Thursday, 20th June 2024

ಹೊಸತನಕ್ಕೆ ನಾಂಡಿ ಹಾಡಲಿದೆ ಪುನೀತ್ ಪರ್ವ

ಗಂಧದಗುಡಿ ಸಾಕ್ಷ್ಯ ಚಿತ್ರವಾದರೂ, ಅದು ಸಿನಿಮಾ ರೂಪದಲ್ಲಿಯೇ ತೆರೆಗೆ ಬರಲಿದೆ. ಈ ಹಿಂದೆ ಬೇರೆ ಭಾಷೆಗಳಲ್ಲಿ ಸಾಕ್ಷ್ಯ ಚಿತ್ರಗಳು ಸಿದ್ಧಗೊಂಡಿವೆಯಾದರೂ, ಅವು ಕಿರುತೆರೆಗೆ ಸೀಮಿತವಾಗಿದ್ದವು. ಆದರೆ ಗಂಧದಗುಡಿ ಅದೆಲ್ಲವನ್ನು ಮೀರಿದ್ದು ಹೊಸತನಕ್ಕೆ ನಾಂದಿ ಹಾಡಿದೆ. ಇಲ್ಲಿನ ಪ್ರತಿ ದೃಶ್ಯವೂ ಮನಮೋಹಕವಾಗಿ ಮೂಡಿಬಂದಿವೆ. ನಾವು ಕೂಡ ಅದರೊಂದಿಗೆ ಸಾಗುತ್ತಿದ್ದೇವೆ ಎಂಬ ಭಾವ ಮನದಲ್ಲಿ ಮೂಡುವಂತೆ ಮಾಡಿದೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಬಾರಿಗೆ ಗಂಧದಗುಡಿ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದ್ದರು. ಅದಕ್ಕಾಗಿ ಕರುನಾಡಿನ ಕಾನನವನ್ನು ಸುತ್ತಿ ಅಲ್ಲಿನ ಪ್ರಕೃತಿ ಸೌಂದರ್ಯ ವನ್ನು ಕಂಡು ಹಿರಿ ಹಿರಿ ಹಿಗ್ಗಿದ್ದರು. ನಿಸರ್ಗದ ಸೌಂದರ್ಯದ ಖನಿಯನ್ನು ಪ್ರೇಕ್ಷರ ಮುಂದಿಡ ಬೇಕು ಎಂಸ ಆಸೆಯಿಂದ ಸಾಕ್ಷ್ಯ ಚಿತ್ರವನ್ನು ತೆರೆಗೆ ತರಲು ಬಲು ಆಸೆಯಿಂದ ಸಿದ್ಧತೆ ನಡೆಸಿ ದ್ದರು. ಅಂತೆಯೇ ನಿರ್ದೇಶಕ ಅಮೋಘ ಅವರ ಜತೆಯಾಗಿ ದಟ್ಟ ಕಾನನ ಹೊಕ್ಕು ಅಲ್ಲಿನ ವಿಶಿಷ್ಟತೆಯನ್ನು ಕಲೆ ಹಾಕಿ, ತೆರೆಗೆ ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಪ್ಪು ಅಷ್ಟೊತ್ತಿಗೆ ನಮ್ಮನ್ನೆಲ್ಲಾ ಅಗಲಿದರು.

ಈಗ ಅಪ್ಪು ಆಸೆಯಂತೆಯೇ ಗಂಧದಗುಡಿಯನ್ನು ತೆರೆಗೆ ತರಲಾಗುತ್ತಿದೆ. ಇದೇ ೨೮ ರಂದು ಬೆಳ್ಳಿಪರದೆಯಲ್ಲಿ ಗಂಧದ ಗುಡಿಯ ವೈಭವ ತೆರೆದುಕೊಳ್ಳಲಿದೆ. ಗಂಧದಗುಡಿಯಲ್ಲಿ ಅಪ್ಪುವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದುಕುಳಿತ್ತಿದ್ದಾರೆ. ಹಾಗಂತ ಗಂದಧಗುಡಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲಿಯೂ ರಿಲೀಸ್ ಆಗಲಿದೆ. ಅದಕ್ಕಾಗಿಯೇ ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಶುಕ್ರವಾರ ಸಂಜೆ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆಯಲಿದ್ದು, ಪುನೀತ್ ಪರ್ವ ಎಂಬ ಹೆಸರಿನಲ್ಲಿ ಕಾರ್ಯಕ್ರಮ  ಆಯೋಜಿಸ ಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಗಾನ ಮಂಜರಿ: ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಕಲಾವಿದರು ಮಾತ್ರವಲ್ಲ ಖ್ಯಾತ ಗಾಯಕರೂ ಕೂಡಾ ಭಾಗವಹಿಸ ಲಿದ್ದಾರೆ. ಗಾಯಕ ಅರ್ಮಾನ್ ಮಲ್ಲಿಕ್ ಸಮಾರಂಭ ದಲ್ಲಿ ಗಾಯನದ ಮೂಲಕ ಮನಸೂರೆಗೊಳ್ಳಲಿದ್ದಾರೆ. ವಿಜಯ ಪ್ರಕಾಶ್, ಟಿಪ್ಪು, ಕುನಾನ್ ಗಾಂಜವಾಲ ಹೀಗೆ ಹಲವು ಖ್ಯಾತ ಗಾಯಕರು ತಮ್ಮ ಕಂಠಸಿರಿಯ ಮೂಲಕ ಕಾರ್ಯ ಕ್ರಮಕ್ಕೆ ಮತ್ತಷ್ಟು ಮೆರಗು ತರಲಿದ್ದಾರೆ.

ರಮ್ಯಾ ನೃತ್ಯ
ನಟಿ ರಮ್ಯಾ, ಪುನೀತ್ ರಾಜ್‌ಕುಮಾರ್ ಅಭಿನ ಯದ ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆಕಾಶ್, ಅರಸು ಚಿತ್ರಗಳಲ್ಲಿಯೂ ನಟಿಸಿ ದರು. ರಮ್ಯಾ ಚಿತ್ರರಂಗದಿಂದ ದೂರ ಉಳಿದಿದ್ದರೂ, ಅಪ್ಪು ಜತೆಗೆ ಉತ್ತಮ ಗೆಳೆತನ ಹೊಂದಿದ್ದರು. ಈಗ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ರಮ್ಯಾ ಕೂಡ ಪಾಲ್ಗೊಳ್ಳುತ್ತಿದ್ದು, ಅಪ್ಪು ಅಭಿನಯದ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

ಶಿವಣ್ಣ , ಪ್ರಭುದೇವ ಧಮಾಕ
ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಅಪ್ಪು ನಟಿಸಿದ ಚಿತ್ರದ ಹಾಡುಗಳಿಗೆ ಶಿವಣ್ಣ ಡ್ಯಾನ್ಸ್ ಮಾಡಲಿದ್ದಾರೆ. ಜತೆಗೆ ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಕೂಡ, ನೃತ್ಯ ಮಾಡಿ ರಂಜಿಸಲಿ ದ್ದಾರೆ. ಅದರಲ್ಲಿ ಲಕ್ಕಿ ಮ್ಯಾನ್ ಚಿತ್ರದ ಹಾಡಿಗೂ ನೃತ್ಯ ಮಾಡಿ ಮನರಂಜಿಸಲಿದ್ದಾರೆ.

error: Content is protected !!