Saturday, 27th July 2024

ಮನೆ ಮನದಲ್ಲಿ ಹಬ್ಬದ ಸಂತಸ !

ವಿದ್ಯೆಯ ಜೊತೆಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಬೆಳೆಯಲಿ. ಮನಸ್ಸು ಪ್ರಫುಲ್ಲವಾಗಲಿ, ಮನೆಯಲ್ಲಿ, ಮನದಲ್ಲಿ , ಎಲ್ಲೆಲ್ಲೂ ಪ್ರೀತಿಯ ಹೊಳೆ ಹರಿಯಲಿ, ವಿಶ್ವಾಸದ ಮರ ಚಿಗುರಲಿ!

ಮಮತಾ ಹೆಗಡೆ

ಈ ಬದುಕನ್ನು ಚಕ್ರಕ್ಕೆ ಹೋಲಿಸುತ್ತಾರೆ, ಆ ಚಕ್ರ ಸದಾ ತಿರುಗುತ್ತಲೇ ಇರುತ್ತದೆ. ಇದ ರಿಂದಾಗಿ ಜಗತ್ತು ಸದಾ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಲೇ ಸಾಗುತ್ತಿರುತ್ತದೆ. ಚಕ್ರದ ಆಕಾರ ಗೋಲ ಆದ್ದರಿಂದ ಒಂದ ಒಂದು ದಿನ ಹೊರಟ ಜಾಗಕ್ಕೆ ಪುನಃ ತಲುಪುವುದಂತು ಖಚಿತ.

ಈ ವಾರ ನವರಾತ್ರಿ ಹಬ್ಬ ಶುರುವಾಗಿದೆ. ಬೆಳಗ್ಗೆ ಸ್ವಲ್ಪ ಬೇಗ ಮನೆಗೆಲಸವನ್ನೆಲ್ಲ ಮುಗಿಸಿ ನಂತರ ಮಿಂದು ಪೂಜೆ , ಪಾರಾಯಣ ಮಾಡಿ ನನ್ನ ಎರಡೂವರೆ ವರುಷದ ಮಗಳಿಗೆ ಕುಂಕುಮ ಹಚ್ಚಿ ದುಡ್ಡು ಕೊಡುತ್ತೇನೆ. ‘ಅಮ್ಮಾ, ಯಾಕೆ ಕುಂಕುಮ ಹಚ್ಚಿ ದುಡ್ಡು ಕೊಟ್ಟೆ? ನಾನು ಎಲ್ಲೂ ಟಾ ಟಾ ಹೋಗ’ ಎಂದಳು. ಅದಕ್ಕೆ ನಾನು ‘ಮಗಳೇ ಇವತ್ತಿ ನಿಂದ ನವರಾತ್ರಿ ಹಬ್ಬ ಶುರುವಾಗಿದೆ ಅದಕ್ಕೆ ದುಡ್ಡು ಕೊಟ್ಟೆ’ ಎನ್ನುತ್ತೇನೆ.

‘ನವರಾತ್ರಿ ಹಬ್ಬನಾ? ಹಾಗೆಂದರೆ ಯಾವ ಹಬ್ಬ ಎಂದಳು?’ ನವರಾತ್ರಿ ಹಬ್ಬ ಹೆಚ್ಚಾಗಿ ಅಕ್ಟೋಬರ್ ರಜೆಯ ಬರುತ್ತದೆ. ಮಕ್ಕಳೆಲ್ಲ ಮಿಡ್ ಟರ್ಮ ಪರೀಕ್ಷೆ ಮುಗಿಸಿ ಹಾಯಾಗಿ ಇರುತ್ತಿದ್ದ ಸಮಯ ಅದು. ಹಬ್ಬಗಳನ್ನು ಮನಸಾರೆ ಆನಂದಿಸುತ್ತಿದ್ದೆವು. ಇನ್ನು ಹೆಣ್ಣು ಮಕ್ಕಳ ಪಾಲಿಗೆ ಈ ಹಬ್ಬ ತುಸು ವಿಶೇಷವೇ ಎನ್ನಬಹುದು. ಯಾಕೆಂದರೆ ಊರಲ್ಲ ಅರಿಶಿನ ಕುಂಕುಮಕ್ಕೆ ಬರಹೇಳುತ್ತಿದ್ದರು. ಇನ್ನು ಕನ್ಯಾಮಣಿಗಳಿಗೆ ಒಂದು ಕೈ ಹೆಚ್ಚೇ ಬೇಡಿಕೆ. ಎಷ್ಟೋ ಹೆಣ್ಣುಮಕ್ಕಳಿಗೆ ಜೀವನದ ಮೊದಲ ಗಳಿಕೆ ನವರಾತ್ರಿ ಹಬ್ಬದ ಅಗುತ್ತಿದ್ದುದು ಎಂದರೂ ತಪ್ಪಾಗಲಾರದು. ಕೈಯಲ್ಲಿ ಐವತ್ತು, ನೂರು ಒಡಾಡಿದ ಸಮಯವೆಂದರೆ ಅದು ನವರಾತ್ರಿಯ!

