Friday, 2nd June 2023

ಸಿನಿಮಾ ಶೈಲಿಯಲ್ಲಿ ಟಿಡಿಪಿ ನಾಯಕರ ಹತ್ಯೆ

ಕರ್ನೂಲ್: ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಸಿನಿಮಾ ಶೈಲಿಯಲ್ಲಿ ಇಬ್ಬರು ಟಿಡಿಪಿ ನಾಯಕರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಆಂಧ್ರ ಪ್ರದೇಶದ ಪಣ್ಯಂ ವಿಧಾನಸಭಾ ಕ್ಷೇತ್ರದ ಗಡಿ ವೇಮುಲಾ ಮಂಡಲದ ಪೆಸರವಾಯಿ ಗ್ರಾಮದ ಸಹೋದರರಾದ ಒಡ್ಡು ನಾಗೇಶ್ವರ ರೆಡ್ಡಿ ಮತ್ತು ಅವರ ಕಿರಿಯ ಸಹೋದರ ಪ್ರತಾಪ್ ರೆಡ್ಡಿ ಅವರನ್ನು ಸಿನಿಮಾ ಶೈಲಿಯಲ್ಲಿ ಅಟ್ಟಾಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಮೃತ ಒಡ್ಡು ನಾಗೇಶ್ವರ ರೆಡ್ಡಿ ಮಾಜಿ ಸರ್ಪಂಚ್ ಆಗಿದ್ದು, ಕಿರಿಯ ಸಹೋದರ ಪ್ರತಾಪ್ ರೆಡ್ಡಿ ಕೃಷಿ ಸಹಕಾರ ಸಂಘದ ಅಧ್ಯಕ್ಷ ರಾಗಿದ್ದರು. ಪೆಸರವಾಯಿ ಗ್ರಾಮದ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಲೆ ಗೈದಿದ್ದಾರೆ. ಅದೇ ರಸ್ತೆಯಲ್ಲಿ ಸಹೋದರರು ಸಾಗುತ್ತಿದ್ದ ವೇಳೆ ಅವರ ಬೊಲೆರೊ ವಾಹನಕ್ಕೆ ದುಷ್ಕರ್ಮಿಗಳ ವಾಹನ ಢಿಕ್ಕಿ ಹೊಡೆದಿದ್ದು, ಈ ವೇಳೆ ವಾಹನದಿಂದ ಕೆಳಗೆ ಇಳಿಯುತ್ತಲೇ ಅವರನ್ನು ಅಟ್ಟಾಡಿಸಿ ಕೊಲೆಗೈಯ್ಯಲಾಗಿದೆ.

ಮೂರು ದಿನಗಳ ಹಿಂದೆ ನಿಧನರಾದ ಆಪ್ತ ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಬ್ಬರು ಸಹೋದರರು ಸ್ಮಶಾನದಿಂದ ವಾಪಸ್ ಆಗುತ್ತಿದ್ದಾಗ ಸ್ಥಳದಲ್ಲೇ ಅವಿತಿದ್ದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

error: Content is protected !!