Tuesday, 27th February 2024

ನಾಯಕನಾಗಿ ಧವನ್‌’ಗೆ ಮೊದಲ ಗೆಲುವು, ಟೀಂ ಇಂಡಿಯಾಕ್ಕೆ ಮುನ್ನಡೆ

ಕೊಲಂಬೋ: ಭಾರತ-ಲಂಕಾ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡ 7 ವಿಕೆಟ್ ಗಳ ಜಯಗಳಿಸಿದೆ.

ಆರಂಭಿಕರಾದ ಪೃಥ್ವಿ ಶಾ (43) ಮತ್ತು ಶಿಖರ್ ಧವನ್ (ಅಜೇಯ 86) ಇವರುಗಳ ಬಿರುಸಿನ ಆಟ ಹಾಗೂ ಚೊಚ್ಚಲ ಪಂದ್ಯವನ್ನಾಡಿರುವ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಇಶಾನ್ ಕಿಶನ್(59, 42 ಎಸೆತ)ಅರ್ಧಶತಕಗಳ ಕೊಡುಗೆ ನೆರವಿನಿಂದ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ಗೆ 262 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 36.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಶಿಖರ್ ಧನವ್ ಮೊದಲ ಬಾರಿ ನಾಯಕನಾಗಿ ಭಾರತ ಕ್ರಿಕೆಟ್ ತಂಡದ ನೇತೃತ್ವ ವಹಿಸಿದ್ದರು.

ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಚೊಚ್ಚಲ ಅರ್ಧ ಶತಕದ ಮೂಲಕ ತಮ್ಮ 23 ನೇ ಜನ್ಮದಿನ ಆಚರಿಸಿದರು. ಲಂಕಾದ ಅನನುಭವಿ ಆಟಗಾರರು ವೇಗವಾಗಿ ವಿಕೆಟ್ ಒಪ್ಪಿಸುತ್ತಿದ್ದರಾದರೂ 262 ರನ್ ಗಳನ್ನು ಗಳಿಸಿದರು.

ಕಿಶನ್ ಅವರು ಸಂಡಕನ್ ಗೆ ವಿಕೆಟ್ ಒಪ್ಪಿಸಿದ ಬಳಿಕ ಧವನ್ ಹಾಗೂ ಮನೀಷ್ ಪಾಂಡೆ(26) ಅವರು 3ನೇ ವಿಕೆಟ್ ಗೆ 72 ರನ್ ಸೇರಿಸಿದರು. ಚೊಚ್ಚಲ ಪಂದ್ಯ ವನ್ನಾಡಿರುವ ಇನ್ನೋರ್ವ ಬ್ಯಾಟ್ಸ್ ಮನ್ ಸೂರ್ಯಕುಮಾರ ಯಾದವ್(ಔಟಾಗದೆ 31, 20 ಎಸೆತ ) ಅವರೊಂದಿಗೆ 4ನೇ ವಿಕೆಟ್ ಗೆ ಮುರಿಯದ ಜೊತೆಯಾಟ ದಲ್ಲಿ 48 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು.

Leave a Reply

Your email address will not be published. Required fields are marked *

error: Content is protected !!