ಸಂಭ್ರಮದ ದಿನ
ಕೊನೆಯಲ್ಲಿ ಹಬ್ಬ ಮುಗಿದ ಮೇಲೆ ಅಪ್ಪ ಎದರೂ ನಮ್ಮಲ್ಲಿ ದುಡ್ಡು ಸಾಲ ಕೇಳಿದರೆ ನಮ್ಮ ಗತ್ತು ಯಾವ ಬ್ಯಾಂಕ್ ಮ್ಯಾನೇಜರಗಳಿಗೂ ಕಡಿಮೆ ಇರುತ್ತಿರಲಿಲ್ಲ. ಅದೇನೋ ಆ ದಿನಗಳಲ್ಲಿ ಹಬ್ಬದ ವಾತಾವರಣ ಗಾಳಿ ಗಂಧಗಳಲ್ಲಿಯೂ ಬೆರೆತು
ಹೋಗಿರುತ್ತಿತ್ತು. ಆದರೆ ಆ ಸೊಬಗು, ಸೊಗಸು, ಗತ್ತು, ಸಂಭ್ರಮ ಈಗಿನ ಮಕ್ಕಳಲ್ಲಿ ಕಡಿಮೆಯಾಗುತ್ತಿದೆಯಲ್ಲವೆ! ಏಕೆ? ಇದಕ್ಕೆ ನಾವೇ ಕಾರಣವೆ? ಇಂದು ಹಬ್ಬಗಳೆಲ್ಲವೂ ಬರೀ ವಾಟ್ಸಾಪ್ ಮೆಸೇಜ್‌ಗಳಿಗೆ ಸೀಮಿತಗೊಳ್ಳುತ್ತಿವೆ.

ಹಬ್ಬಗಳ ಆಚರಣೆಗಳನ್ನು ಪಟ್ಟಣ ಸೇರಿದ ನಾವುಗಳು ‘ವಿ ಹ್ಯಾವ್ ನೋ ಟೈಮ್’ ಎನ್ನುವ ಶಬ್ದಗಳ ಅಡಿಯಲ್ಲಿ ಸಮಾಧಿ ಮಾಡುತ್ತಿದ್ದೇವೆ. ಇಡೀ ವಾರ ಆಫೀಸ್, ನಡುವೆ ಒಂದು ದಿನ ರಜೆ ಬಂದರೆ ಸಾಕು, ಅದು ಯಾವುದೇ ಹಬ್ಬಕ್ಕಾಗಲಿ ಅಥವಾ
ಭಾನುವಾರವಾಗಲಿ ರೆಸ್ಟ ಮಾಡುವುದೇ ನಮ್ಮೆಲ್ಲರ ಮುಖ್ಯ ಉದ್ದೇಶವಾಗಿರುತ್ತದೆ. ಇಲ್ಲವಾದಲ್ಲಿ ಶೊಪಿಂಗ ಎಂದು ಮನೆಯಿಂದ ಆಚೆ ಹೋಗಿ ದಿನ ಕಳೆಯುವುದು.

