Tuesday, 28th May 2024

ಮುಕೇಶ್‌ ಅಂಬಾನಿಯ ಮುಂಬೈ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಖ್ಯಾತಿಯ ಮುಕೇಶ್‌ ಅಂಬಾನಿಯವರ ಮುಂಬೈನ ನಿವಾಸ “ಆ0ಟಿಲಿಯಾ’ದ ಸಮೀಪ ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ವಾಹನ ಪತ್ತೆಯಾಗಿದೆ.

ಕಾರ್ಮಿಚೆಲ್‌ ರಸ್ತೆಯಲ್ಲಿ ಈ ವಾಹನ ಗುರುವಾರ ಸಂಜೆಯ ಹೊತ್ತಿಗೆ ಬಂದು ನಿಂತಿದ್ದು, ಇದನ್ನು ಗಮನಿಸಿದ ಆಯಂಟಿಲಿ ಯಾದ ಗಾರ್ಡ್‌ಗಳು ಪೊಲೀಸರಿಗೆ ಸುದ್ದಿ ತಿಳಿಸಿದರು. ತಕ್ಷಣವೇ ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳಗಳನ್ನು ಕರೆಯಿಸಿ ತಪಾಸಣೆ ನಡೆಸಿ, ವಾಹನದಲ್ಲಿದ್ದ 20 ಜಿಲೆಟಿನ್‌ ಕಡ್ಡಿಗಳನ್ನು ವಶಕ್ಕೆ ಪಡೆದುಕೊಂಡರು. ಅವುಗಳನ್ನು ಮುಂಬೈ ನಲ್ಲಿರುವ ಪ್ರಯೋಗಾಲಯಕ್ಕೆ ತಪಾಸಣೆಗಾಗಿ ಕಳುಹಿಸಲಾಯಿತು.

ಆಯಂಟಿಲಿಯಾ ನಿವಾಸದ ಕಡೆಗೆ ಹೋಗುವ ಎಲ್ಲಾ ಮಾರ್ಗಗಳನ್ನೂ ಮುಚ್ಚಲಾಗಿದ್ದು, ನಿವಾಸದ ಸುತ್ತಲಿನ ಪ್ರಾಂತ್ಯದಲ್ಲಿ ತೀವ್ರ ಶೋಧ ಆರಂಭಿಸ ಲಾಗಿದ. ಅಗತ್ಯಬಿದ್ದರೆ ಮುಕೇಶ್‌ ಕುಟುಂಬ ಸದಸ್ಯರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!