Saturday, 10th June 2023

ನದಿಗೆ ನೀರು ಹಂಪಿ ಸ್ಮಾರಕ ಜಲಾವೃತ

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಿದ ಹಿನ್ನೆಲೆ ವಿಶ್ವವಿಖ್ಯಾತ ಹಂಪಿ ಹಲವು ಸ್ಮಾರಕಗಳು ಭಾನುವಾರ ಜಲಾವೃತಗೊಂಡಿವೆ.

ಹಂಪಿಯ ಶ್ರೀಪುರಂದರ ಮಂಟಪ ಭಾಗಶಃ ಜಲಾವೃತಗೊಂಡಿದ್ದು ಸುತ್ತಮುತ್ತಲಿನ ಮಂಟಪಗಳು ಜಲಾವೃತಗೊಂಡಿವೆ. ವಿರೂಪಾಕ್ಷ ದೇಗುಲ ಸಮೀಪದ ಸ್ನಾನಘಟ, ವೈದಿಕ ಮಂಟಪಗಳು ನೀರಿನಿಂದ ಸುತ್ತವರಿದಿವೆ.

ಜಲಾಶಯ ಕ್ಕೆ‌ಹೆಚ್ವಿನ ಪ್ರಮಾಣದಲ್ಲಿ ನೀರು ಹರಿದು ಬರಿತ್ತಿದ್ದು ಮತ್ತಷ್ಟು ನೀರು ನದಿಗೆ ಬಿಡುವ ಸಾಧ್ಯತೆ ಇದೆ.

error: Content is protected !!