ಒಟ್ಟು ಕುಟುಂಬದ ಪ್ರೀತಿ
ನಾವು ಚಿಕ್ಕವರಿದ್ದಾಗ ಹೀಗಿರಲಿಲ್ಲ ಅಲ್ವಾ! ಸಾಮಾನ್ಯವಾಗಿ ಅಮ್ಮ ಮನೆಯ ಇರುತ್ತಿದ್ದಳು, ಅಪ್ಪ ಹೊರಗಡೆ ಹೋಗಿ ದುಡಿಯುವವನಾದರೂ, ಮನೆಯಲ್ಲಿ ಒಟ್ಟು ಕುಟುಂಬಗಳಿರುತ್ತಿದ್ದವು. ಅಂತಹ ಕುಟುಂಬಗಳಲ್ಲಿ ಪ್ರೀತಿಗೆ ಕೊರತೆ ಇರುತ್ತಿರ ಲಿಲ್ಲ. ಒಬ್ಬರ ಒಬ್ಬರು ಹಬ್ಬದ ತಯಾರಿ ನಡೆಸುತ್ತಿದ್ದರು.

ತಾನಾಗಿಯೇ ಮಕ್ಕಳಲ್ಲಿ ಹಬ್ಬದ ಅರಿವು ಮೂಡಿಸುತ್ತಿತ್ತು. ಮಕ್ಕಳು ಮಕ್ಕಳೇ …ಅದು ನಮ್ಮ ಮಕ್ಕಳಾಗಲಿ ಅಥವಾ ನಾವು
ಮಕ್ಕಳಿzವಗಾಗಲಿ ಒಂದು ಕ್ಷಣ ನಾವು ನಮ್ಮ ಮಕ್ಕಳಲ್ಲಿ ನಮ್ಮನ್ನು ಕಾಣೋಣವೆ. ಪುಟ್ಟ ಮನಸ್ಸುಗಳು ಮನೆಯಲ್ಲಿನ ಹಬ್ಬದ ವಾತಾವರಣವನ್ನು ಸಂಭ್ರಮಿಸುತ್ತಾರೆ, ಅದಕ್ಕೆ ಅವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮದು. ಹಿಂದೆ ನಮ್ಮ ತಂದೆ ತಾಯಿ ಗಳು
ಹಬ್ಬಗಳನ್ನು ಆಚರಿದ್ದಕ್ಕೆ, ಇಂದು ನಮಗೆ ಆ ಸಂತೋಷದ ನೆನಪಿನ ಬುತ್ತಿ ಇದೆ.

ಅದಲ್ಲದೆ ನಾವು ನಮ್ಮ ಮುಂದಿನ ಪೀಳಿಗೆಗೆ ಕಲಿಸುವ ಅವಕಾಶವೂ ಇದೆ. ‘ಮಾಡಲು ಕೆಲಸ ನೂರಾರಿದೆ ಆದರೆ ನಮಗೆ ಟೈಮ್ ಎಲ್ಲಿದೆ’ ಎಂದು ಗೊಣಗಿಕೊಳ್ಳಬೇಡಿ. ನಮ್ಮ ಬದುಕಿಗೆ ದುಡಿಮೆ ಹೇಗೆ ಅವಶ್ಯಕವೋ ಹಾಗೆ ಈ ಹಬ್ಬ ಹರಿದಿನಗಳ ಆಚರಣೆಗಳ ರೂಪದಲ್ಲಿ ತೆಗೆದುಕೊಳ್ಳುವ ರಿಲೇಕ್ಸ್ ಕೂಡ ಅಷ್ಟೇ ಮುಖ್ಯ. ಅದಲ್ಲದೆ ನೀವು ಒಳ್ಳೆಯ ಪೋಷಕರಾಗಲೂ ಇದು ಅಗತ್ಯ.
ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಒಳ್ಳೆಯ ಸಂಸ್ಕೃತಿ , ಸಂಸ್ಕಾರ ಬೆಳೆಯಲಿ. ಮನಸ್ಸು ಪ್ರಫುಲ್ಲವಾಗಲಿ, ಮನೆಯಲ್ಲಿ, ಮನೆದಲ್ಲಿ ಪ್ರೀತಿಯ ಹೊಳೆ ಹರಿಯಲಿ, ವಿಶ್ವಾಸದ ಮರ ಚಿಗುರಲಿ!

error: Content is protected !!