Sunday, 21st April 2024

ಸ್ವಗ್ರಾಮದಲ್ಲಿ ಮಾಜಿ ಸಂಸದ ಎಚ್​.ಬಿ. ಪಾಟೀಲ ಅಂತ್ಯ ಸಂಸ್ಕಾರ

ಬಾಗಲಕೋಟೆ: ಮಾಜಿ ಸಂಸದ ಎಚ್​.ಬಿ. ಪಾಟೀಲ (80 ) ಅವರು ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಪಾಟೀಲ ಅವರನ್ನ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಬುಧವಾರ ಸ್ವಗ್ರಾಮ ಬಾದಾಮಿ ತಾಲೂಕಿನ ರಡ್ಡೇರ ತಿಮ್ಮಾಪುರದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಪಾಟೀಲ ಅವರಿಗೆ ಪತ್ನಿ, ಐವರು ಪುತ್ರಿಯರು, ಪುತ್ರ ಇದ್ದಾರೆ.

1942ರ ಮಾರ್ಚ್​ 29ರಂದು ಜನಿಸಿದ ಎಚ್​.ಬಿ. ಪಾಟೀಲ ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ, ರಾಮದುರ್ಗದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಸ್ನಾತಕೋತ್ತರ(ಎಂಎ) ಪದವಿ ಪಡೆದಿದ್ದರು. ಶಿಕ್ಷಣ ನಂತರ ಕೃಷಿ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದರು. ಸ್ನೇಹಿತರ ಒತ್ತಾಯಕ್ಕೆ ಮಣಿದು ಬಾದಾಮಿ ತಾಲೂಕು ಬೋರ್ಡ್​ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು.

1984ರ ಡಿಸೆಂಬರ್​ನಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯಥಿರ್ಯಾಗಿ ಸ್ಪರ್ಧಿಸಿದ್ದ ಗೆಲುವು ಸಾಧಿಸಿದ್ದರು.

error: Content is protected !!