Saturday, 27th July 2024

ಶುಭ್​ಮನ್​ ಗಿಲ್​ಗೆ ಐಸಿಸಿ ಭಾರೀ ದಂಡ

ಓವಲ್: ಅಂಪೈರ್​ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದ ಭಾರತ ತಂಡದ ಆಟಗಾರ ಶುಭ್​ಮನ್​ ಗಿಲ್​ಗೆ ಐಸಿಸಿ ಭಾರೀ ದಂಡ ವಿಧಿಸಿದೆ.

ಕ್ರಿಕೆಟಿಗನ ಈ ನಡೆ ದುಬಾರಿಯಾಗಿದ್ದು ಐಸಿಸಿ ಭಾರೀ ದಂಡ ವಿಧಿಸಿದೆ. ಅಲ್ಲದೇ, ನಿಧಾನಗತಿಯ ಬೌಲಿಂಗ್​ ಕಾರಣಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೂ ದಂಡದ ಬರೆ ಬಿದ್ದಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ 18 ರನ್​ ಗಳಿಸಿ ಆಡುತ್ತಿದ್ದಾಗ ಬೋಲೆಂಡ್​ ಎಸೆತದಲ್ಲಿ ಬ್ಯಾಟ್​ಗೆ ಸವರಿ ಕೊಂಡು ಹೋದ ಚೆಂಡು ಅಲ್ಲೇ ಕಾಯುತ್ತಿದ್ದ ಕ್ಯಾಮರೂನ್​ ಗ್ರೀನ್​ ಕೈ ಸೇರಿತು. ಅದ್ಭುತ ಯತ್ನದಿಂದ ಗ್ರೀನ್​ ಚೆಂಡನ್ನು ಹಿಡಿದರು. ಆದರೆ, ಅದು ನೆಲಕ್ಕೆ ಬಡಿದಂತೆ ಟಿವಿ ರಿಪ್ಲೈಗಳಲ್ಲಿ ಕಾಣುತ್ತಿತ್ತು. ಆದರೆ, ಮೂರನೇ ಅಂಪೈರ್ ಐಸಿಸಿ ನಿಯಮಗಳನ್ವಯ ಔಟ್​ ಎಂದು ಘೋಷಿಸಿದರು.

ಚೆಂಡು ಬೆರಳುಗಳ ಮಧ್ಯೆ ನೆಲಕ್ಕೆ ತಾಕುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದವು. ವೀರೇಂದ್ರ ಸೆಹ್ವಾಗ್​, ವಾಸೀಂ ಜಾಫರ್​ ಸೇರಿದಂತೆ ಹಲವಾರು ಹಿರಿಯ ಕ್ರಿಕೆಟಿಗರು ಟೀಕಿಸಿದ್ದರು.

ಸ್ವತಃ ಶುಭ್​ಮನ್​ ಗಿಲ್​ ಕೂಡ ಪಂದ್ಯದ ಮಧ್ಯೆಯೇ ಈ ಚಿತ್ರವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಅಂಪೈರ್​ ನಿರ್ಧಾರವನ್ನು ದೂಷಿಸಿದ್ದರು. ಯುವ ಕ್ರಿಕೆಟಿಗನಿಗೆ ಪಂದ್ಯದ ಮೊತ್ತದ ಜೊತೆಗೆ 15 ಪ್ರತತಿಶತ ಹೆಚ್ಚು ವರಿ ದಂಡ ವಿಧಿಸಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಿಗದಿತ ಸಮಯಕ್ಕಿಂತಲೂ ನಿಧಾನಗತಿಯಲ್ಲಿ ಬೌಲಿಂಗ್​ ಮಾಡಿದ್ದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ದಂಡ ವಿಧಿಸಿದೆ. ಭಾರತ ಮೀಸಲು ಅವಧಿಗಿಂತ 5 ಓವರ್​ ಹಿಂದೆ ಇತ್ತು.

ಹೀಗಾಗಿ ತಂಡಕ್ಕೆ ಶೇ.100ರಷ್ಟು ದಂಡ ಹಾಕಲಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ನಿಗದಿತ ಸಮಯಕ್ಕಿಂತಲೂ 4 ಓವರ್‌ ಕಡಿಮೆ ಬೌಲ್​ ಮಾಡಿತ್ತು. ಹೀಗಾಗಿ ಆ ತಂಡಕ್ಕೆ ಪಂದ್ಯ ಶುಲ್ಕದ ಮೇಲೆ ಶೇ. 80 ರಷ್ಟು ದಂಡವನ್ನು ವಿಧಿಸಲಾಗಿದೆ.

error: Content is protected !!