Sunday, 23rd June 2024

ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು : ಡಾ.ಪರಮೇಶ್

ತುಮಕೂರು: ದೈನಂದಿನ ಜೀವನದಲ್ಲಿ ಉತ್ತಮ ಆರೋಗ್ಯ ಪಡೆಯಬೇಕೆಂದರೆ ಕೈಗಳ ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.

ಅಂತರಾಷ್ಟ್ರೀಯ ಹ್ಯಾಂಡ್ ಹೈಜಿನ್ ಡೇ ಅಂಗವಾಗಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಸ್ಚಚ್ಛ ಕೈ ಕೈಗಳು ಹಾಗೂ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಯಲು ಕೈಗಳ ಸ್ವಚ್ಛತೆ ಬಹುಮುಖ್ಯವಾಗಿದೆ.ಒಂದು ಸಂಶೋಧನೆಯ ಪ್ರಕಾರ ನಮ್ಮ ದೇಶದ ಶೇ.40ರಷ್ಟು ಜನರು ಊಟಕ್ಕಿಂತ ಮುಂಚೆ ಕೈ ತೊಳೆದುಕೊಳ್ಳುವುದಿಲ್ಲ. ಒಂದು ವೇಳೆ ನಾವು ಕೈ ತೊಳೆದುಕೊಳ್ಳುವ ಪ್ರಕ್ರಿಯೆಯನ್ನು ಪರಿಪೂರ್ಣ ಪ್ರಾಮಾಣಿಕತೆಯಿಂದ ನರೆವೇರಿಸಿದರೆ ನಮ್ಮನ್ನು ನಾವು ಹಲವು ರೋಗಗಳಿಂದ ರಕ್ಷಿಸಿಕೊಳ್ಳಬಹುದು ಎಂದರು.

ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ಅಧ್ಯಯನದ ಪ್ರಕಾರ ಪ್ರತಿಯೊಬ್ಬರೂ  ಕೈತೊಳೆದುಕೊಂಡರೆ, ವರ್ಷಕ್ಕೆ 1 ಮಿಲಿಯನ್ ಸಾವುಗಳನ್ನು ತಡೆಯಬಹುದು.  ಆಹಾರದಿಂದ ಹರಡುವ ರೋಗಗಳು ಬಹುತೇಕ ಕಲುಷಿತ ಕೈಗಳಿಂದ ಹರಡುತ್ತವೆ. ಕೈ ತೊಳೆಯುವ ಮೂಲಕ ಆಹಾರದಿಂದ ಹರಡುವ ಅನಾರೋಗ್ಯ ಮತ್ತು ಇತರ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದರು.

ಮೆಡಿಕಲ್ ಕಾಲೇಜು, ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ದಾದಿಯರಿಂದ  ಕೈಗಳ ಸ್ವಚ್ಛತೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನಡೆಯಿತು.ವೈದ್ಯಕೀಯ ಅಧೀಕ್ಷಕರಾದ ಡಾ.ನಿರಂಜನಮೂರ್ತಿ,ಸಿದ್ಧಗಂಗಾ ಆಸ್ಪತ್ರೆ ಸಿಇಓ‌ ಡಾ.ಸಂಜೀವಕುಮಾರ್,ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ,
ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ರೇಣುಕಾ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!