Saturday, 27th July 2024

ಎರಡನೇ ಬಾರಿಗೆ ಪ್ಯಾರಿಸ್‌ ಲಾಕ್​ಡೌನ್​ : ಫ್ರಾನ್ಸ್​ ಸರ್ಕಾರ

ಪ್ಯಾರಿಸ್​: ಒಂದು ಲಾಕ್​ಡೌನ್​ ಮಾಡಿ, ಕಂಗಾಲಾಗಿದ್ದ ದೇಶಗಳು ಇದೀಗ ಎರಡನೇ ಬಾರಿಗೆ ಲಾಕ್​ಡೌನ್​ ಯೋಚನೆ ಮಾಡಲಾರಂಭಿಸಿವೆ.

ಫ್ರಾನ್ಸ್​ನಲ್ಲಿ ರೂಪಾಂತರಿ ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಲಾಕ್​ಡೌನ್​ ಜಾರಿ ಮಾಡ ಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಬೇರಾವುದನ್ನೂ ತೆರೆಯುವುದಕ್ಕೆ ಅವಕಾಶವಿಲ್ಲ. ಎಲ್ಲ ಕಚೇರಿಗಳನ್ನೂ 6 ಗಂಟೆಯೊಳಗೆ ಮುಚ್ಚಬೇಕು ಎಂದು ಫ್ರಾನ್ಸ್​ ಸರ್ಕಾರ ಆದೇಶಿಸಿದೆ.

ಬೇರೆ ದೇಶಗಳಿಂದ ಫ್ರಾನ್ಸ್​ಗೆ ಬರುವವರು ಕರೊನಾ ನೆಗೆಟಿವ್​ ವರದಿ ತರುವುದು ಕಡ್ಡಾಯ ಮತ್ತು ಅವರು ಒಂದು ವಾರದ ಕ್ವಾರಂಟೈನ್​ಗೆ ಒಳಗಾಗಲೇಬೇಕು ಎನ್ನುವ ನಿಯಮ ಜಾರಿಗೊಳಿಸಲಾಗಿದೆ. ಕರೊನಾದಿಂದಾಗಿ ಮೃತರಾದವರ ಪಟ್ಟಿಯಲ್ಲಿ ನಮ್ಮ ದೇಶ 7ನೇ ಸ್ಥಾನದಲ್ಲಿದೆ. ಅನೇಕ ದೇಶಗಳಿಗಿಂತ ಸುರಕ್ಷಿತ ಸ್ಥಾನದಲ್ಲಿ ನಾವಿದ್ದೇವಾದರೂ ಈ ಹಂತದಲ್ಲಿಯೇ ಮುಂಜಾಗ್ರತೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಫ್ರಾನ್ಸ್​ ಸರ್ಕಾರ ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!