Sunday, 23rd June 2024

ಆಪ್‌ನಲ್ಲಿ ಆಂಬುಲೆನ್ಸ್-ಬುಕಿಂಗ್ ಅಂಶ ಪರಿಚಯಿಸಿದ ಆಕ್ಕೊ(ACKO)

– ಕೇವಲ 10 ನಿಮಿಷಗಳಲ್ಲಿ ಆಂಬುಲೆನ್ಸ್ ಬುಕ್ ಮಾಡಲು ನೆರವಾಗುತ್ತದೆ
– ಆಂಬುಲೆನ್ಸ್‌ಅನ್ನು ಲೈವ್-ಟ್ರ್ಯಾಕಿಂಗ್ ಮಾಡುವ ಆಯ್ಕೆ
– ಬೆಂಗಳೂರಿನಲ್ಲಿ ಸೇವೆ ಲಭ್ಯ; ಮುಂಬರುವ ವಾರಗಳಲ್ಲಿ ಚೆನ್ನೈ, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಕೋಲ್ಕತ್ತಾದಲ್ಲೂ ಲೈವ್ ಆಗುವ ಯೋಜನೆಗಳು

ಬೆಂಗಳೂರು: ತಂತ್ರಜ್ಞಾನ-ಮೊದಲು ವಿಮಾ ಸಂಸ್ಥೆಯಾದ ಆಕ್ಕೊ (ACKO), ತನ್ನ ಅನೇಕ ಕೊಡುಗೆಗಳ ಪೋರ್ಟ್‌ಫೋಲಿಯೋಗೆ, ತನ್ನ ಮೊಬೈಲ್ ಆಪ್‌ನಲ್ಲಿ ಆಂಬುಲೆನ್ಸ್ ಬುಕ್ ಮಾಡುವ ಹೊಸ ಅಂಶವೊಂದನ್ನು ಸೇರಿಸಿದೆ. ತನ್ನ ಸೇವೆಗಳನ್ನು ವಿಮಾ ಪರಿಹಾರಗಳಾಚೆ ವಿಸ್ತರಿಸುವ ಮೂಲಕ ಎಲ್ಲಾ ರಕ್ಷಣಾ ಅಗತ್ಯಗಳಿಗೆ ತಾನು ಏಕ-ನಿಲುಗಡೆ ಗಮ್ಯವಾಗಬೇಕೆಂಬ ಆಕ್ಕೊದ ದೂರದೃಷ್ಟಿಗೆ ಇದು ಅನುಗುಣವಾಗಿದೆ. ಪ್ರಸ್ತಿತ ಬೆಂಗಳೂರಿನಲ್ಲಿ ಲಭ್ಯವಿರುವ ಈ ಅಂಶವು, ಮುಂಬರುವ ವಾರಗಳಲ್ಲಿ ಚೆನ್ನೈ, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಕೋಲ್ಕತ್ತಾದಲ್ಲೂ ಲೈವ್ ಆಗಲಿದೆ.

