ ಆಂದ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ತೆರಿಗೆ ಇಲಾಖೆಯು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗುಂಟೂರಿನ ನಾಗಾರ್ಜುನ ಯುನಿವೆರ್ಸಿಟಿಯಲ್ಲಿ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್ ಪ್ರಸಾದ್ ರಾವ್ ಕಾಂತಾರಾ ಸಿನಿಮಾ ಗೆಟಪ್ ನಲ್ಲಿ ಆಗಮಿಸಿದ್ದಾರೆ.

ತಹಶೀಲ್ದಾರ್ ಪ್ರಸಾದ್ ರಾವ್ ವೇಷ ಕಂಡು ಅಧಿಕಾರಿಗಳು ಕಾರ್ಯಕ್ರಮದಲ್ಲಿ ನೆರೆದಿದ್ದ ವರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಾಂತಾರಾ ಚಿತ್ರದ ಡೈಲಾಗ್ ಕೂಡ ಹೇಳಿದ್ದಾರೆ. ಒಟ್ಟಾರೆ ಕನ್ನಡದ ಕಾಂತಾರಾ ದೇಶಾದ್ಯಂತ ಎಲ್ಲರನ್ನೂ ಮೋಡಿ ಮಾಡುತ್ತಿದೆ.

error: Content is protected !!