Saturday, 23rd November 2024

ಸುಪ್ರೀಂಕೋರ್ಟ್‍ನ 50ನೇ ಸಿಜೆಐ ಆಗಿ ನ್ಯಾ.ಡಿ.ವೈ.ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

ವದೆಹಲಿ: ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸುಪ್ರೀಂಕೋರ್ಟ್‍ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ  ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಮುಖ್ಯ ನ್ಯಾಯಮೂರ್ತಿಯವರಿಗೆ ಪ್ರಮಾಣ ವಚನ ಬೋಧಿಸಿದರು.

ಹಾಲಿ ನ್ಯಾಯಮೂರ್ತಿ ಉಮೇಶ್ ಉದಯ್ ಲಲಿತ್ ಅವರು 74 ದಿನಗಳ ಸೇವೆಗಳ ಬಳಿಕ ನಿವೃತ್ತರಾದರು.

ವಾಲ್ಮೀಕಿ ಜಯಂತಿ ಪ್ರಯುಕ್ತ ಡಿ.ವೈ.ಚಂದ್ರಚೂಡ್ ಇಂದು ಪ್ರಮಾಣವಚನ ಸ್ವೀಕರಿಸಿ ದರು. ಇವರ ಅಧಿಕಾರ ಅವಧಿ 2024ರ ನವೆಂಬರ್ 10ರವರೆಗೂ ಮುಂದುವರೆಯಲಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಇದ್ದು, ಚಂದ್ರಚೂಡ್ ಅವರು ಎರಡು ವರ್ಷ ಮುಖ್ಯ ನ್ಯಾಯ ಮೂರ್ತಿಗಳಾಗಿರುತ್ತಾರೆ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ತಂದೆ ಮತ್ತು ಮಗ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿ ಕೆಲಸ ನಿರ್ವಹಿಸಿದ ದಾಖಲೆ ಇದಾಗಿದೆ.

ಡಿ.ವೈ.ಚಂದ್ರಚೂಡ್ ಅವರ ತಂದೆ ವೈ.ವಿ.ಚಂದ್ರಚೂಡ್ 1978ರ ಫೆ.22ರಿಂದ 1985ರ ಜುಲೈ 11ರವರೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಚುಕ್ಕಾಣಿ ಹಿಡಿದಿದ್ದರು.

ದೇಶದ ಗಮನಸೆಳೆದ ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿದ ಪೀಠಗಳಲ್ಲಿ ಡಿ.ವೈ.ಚಂದ್ರಚೂಡ್ ನ್ಯಾಯಮೂರ್ತಿಗಳಾಗಿದ್ದರು.