Tuesday, 27th February 2024

ಶ್ರೀಲಂಕಾ ವಿರುದ್ದ ಭಾರತಕ್ಕೆ ಸರಣಿ ಜಯ, ಮಿಂಚಿದ ಸೂರ್ಯಕುಮಾರ್‌, ಚಹರ್‌

ಕೊಲಂಬೊ: ಎರಡನೇ ಏಕದಿನ ಪಂದ್ಯದಲ್ಲಿ ಭಾರತ 3 ವಿಕೆಟ್ ಗಳ ರೋಚಕ ಜಯ ಗಳಿಸಿದ್ದು, 2 -0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಆತಿಥೇಯ ಶ್ರೀಲಂಕಾ ತಾಯ್ನಾಡಿನಲ್ಲಿ ಮುಖಭಂಗ ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತ್ತು. ಆವಿಷ್ಕಾ 50, ಮಿನೋದ್ 36, ಚರಿತ್ ಅಸಲಂಕ 65, ಚಮಿಕಾ ಕರುಣರತ್ನೆ ಅಜೇಯ 44 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ 3, ದೀಪಕ್ ಚಹರ್ 2, ಚಾಹಲ್ 3 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ಭಾರತ 49.1 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಆರಂಭಿಕರು ಅಲ್ಪ ಮೊತ್ತಕ್ಕೆ ಉದುರಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್‌ ಯಾದವ್‌ ಹಾಗೂ ದೀಪಕ್‌ ಚಹರ್‌ ಅರ್ಧಶತಕ ಬಾರಿಸಿ, ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ, ತಂಡದ ಜಯದ ರೂವಾರಿ ಯಾದರು.

ಪೃಥ್ವಿ ಶಾ 13, ಶಿಖರ್ ಧವನ್ 29, ಮನೀಶ್ ಪಾಂಡೆ 37, ಸೂರ್ಯಕುಮಾರ್ 53, ಕೃನಾಲ್ ಪಾಂಡ್ಯ 35, ದೀಪಕ್ ಚಹರ್ ಅಜೇಯ 69, ಭುವನೇಶ್ವರ್ ಅಜೇಯ 19 ರನ್ ಗಳಿಸಿದರು. 

Leave a Reply

Your email address will not be published. Required fields are marked *

error: Content is protected !!