ದೇಶದ ಮುಂಚೂಣಿ ತುರ್ತುಸ್ಥಿತಿ ಪ್ರತಿಕ್ರಿಯಾ ಸೇವಾ ಸಂಸ್ಥೆಗಳ ಪೈಕಿ ಒಂದಾದ Red.Healthನ ಸಹಭಾಗಿತ್ವದೊಂದಿಗೆ, ಈ ಅಂಶವು, ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ವ್ಯಕ್ತಿಗಳಿಗೆ ಅತಿಮುಖ್ಯವಾದ ನೆರವು ಒದಗಿಸುವ ಗುರಿ ಹೊಂದಿದೆ. ಈ ಅಂಶವನ್ನು ನಿರ್ಮಾಣ ಮಾಡುವುದಕ್ಕಾಗಿ ಬಳಸಲಾದ ಆಕ್ಕೊದ ಅತ್ಯಾಧುನಿಕ ತಂತ್ರಜ್ಞಾನವು, ಜನರು ಆಂಬುಲೆನ್ಸ್‌ಅನ್ನು ಶೀಘ್ರವಾಗಿಯೂ ತಡೆರಹಿತವಾಗಿಯೂ ಪಡೆದುಕೊಳ್ಳಲು ನೆರವಾಗುತ್ತದೆ. 3000 ವಾಹನಗಳ ಪ್ರಬಲ ಕಾರ್ಯಜಾಲದಿಂದ ಹತ್ತಿರದ ಆಂಬುಲೆನ್ಸ್ ಪಡೆದುಕೊಳ್ಳಲು ನೆರವಾಗುವ ಈ ಆಪ್, ಕೇವಲ ಮೂರು ನಿಮಿಷಗಳೊಳಗೆ ಚಾಲಕರ ವಿವರಗಳನ್ನು ಹಂಚಿಕೊಳ್ಳುತ್ತದೆ. ಮೇಲಾಗಿ, ವಾಸ್ತವ-ಸಮಯ ಟ್ರ್ಯಾಕಿಂಗ್‌ನ ವಿಶಿಷ್ಟ ಯೋಜನೆಯು, ಒತ್ತಡಪೂರ್ವಕವಾದ ಹಾಗೂ ಅಧೀರ ಪರಿಸ್ಥಿತಿ ಗಳಲ್ಲಿ ಮನಶ್ಶಾಂತಿ ಒದಗಿಸುತ್ತದೆ. ಗ್ರಾಹಕರು ಆಂಬುಲೆನ್ಸ್‌ನ ನಿಖರ ಲೊಕೇಶನ್‌ಅನ್ನು ಮ್ಯಾಪ್ ಮೇಲೆ ನೋಡಿ, ಅದರ ಆಗಮನದ ಅಂದಾಜು ಸಮಯವನ್ನು ಲೆಕ್ಕ ಹಾಕಬಹುದಾದ್ದರಿಂದ, ಆತಂಕದ ಸಮಯದಲ್ಲಿ ಅವರಿಗೆ ನೆಮ್ಮದಿ ಒದಗಿಸಿ, ತಮ್ಮ ಪ್ರೀತಿಪಾತ್ರರ ಕ್ಷೇಮದ ಮೇಲೆ ಗಮನ ಕೇಂದ್ರೀ ಕರಿಸಲು ಮನಶ್ಶಾಂತಿ ನೀಡುತ್ತದೆ. ಈ ಆವಿಷ್ಕಾರವು, ವ್ಯಕ್ತಿಗಳಿಗೆ ಪಾರದರ್ಶಕತೆ ಖಾತರಿಪಡಿಸಿ, ತುರ್ತುಸ್ಥಿತಿಗಳಲ್ಲಿ ವಿಶೇಷವಾಗ್ಇ ಅವರಿಗೆ ತಡೆಯಿ ಲ್ಲದ ಮತ್ತು ತೊಂದರೆಯಿಲ್ಲದ ಅನುಭವ ಒದಗಿಸುತ್ತದೆ.

ಆಕ್ಕೊದ ಸಮಗ್ರ ವೇದಿಕೆಯ ಮೇಲಿರುವ ಆಂಬುಲೆನ್ಸ್ ಬುಕಿಂಗ್ ಅಂಶವು, ಅನುಕೂಲಕರವಾದ ಆರೋಗ್ಯಶುಶ್ರೂಷಾ ಪರಿಹಾರಗಳನ್ನು ಒದಗಿಸುವ ಮೂಲಕ ಬಳಕೆದಾರ-ಸುರಕ್ಷತೆ ಹಾಗೂ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಈ ಕ್ರಮವು, ಹೊಸ ಯುಗದಲ್ಲಿ ತುರ್ತುಸ್ಥಿತಿ ಆರೋಗ್ಯ ಶುಶ್ರೂಷೆ ಯನ್ನು ಪರಿವರ್ತಿಸುವ ಗುರಿ ಹೊಂದಿರುವುದರ ಜೊತೆಗೆ, ವಾಸ್ತವ-ಜೀವನದ ತುರ್ತುಸ್ಥಿತಿಗಳ ಪರಿಸ್ಥಿತಿಗೆ ಪರಿಹಾರ ಒದಗಿಸಬೇಕೆನ್ನುವ ಸಂಸ್ಥೆಯ ಬದ್ಧತೆಯನ್ನೂ ಪ್ರದರ್ಶಿಸುತ್ತದೆ.

