Friday, 21st June 2024

ಕಂಠೀರವದಲ್ಲಿ ಶಬಾಷ್‌ ಬಡ್ಡಿಮಗ್ನೆ

ಕಾಂತಾರದಲ್ಲಿ ನಟಿಸಿ ಕಣ್ಮನ ಸೆಳೆದ ನಟ ಪ್ರಮೋದ್ ಶೆಟ್ಟಿ ಲಾಫಿಂಗ್ ಬುದ್ದ, ಕಾಶಿಯಾತ್ರೆ ಚಿತ್ರಗಳಲ್ಲಿ ನಾಯಕನಾಗಿ ನಟಿಸು ತ್ತಿದ್ದಾರೆ. ಅದರ ಜತೆಗೆ ಶಭಾಷ್ ಬಡ್ಡಿಮಗ್ನೆ ಸಿನಿಮಾದಲ್ಲಿಯೂ ಹೀರೋ ಆಗಿ ತೆರೆಗೆ ಬರುತ್ತಿದ್ದಾರೆ.

ಈ ಚಿತ್ರದ ಮಹೂರ್ತ ಸಮಾರಂಭ ಕಂಠೀರವ ಸ್ಟುಡಿಯೊದಲ್ಲಿ ನಡೆಯಿತು. ನಟ ಅಜಯ್ ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ಹರೀಶ್.ಸಾ.ರಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರಕಾಶ್ ಪ್ರಥಮ, ಕಿಶನ್ ಪ್ರೊಡಕ್ಷನ್‌ನಲ್ಲಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶಭಾಷ್ ಬಡ್ಡಿಮಗ್ನೆ ಅಂತ.. ಬಾಯ್ತುಂಬಾ ಹೊಗ್ಳೋದಾ, ಎಲ್ಲಾ ತೆಗ್ಳೋದಾ .. ಎಂದು ಅಡಿಬರಹವಿದೆ. ಇದನ್ನು ನೋಡಿದರೆ ಇದು ಕಾಮಿಡಿ ಕಥೆಯ ಚಿತ್ರ ಅನ್ನಿಸುತ್ತದೆ.

ಹಾಸ್ಯದ ಜತೆಗೆ, ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕಥೆಯೂ ಚಿತ್ರದಲ್ಲಿದೆ. ಎಂಬತ್ತರ ಕಾಲ ಘಟ್ಟದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿ ಗೆರೆದಲ್ಲಿ ನಡೆದಂತಹ ನೈಜ ಘಟನೆಯನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಹಾಗಾಗಿ ಚಿಕ್ಕಮಗಳೂರು ಸುತ್ತಮುತ್ತ ಭಾಗದಲ್ಲೆ ನಲವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿ ದೆ. ತರಲೆ ಮಾಡುವ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸು ತ್ತಿದ್ದಾರೆ.

ಚಿತ್ರದ ನಾಯಕಿಯಾಗಿ ಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ರಂಗಾಯಣ ರಘು, ರಾಹುಲ್, ರವಿತೇಜ, ಲಕ್ಷೀಪ್ರಿಯ ಸಾಹು, ಮನು, ಅಜಯ್, ಮಿತ್ರ, ರೂಪಾ, ಸುಧಾಮಣಿ, ಇಂದಿರಮ್ಮಾ, ಮಮತಾ ರಾಜಶೇಖರ್ ಚಿತ್ರದ ತಾರಬಳಗದಲ್ಲಿದ್ದಾರೆ. ಕಾರ್ತಿಕ್ ಭೂಪತಿ ಸಂಗೀತ ಸಂಯೋಜಿಸುತ್ತಿದ್ದಾರೆ. ಅಣಜಿ ನಾಗರಾಜ್ ಛಾಯಾಗ್ರಹಣ, ಪ್ರವೀಣ್ ಬೇಲೂರು ಸಂಕಲನ ಈ
ಚಿತ್ರಕ್ಕಿದೆ. ಇನ್ನೇನು ಚಿತ್ರೀಕರಣ ಆರಂಭವಾಗಲಿದೆ.

error: Content is protected !!