Tuesday, 20th February 2024

6 ಮಂದಿ ಜಿಂಕೆ ಬೇಟೆಗಾರರ ಬಂಧನ

ತುಮಕೂರು : ಜಿಂಕೆ ಬೇಟೆಯಾಡಲು ತೆರಳಿದ್ದ ಆರು ಜನರನ್ನ ಶಿರಾ ತಾಲ್ಲೂಕಿನ ಪಟ್ಟ ನಾಯಕನಹಳ್ಳಿ ಪೊಲೀಸರು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

ಆರೋಪಿಗಳು ಗುಬ್ಬಿ ಮೂಲದವರಾಗಿದ್ದು ಮಾರುತಿ ಹೋಟೆಲ್ ಮಾಲೀಕ ನವೀನ, ಪಟ್ಟಣ ಪಂಚಾಯ್ತಿ ಸದಸ್ಯ ಮೊಹಮದ್ ಸಾದೀಕ್ ಅವರ ಮಗ ರೇಹಾನ್, ಶುಜಾತ್, ಕಿರಣ, ಶ್ರೀಧರ, ರಾಜೀವ್ ಬಂಧಿತರು.

ಸೆ 29 ರಂದು ಬೆಳಗಿನ ಜಾವ 3.35 ರ ಸಮಯದಲ್ಲಿ ಶಿರಾ ತಾಲ್ಲೂಕಿನ ಪಟ್ಟನಾಯನಕಹಳ್ಳಿ ಸಮೀಪ ಮುದ್ದನಹಳ್ಳಿ ಬಳಿ ಜಿಂಕೆ ಬೇಟೆಯಾಡಲು ಹೊಂಚುಹಾಕಿದ್ದರು. ಬಂದೂಕಿನಿಂದ ಜಿಂಕೆಗೆ ಒಂದು ಸುತ್ತು ಫೈರಿಂಗ್ ಮಾಡಿದ್ದರು. ಪೈರಿಂಗ್ ಶಬ್ದ ತಿಳಿದು ಅನುಮಾನಗೊಂಡ ಸ್ಥಳೀಯರು ಪಟ್ಟನಾಯನಕಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಾರ್ಯಪ್ರವೃತ್ತರಾದ ಪಿ ಎಸ್ ಐ ದೃವಾಚಾರ್ಯ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಆರು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಜಿಲ್ಲೆಯ ವಿವಿಧೆಡೆ ಜಿಂಕೆ ಸೇರಿದಂತೆ ಕಾಡುಪ್ರಾಣಿಗಳನ್ನು ಬೇಟೆಯಾಡಿ ರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!