Friday, 26th July 2024

ಈ ಐಪಿಎಲ್‌ ಬಳಿಕ ದಿನೇಶ್​ ಕಾರ್ತಿಕ್​ ನಿವೃತ್ತಿ..!

ಮುಂಬೈ: ಈ ಬಾರಿಯ ಐಪಿಎಲ್‌ ಸರಣಿ ವಿಕೇಟ್​ ಕೀಪರ್​ ಮತ್ತು ದಾಂಡಿಗ ದಿನೇಶ್​ ಕಾರ್ತಿಕ್​ಗೆ ಕೊನೆಯ ಪಂದ್ಯವಾಗಲಿದೆಯಂತೆ.

ಮಾ.22ಕ್ಕೆ ಐಪಿಎಲ್​ ಪಂದ್ಯ ಪ್ರಾರಂಭವಾಗಲಿದೆ. ಮೊದಲ ಪಂದ್ಯದ ಮೂಲಕ ಆರ್​ಸಿಬಿ ಈ ವರ್ಷದ ಐಪಿಎಲ್​ ಅನ್ನು ಉದ್ಘಾಟನೆ ಮಾಡಲಿದೆ. ಆದರೆ ಈ ವರ್ಷದ ಐಪಿಎಲ್​ ಪಂದ್ಯವೇ ಕೊನೆಯ ಪಂದ್ಯವೆಂದು ದಿನೇಶ್​ ಕಾರ್ತಿಕ್​ ನಿರ್ಧರಿಸಲು ಸಿದ್ಧರಾಗಿದ್ದಾರೆ. ಟಿ20 ಲೀಗ್​ ಬಳಿಕ ಅಂತರಾಷ್ಟ್ರೀಯ ಪಂದ್ಯಕ್ಕೂ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ರಾಯಲ್​ ಚಾಲೆಂಜರ್ಸ್​ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡಿರುವ 38 ವರ್ಷದ ಕಾರ್ತಿಕ್​ 2008ರಿಂದ ಐಪಿಎಲ್​​ ಎದುರಿಸುತ್ತಾ ಬಂದಿ ದ್ದಾರೆ. ಅಂದ ಹಾಗೆಯೇ ಐಪಿಎಲ್​ನ 16 ಆವೃತ್ತಿಗಳನ್ನ ದಿನೇಶ್​ ಕಾರ್ತಿಕ್​ ಆಡುತ್ತಾ ಬಂದಿದ್ದಾರೆ. ಸದ್ಯ ದಿನೇರ್ಶ್ ಕಾರ್ತಿಕ್​ 2024ರ ಆವೃತ್ತಿಯು ಕೊನೆಯ ಐಪಿಎಲ್​ ಆಗಲಿದೆ ಬಳಿಕ ಅಂತರಾಷ್ಟ್ರೀಯ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗಳು ಹೊರಬಿದ್ದಿವೆ.

Leave a Reply

Your email address will not be published. Required fields are marked *

error: Content is protected !!