ನವದೆಹಲಿ: ಟಾಟಾ ಸನ್ಸ್, ಸಿಂಗಾಪುರ್ ಏರ್‌ಲೈನ್ಸ್ ಮಾರ್ಚ್ 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ ಏರ್ಲೈನ್ ಬ್ರ್ಯಾಂಡ್ಗಳನ್ನು ವಿಲೀನಗೊಳ್ಳಲಿದೆ.
ಏರ್ ಇಂಡಿಯಾದೊಂದಿಗೆ ಮಾರ್ಚ್ 2024ಕ್ಕೆ ವಿಸ್ತಾರ ಏರ್ಲೈನ್ನ್ನು ವಿಲೀನಗೊಳಿಸ ಲಾಗುವುದು ಎಂದು ಸಿಂಗಾಪುರ್ ಏರ್‌ಲೈನ್ಸ್ ತಿಳಿಸಿದೆ.
ಟಾಟಾ ಸಮೂಹವು ವಿಸ್ತಾರಾದಲ್ಲಿ 51 ಪ್ರತಿಶತ ಪಾಲನ್ನು ಹೊಂದಿದೆ ಮತ್ತು ಉಳಿದ 49 ಶೇಕಡಾ ಷೇರುಗಳು ಸಿಂಗಾಪುರ್ ಏರ್‌ಲೈನ್ಸ್ (ಎಸ್‌ಐಎ) ನಲ್ಲಿದೆ. ವಹಿವಾಟಿನ ಭಾಗವಾಗಿ, ಎಸ್‌ಐಎ ಏರ್ ಇಂಡಿಯಾದಲ್ಲಿ 2,058.5 ಕೋಟಿ ರೂ. ಹೂಡಿಕೆ ಮಾಡಿದೆ.
ವಿಸ್ತಾರ ಏರ್ಲೈನ್ ಬ್ರ್ಯಾಂಡ್ ಅನ್ನು ರದ್ದುಗೊಳಿಸುವುದು ಮತ್ತು ನಾಲ್ಕು ಏರ್ಲೈನ್ಗಳನ್ನು ಏರ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಟಾಟಾ ಸಮೂಹ ಚಿಂತನೆ ನಡೆಸಿದೆ. ಈ ