Saturday, 27th July 2024

ಟೀಮ್​ ಇಂಡಿಯಾ ಮುಖ್ಯ ಕೋಚ್ ಆಗಿ ’ದ್ರಾವಿಡ್’ ಮುಂದುವರಿಕೆ

ನವದೆಹಲಿ: ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ ಮತ್ತೊಮ್ಮೆ ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್​ ದ್ರಾವಿಡ್ ಅವರನ್ನು ನೇಮಕ ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.

2024ರ ಜೂನ್​ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​​ ವರೆಗೆ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

“ಇತ್ತೀಚೆಗೆ ಮುಕ್ತಾಯಗೊಂಡ ODI ವಿಶ್ವಕಪ್ ನಂತರ ದ್ರಾವಿಡ್​ ಅವರ ಮುಖ್ಯ ಕೋಚ್ ಹುದ್ದೆಯ ಒಪ್ಪಂದದ ಅವಧಿ ಪೂರ್ಣಗೊಂಡಿತ್ತು. ಇದಾದ ಬಳಿಕ ಈ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂದು ಚರ್ಚೆ ನಡೆಸಲಾಗಿತ್ತು. ಎಲ್ಲರ ಒಪ್ಪಿಗೆ ಪಡೆದು ನಂತರ ರಾಹುಲ್​ ದ್ರಾವಿಡ್​ ಅವರನ್ನೇ ಮುಖ್ಯ ಕೋಚ್​ ಆಗಿ ಒಪ್ಪಂದವನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಈ ಒಪ್ಪಂದವನ್ನು ದ್ರಾವಿಡ್ ಅವರು ಒಪ್ಪಿದ್ದಕ್ಕಾಗಿ ಸಂತಸ ತಂದಿದೆ. ​ಅವರ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ​ ಹೇಳಿದ್ದಾರೆ.

ರಾಹುಲ್​ ದ್ರಾವಿಡ್​ ಮಾತನಾಡಿ, ಟೀಮ್ ಇಂಡಿಯಾದೊಂದಿಗೆ ಕಳೆದ ಎರಡು ವರ್ಷಗಳು ಪಯಣ ಸ್ಮರಣೀಯವಾಗಿದೆ. ಈ ಪಯಣದಲ್ಲಿ ಭಾರತ ಏರಿಳಿತಗಳನ್ನು ಕಂಡಿದೆ. ಪ್ರಯಾಣದುದ್ದಕ್ಕೂ, ಗುಂಪಿನೊಳಗಿನ ಬೆಂಬಲ ಮತ್ತು ಒಡನಾಟವು ಅಸಾಧಾರಣವಾಗಿದೆ. ಈ ಬಗ್ಗೆ ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ. ಮತ್ತೊಮ್ಮ ನನ್ನನ್ನು ಮುಖ್ಯ ಕೋಚ್​ ಹುದ್ದಗೆ ಮರು ನೇಮಕ ಮಾಡಿದ್ದಕ್ಕಾಗಿ BCCI ಮತ್ತು ಪದಾಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ.

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿ, “ಇದು ಒಳ್ಳೆಯ ನಿರ್ಧಾರ ಏಕೆಂದರೆ ಮುಂದಿನ ವರ್ಷ ಟಿ -20 ವಿಶ್ವಕಪ್ ಇರುವುದರಿಂದ ಇದು ಉತ್ತಮ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ 2021ರ ನವೆಂಬರ್​ ತಿಂಗಳಲ್ಲಿ ದ್ರಾವಿಡ್​ ಅವರನ್ನು ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ 2 ವರ್ಷದ ಅವಧಿಗೆ ಬಿಸಿಸಿಐ ನೇಮಕ ಮಾಡಿತ್ತು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್​ ನಂತರ ಮುಖ್ಯ ಕೋಚ್​ ಹುದ್ದೆಯ ಅವಧಿ ಪೂರ್ಣಗೊಂಡಿತ್ತು. ಬಳಿಕ ಈ ಹುದ್ದೆಗೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬ ಊಹಪೋಹಗಳಿಗೆ ತೆರೆ ಬಿದ್ದಿದೆ.

Leave a Reply

Your email address will not be published. Required fields are marked *

error: Content is protected !!