
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ಜಿಲ್ಲೆಯ ೧೧ ಕ್ಷೇತ್ರಗಳಲ್ಲಿ ೨ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ಉಳಿದ 9 ರಲ್ಲಿ ತುಮಕೂರು ನಗರ ಮತ್ತು ಚಿಕ್ಕನಾಯಕನಹಳ್ಳಿ ಯಲ್ಲಿ ಜೆಡಿಎಸ್ ಪಕ್ಷದಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಟಿಕೇಟ್ ಘೋಷಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇದುವರೆಗೂ ಒಬಿಸಿ ಅವರಿಗೆ ಟಿಕೆಟ್ ನೀಡಿಲ್ಲ ಎಂದು ದೂರಿದರು.
ಬಿಜೆಪಿಯಿಂದ ತುಮಕೂರು ನಗರ ಕ್ಷೇತ್ರದಿಂದ ಡಾ.ಎಂ.ಆರ್.ಹುಲಿನಾಯ್ಕರ್, ಶಿರಾದಿಂದ ಬಿ.ಕೆ.ಮಂಜುನಾಥ್, ಗುಬ್ಬಿಯಿಂದ ಬೆಟ್ಟಸ್ವಾಮಿ ಅವರುಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್ ನಿಂದ ಚಿಕ್ಕನಾಯಕನಹಳ್ಳಿ ಯಿಂದ ರೇಣುಕಯ್ಯ ಉಪ್ಪಾರ, ವೈ.ಸಿ.ಸಿದ್ದರಾಮಯ್ಯ, ಶಿರಾದಿಂದ ಸಾಸಲು ಸತೀಶ್ ಅವರುಗಳು ಆಕಾಂಕ್ಷಿ ಗಳಾಗಿದ್ದಾರೆ.
ಕಾಂಗ್ರೆ ಸ್ ಈಗಾಗಲೇ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕೂಡಲೆ ಪಟ್ಟಿಯನ್ನು ಮರುಪರಿಶೀಲನೆಗೆ ಒಳಪಡಿಸಿ ಚಿಕ್ಕನಾಯಕನಹಳ್ಳಿಯಿಂದ ರೇಣುಕಯ್ಯ ಉಪ್ಪಾರ ಅಥವಾ ವೈ.ಸಿ.ಸಿದ್ದರಾಮಯ್ಯ ಅವರಿಗೆ,ಹಾಗೆಯೇ ಶಿರಾದಲ್ಲಿ ಸಾಸಲು ಸತೀಶ್ ಅವರಿಗೆ ಟಿಕೆಟ್ ನೀಡಬೇಕೆಂದು ಸಮಿತಿಯ ಪುಟ್ಟರಾಜು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ಸಮುದಾಯದ ಮುಖಂಡರಾ ಈರಣ್ಣ ಕೆಂಪನದೊಡ್ಡೇರಿ, ರೇಣುಕಯ್ಯ ಉಪ್ಪಾರ, ಗರುಡಯ್ಯ,ಮಂಜುನಾಥ್, ರಾಜೇಶ್ ದೊಡ್ಮನೆ ಹಲವರು ಉಪಸ್ಥಿತರಿದ್ದರು.