Saturday, 10th June 2023

576 ಮೆಟ್ಟಿಲು ಹತ್ತಿ ಅಂಜನಾದ್ರಿ ದರ್ಶನ ಪಡೆದ ವಿಜಯೇಂದ್ರ

ಕೊಪ್ಪಳ: ಇದೇ ಮೊದಲ ಬಾರಿಗೆ ಪೌರಾಣಿಕ ಸ್ಥಳ ಹನುಮ ಜನಿಸಿದ ಅಂಜನಾದ್ರಿ ದರ್ಶನ ಪಡೆಯಲು ಅಂಜನಾದ್ರಿ ಬೆಟ್ಟಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ 576 ಮೆಟ್ಟಿಲು ಹತ್ತಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ, ಆರತಿ ಬೆಳಗಿ ವಿಜಯೇಂದ್ರರನ್ನು ಸ್ವಾಗತಿಸಿದರು. ಈ ವೇಳೆ ಹೂ ಮಳೆ ಸುರಿಸಿ, ಸಕಲ ಮಂಗಳ ವಾದ್ಯಗಳ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.

error: Content is protected !!