Friday, 19th April 2024

ಮಕ್ಕಳಿಗೂ ಅಡುಗೆ ಕೆಲಸ !

ಮಂಜುನಾಥ ಡಿ. ಎಸ್.

ಕ್ಯಾಲಿಫೋರ್ನಿಯ ರಾಜ್ಯದ ಅರ್ವೈನ್ ನಗರದಲ್ಲಿನ ಒಂದು ‘ಡೇ ಕೇರ್ ಸೆಂಟರ್’ ಓಪನ್ ಡೇ ಆಯೋಜಿಸಿತ್ತು. ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರಕಿತ್ತು. ಮಕ್ಕಳ ಬೆಳವಣಿಗೆಗೆ ನೆರವಾಗಬಹುದಾದ ಹಲವಾರು ಆಸಕ್ತದಾಯಕ ಲೇಖನಗಳ ಪ್ರತಿಗಳನ್ನು ಅಲ್ಲಿ ವಿತರಿಸಿದರು. ಪ್ರಾಯೋಗಿಕ ಕಲಿಕೆ ಹೆಚ್ಚು ಪರಿಣಾಮ ಕಾರಿಯಾಗಿರುತ್ತದೆ ಎಂಬ ಕಾರಣದಿಂದ ಅದಕ್ಕೆ ಒತ್ತು ನೀಡುವುದು ಆ ದಿನದ ಆಶಯ.

ಮಕ್ಕಳೊಂದಿಗೆ ಅಡುಗೆ ಮಾಡಲು ಹತ್ತು ಕಾರಣಗಳು ಶೀರ್ಷಿಕೆಯ ಕಿರುಲೇಖನ ಅವುಗಳಲ್ಲಿ ಒಂದಾಗಿತ್ತು. ಇದರಲ್ಲಿನ ಅಂಶಗಳು ಪ್ರಸ್ತುತ ಎನಿಸಿದ್ದು, ಇಲ್ಲಿ ಹಂಚಿ ಕೊಳ್ಳುತ್ತಿರುವೆ.

೧) ಶಬ್ದಭಂಡಾರದ ಬೆಳವಣಿಗೆ – ಅಡುಗೆ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಕುರಿತು ಒಟ್ಟಿಗೆ ಮಾತನಾಡುವುದರಿಂದ ಮಕ್ಕಳ ಪದ ಭಂಡಾರ ವೃದ್ಧಿಯಾಗುತ್ತದೆ.

೨) ಆಹಾರ ಜ್ಞಾನದ ವೃದ್ಧಿ – ಆಹಾರ ತಯಾರಿಕೆಯಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಅಹಾರ ಕುರಿತಂತೆ ಅವರ ಜ್ಞಾನ ಹೆಚ್ಚಾಗುತ್ತದೆ. ಹೊಸ ಹೊಸ ಆಹಾರಗಳನ್ನು ಪ್ರಯತ್ನಿಸುವ ಕುತೂಹಲ ಅವರಲ್ಲಿ ಮೂಡುತ್ತದೆ; ಅನ್ವೇಷಕ ಪ್ರವೃತ್ತಿಯೂ ಬೆಳೆಯು ತ್ತದೆ.

೩) ಮಿದುಳಿನ ಬೆಳವಣಿಗೆ – ಅಡುಗೆ ಮಾಡುವಾಗ ಮಕ್ಕಳು ತಮ್ಮ ಇಂದ್ರಿಯಗಳನ್ನು ಬಳಸಿಕೊಂಡು, ಸಂವೇದನೆಗಳ ಅನುಭವ ಗಳನ್ನು ಪಡೆದುಕೊಳ್ಳುತ್ತಾರೆ. ಈ ಅನುಭವಗಳು ಮಕ್ಕಳ ಮಿದುಳಿನ ಬೆಳವಣಿಗೆಗೆ ಸಹಾಯಕವಾಗುತ್ತವೆ.

೪) ಚಲನ ಕೌಶಲಗಳ ಕಲಿಕೆ – (ತರಕಾರಿಗಳ) ಸಿಪ್ಪೆ ಸುಲಿಯುವುದು, ಕತ್ತರಿಸುವುದು, ಕಲಕುವುದು, ನಾದುವುದು, ಕಾಯಿಸು ವುದು, ಮುಂತಾದ ಕ್ರಿಯೆಗಳಿಂದ ಕೈಗಳ ಹಾಗು ಬೆರಳುಗಳ ಚಲನ ಕೌಶಲಗಳ ಕಲಿಕೆಗೆ ನೆರವಾಗುತ್ತವೆ.

