Tuesday, 27th February 2024

10 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಚಿಕ್ಕಜಾಲ ಠಾಣೆ ಇನ್ಸ್ಪೆಕ್ಟರ್

ACB Raid

ಬೆಂಗಳೂರು: ಜಮೀನು ಅತಿಕ್ರಮ ಪ್ರವೇಶ ಪ್ರಕರಣ ಸಂಬಂಧಿಸಿ ದೂರಿನ ಸಂಬಂಧ ತನಿಖೆ ನಡೆಸಲು 10 ಲಕ್ಷ ರೂ. ಲಂಚ ಕೇಳಿದ್ದ ಚಿಕ್ಕಜಾಲ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ.

ನಗರದ ಚಿಕ್ಕಜಾಲ ಠಾಣೆ ವ್ಯಾಪ್ತಿಯ ನಿವಾಸಿ, ತಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿದ ಕೆಲವರು ಅಲ್ಲಿ ಅಳವಡಿಸಿದ್ದ ಬೋರ್ಡ್‍ಗಳನ್ನು ಕಿತ್ತುಹಾಕಿದ್ದರು ಎಂದು ದೂರು ನೀಡಿದ್ದರು. ಈ ಸಂಬಂಧ ಇನ್ಸ್‍ಪೆಕ್ಟರ್ 10 ಲಕ್ಷ ರೂ. ಲಂಚದ ಬೇಡಿಕೆ ಮುಂದಿಟ್ಟು 8 ಲಕ್ಷ ರೂ. ಪಡೆದು ನಂತರ ಉಳಿದ 2 ಲಕ್ಷಕ್ಕೆ ಒತ್ತಾಯಿಸಿ ದ್ದರು.

ಇನ್ಸ್ ಪೆಕ್ಟರ್ ರಾಘವೇಂದ್ರ ಅವರು ಖಾಸಗಿ ವ್ಯಕ್ತಿಯಾದ ರಾಘವೇಂದ್ರ ಎಂಬುವವರಿಂದ 2 ಲಕ್ಷ ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ. ಇನ್ಸ್’ಪೆಕ್ಟರ್ ರಾಘವೇಂದ್ರ ಅವರ ಜತೆ ಖಾಸಗಿ ವ್ಯಕ್ತಿಯನ್ನು ಕೂಡ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!