Saturday, 23rd September 2023

ಸಿದ್ಧಗಂಗಾ ಮಠಕ್ಕೆ ಮನೋಜ್ ಕುಮಾರ್ ಉತ್ತರಾಧಿಕಾರಿ 

ತುಮಕೂರು : ನಾಡಿನ ಪ್ರಸಿದ್ಧ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್ ಇವರನ್ನು ನೇಮಕ ಮಾಡಲಾಗಿದೆ.
ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಷಡಕ್ಷರಯ್ಯ, ವಿರುಪಾಕ್ಷಮ್ಮ ದಂಪತಿಗಳ ಪುತ್ರನಾದ ಮನೋಜ್ ಕುಮಾರ್ ಅವರು ಬಿಎಸ್ಸಿ ಬಿಎಡ್, ಎಂಎಸ್ಸಿ ಎಂಎ. ವಿದ್ವತ್ ವಿದ್ಯಾಭ್ಯಾಸ ಪಡೆದಿದ್ದಾರೆ. ಪ್ರಸ್ತುತ ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಏ.೨೩ ಅಕ್ಷಯ ತೃತೀಯದಂದು ಸಿದ್ಧಗಂಗಾ ಮಠದಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮ ಹಮ್ಮಿ ಕೊಳ್ಳುವ ಮೂಲಕ ಅಂದು ಉತ್ತರಾಧಿಕಾರಿ ನೇಮಕ ಮಾಡಲಾಗುವುದು ಹಾಗೂ ಸಿದ್ಧಗಂಗಾ ಮಠದ ಶಾಖಾ ಮಠಗಳಾದ ಕಂಚುಗಲ್ ಬಂಡೆ ಮಠಕ್ಕೆ ಉತ್ತರಾಧಿಕಾರಿಯಾಗಿ ಹರ್ಷ ಅವರನ್ನು ಬಸವ ಕಲ್ಯಾಣ ಮಠಕ್ಕೆ ಉತ್ತರಾಧಿಕಾರಿಯಾಗಿ ಗೌರೀಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
error: Content is protected !!