೫) ಗಣಿತದ ಪರಿಕಲ್ಪನೆಗಳ ಕಲಿಕೆ – ಅಡುಗೆ ಮಾಡುವ ಅನುಭವ ಗಣಿತದ ಪರಿಕಲ್ಪನೆಗಳನ್ನು ಸಂದರ್ಭೋಚಿತ ರೀತಿಯಲ್ಲಿ ಮಕ್ಕಳಿಗೆ ಪರಿಚಯಿಸುತ್ತದೆ.

೬) ಸ್ವಾಭಿಮಾನದ ಅಂಕುರ – ಅಡುಗೆಯಲ್ಲಿ ಪಾಲ್ಗೊಂಡಾಗ ಮಕ್ಕಳಲ್ಲಿ ನೈಜ ಸಾಧನೆಯ ಭಾವ ಮೂಡುತ್ತದೆ. ತಾವು
ತಯಾ ರಿಸಿದ ಅಡುಗೆಯನ್ನು ಬಂಧು-ಮಿತ್ರರಿಗೆ ಬಡಿಸುವ ಮೂಲಕ ಮಕ್ಕಳು ಅವರೊಡನೆ ಬೆರೆಯುತ್ತಾರೆ.

೭) ಕುಟುಂಬದ ಸಂಪ್ರದಾಯಗಳ ಪರಿಚಯ – ಅನೇಕ ಕುಟುಂಬಗಳ ದೈನಂದಿನ ಜೀವನದಲ್ಲಿ ಹಾಗು ವಿಶೇಷ ಆಚರಣೆಗಳ ಸಂದರ್ಭಗಳಲ್ಲಿ ಆಹಾರ ಮಹತ್ವದ ಪಾತ್ರ ವಹಿಸುತ್ತದೆ. ಇದು ನೀಡುವ ಆನಂದ ಹಾಗು ಇದರ ಪುನರಾವರ್ತನೆಯಿಂದ ಮನನ ಮಾಡಿಕೊಂಡ ಕುಟುಂಬದ ಸಂಪ್ರದಾಯಗಳು ಮಕ್ಕಳ ಪ್ರೌಢಾವಸ್ಥೆಯಲ್ಲಿಯೂ ಉಳಿದುಕೊಳ್ಳುತ್ತವೆ.

೮) ಜೀವನ ಕೌಶಲಗಳ ಕಲಿಕೆ – ಅಡುಗೆ ಒಂದು ಪ್ರಮುಖ ಜೀವನ ಕೌಶಲ. ಮಕ್ಕಳು ಇದನ್ನು ರೂಢಿಸಿಕೊಳ್ಳುವುದು ಅವರ ಭವಿಷ್ಯದ ನಿರ್ಭರತೆಗೆ ಸೋಪಾನವಾಗುತ್ತದೆ.

೯) ಆನಂದಕ್ಕೆ ನಾಂದಿ – ಅಡುಗೆಯಲ್ಲಿ ಪಾಲ್ಗೊಳ್ಳುವುದು ಮಕ್ಕಳ ಆನಂದಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮಕ್ಕಳನ್ನು
ಅಡುಗೆ (ಅಥವಾ ಇನ್ನಾವುದೇ) ಕೆಲಸದಲ್ಲಿ ತೊಡಗಿಸಿಕೊಳ್ಳುವವರು ಕಡಿಮೆ. ಕುಟುಂಬವೊಂದರಲ್ಲಿ ಪೋಷಕರು ಮನೆಯಲ್ಲಿ ಬಟ್ಟೆ, ಪಾತ್ರೆ, ನೆಲ ಸ್ವಚ್ಛಗೊಳಿಸುವ ಸಮಯದಲ್ಲಿ ತಮ್ಮ ಮಗುವನ್ನು ಜತೆಗಿರಿಸಿಕೊಂಡು, ಅವರ ಸಾಮರ್ಥ್ಯಕ್ಕನುಗುಣವಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅವಕಾಶ ಕಲ್ಪಿಸಿಕೊಟ್ಟರೆ, ಮಕ್ಕಳಲ್ಲಿ ಆ ಕುರಿತು ಜ್ಞಾನ ಬೆಳೆಯುತ್ತದೆ.

error: Content is protected !!