Thursday, 22nd February 2024

ನಿಯಮ ಉಲ್ಲಂಘಿಸಿ ಪರವಾನಗಿ: ಲೋಕಾಯುಕ್ತರಿಗೆ ದೂರು

ಶಹಾಪುರ : ನಗರದಲ್ಲಿ ಸಿ. ಎಲ್ -7 ( ಹೋಟಲ್ ಮತ್ತು ವಸತಿ ಗೃಹದಲ್ಲಿ ಮದ್ಯ ಮಾರಾಟ ) ಮಾರ್ಗಸೂಚಿ ಉಲ್ಲಂಘಿಸಿ ನಕಲಿ ದಾಖಲೆಗಳ ಮೇಲೆ ಅಬಕಾರಿ ಇಲಾಖೆಯು ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿ ಪರವಾನಿಗೆ ನೀಡಿದ ಹಿಂದಿನ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹಾಗೂ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ಇಂದು ಮತಿ ವಿರುದ್ಧ ಶನಿವಾರ ಉಪ ಲೋಕಾಯುಕ್ತ ಕೆ.ಎನ್ ಫಣಿಂದ್ರ ಅವರಿಗೆ ಮಾಹಿತಿ ಹಕ್ಕು ಕಾರ್ಯಕರ್ತ ಮಾನಪ್ಪ ಹಡಪದ  ದೂರು ಸಲ್ಲಿಸಿದರು.

ಸಿಎಲ್ -7 ಪರವಾನಿಗೆ ಪಡೆಯಲು ನಗರ ಸಭೆಯ ನಕಲಿ ದಾಖಲೆಗಳು ಹಾಗೂ ಅಗ್ನಿಶಾಮಕ ಇಲಾಖೆಯ ಎನ್ ಓ ಸಿ ನಗರ ಯೋಜನಾ ಪ್ರಾಧಿಕಾರದಿಂದ  ಆಸ್ತಿಯ ತಾಂತ್ರಿಕ ಮಂಜುರಾತಿ, ಲೋಕೋಪಯೋಗಿ ಇಲಾಖೆಯಿಂದ   ರಾಜ್ಯ ಹೆದ್ದಾರಿಯ ಪ್ರಾಧಿಕಾರದಿಂದ  ಅಂತರ  ಪ್ರಮಾಣ ಪತ್ರ ಪಡೆಯದೆ ನಕಲಿ ದಾಖಲೆಗಳನ್ನು ಅಬಕಾರಿ ನಿರೀಕ್ಷಕರ ಕಾರ್ಯಾಲಯದಿಂದ ಅಬಕಾರಿ ಆಯುಕ್ತರಿಗೆ ಪ್ರಸ್ತಾವ ಸಲ್ಲಿಕೆ ಆಗಿರುತ್ತದೆ. ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಉಪ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!