Saturday, 27th July 2024

ಸೂಟ್‌ಕೇಸ್‌ನ ತಳಭಾಗದಲ್ಲಿ ಅಡಗಿಸಿಟ್ಟ ₹34.46 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಮಂಗಳೂರು: ಸುಮಾರು ₹34.46 ಲಕ್ಷ  ಮೌಲ್ಯದ ಚಿನ್ನದೊಂದಿಗೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರನ್ನು  ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳದ ಮೊಹ್ಮದ್ ಅನ್ಸಾರ್ ಹಾಗೂ ಮೊಹಮ್ಮದ್ ಮೂಸಾ ಮಿಯಾಸ್ ಬಂಧಿತರು. ಸೂಟ್‌ಕೇಸ್‌ನ ತಳಭಾಗದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟಿದ್ದರು. ತಪಾಸಣೆಗೆ ಒಳಪಡಿಸಿದಾಗ ಒಟ್ಟು ₹ 34,46,464 ಮೌಲ್ಯದ 703 ಗ್ರಾಂ‌ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಕಸ್ಟಮ್ಸ್ ಉಪ ಆಯುಕ್ತ ಪ್ರವೀಣ ಕಂಡಿ, ಅಧಿಕಾರಿಗಳಾದ‌ ನಾಗೇಶ್ ಕುಮಾರ್, ಮನೋಕಾತ್ಯಾಯಿನಿ ಈ‌ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!