ಆಕ್ಕೊದ ಆಂಬುಲೆನ್ಸ್ ಬುಕಿಂಗ್ ಅಂಶವನ್ನು ವಿಶೇಷಗೊಳಿಸುವ ಕಾರಣಗಳು:
● ವ್ಯಾಪಕ ಕಾರ್ಯಜಾಲ: ಉಪಕ್ರಮದಡಿ ಐದು ನಗರಗಳಾದ್ಯಂತ 3000 ಆಂಬುಲೆನ್ಸ್‌ಗಳು
● ತಡೆರಹಿತ ಬುಕಿಂಗ್: ACKO ಆಪ್ ಮೂಲಕ ಫೋನ್‌ನಲ್ಲಿ ಕೆಲವೇ ಕ್ಲಿಕ್‌ಗಳೊಂದಿಗೆ ಆಂಬುಲೆನ್ಸ್ ಪಡೆದುಕೊಳ್ಳಬಹುದು
● ವಾಸ್ತವ-ಸಮಯ ಟ್ರ್ಯಾಕಿಂಗ್: ಗಂಭೀರ ಪರಿಸ್ಥಿತಿಗಳಲ್ಲಿ ಹೆಚ್ಚಿನ ಮನಶ್ಶಾಂತಿಗಾಗಿ ಆಂಬುಲೆನ್ಸ್‌ನ ವಾಸ್ತವ-ಸಮಯದ ಆಗಮನವನ್ನು ಟ್ರ್ಯಾಕ್ ಮಾಡಬಹುದು.
● ಬಳಕೆದಾರ-ಕೇಂದ್ರಿತ ವಿನ್ಯಾಸ: ಸುಲಭವಾಗಿ ಬಳಸುವುದಕ್ಕಾಗಿಯೇ ಆಕ್ಕೊ ಆಪ್ ವಿನ್ಯಾಸಗೊಂಡಿರುವುದರಿಂದ, ಒತ್ತಡಪೂರ್ವಕ ಕ್ಷಣಗಳಲ್ಲೂ ಸರಳವಾದ ಅನುಭವ ಖಾತರಿಪಡಿಸುತ್ತದೆ.

ವೈದ್ಯಕೀಯ ತುರ್ತುಸ್ಥಿತಿಗಳು, ಕ್ಷಿಪ್ರ ಪ್ರತಿಕ್ರಿಯೆ ಹಾಗೂ ಸಮಯಕ್ಕೆ ಸರಿಯಾದ ಗಮನವು ಕೇಂದ್ರಬಿಂದುವಾಗಿರುವಂತಹ ಕ್ಷೇತ್ರವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಆಂಬುಲೆನ್ಸ್ ಸೇವೆಗಳು, ನಿರ್ಲಕ್ಷಿತ ಕ್ಷೇತ್ರವಾಗಿಯೇ ಉಳಿದು, ಪರಿಸ್ಥಿತಿಗಳನ್ನು ದಾಟಲು ಜನರು ಬಹಳ ಕಷ್ಟಪಡಬೇಕಾದ ಕಾಲದ ಪೈಕಿ ಒಂದಾಗಿದೆ. ತುರ್ತುಸ್ಥಿತಿಗಳಲ್ಲಿ ಗಂಭೀರವಾದ ನೆರವು ಒದಗಿಸಲು ತಂತ್ರಜ್ಞಾನವನ್ನು ವರ್ಧಿಸುವ ಮೂಲಕ ಆಕ್ಕೊ, ಬಳಕೆದಾರ ಸುರಕ್ಷತೆ ಹಾಗೂ ಸಂತೃಪ್ತಿಗೆ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸಿದೆ.

ಆಂಬುಲೆನ್ಸ್-ಬುಕಿಂಗ್ ಅಂಶವು, ನಿಜಜೀವನದ ಸಮಸ್ಯೆಗಳಿಗೆ ವಾಸ್ತವ ಪರಿಹಾರಗಳನ್ನು ಒದಗಿಸಲು ಸಾಂಪ್ರದಾಯಿಕ ನಿಯಮಗಲಾಚೆ ಹೋಗುವ ಭವಿಷ್ಯಮುಖಿ ಆಲೋಚನೆಯಿರುವ ವಿಮಾ ಸಂಸ್ಥೆಯಾಗಿ ಸಂಸ್ಥೆಯ ಸ್ಥಾನವನ್ನು ಪುನರುಚ್ಚರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!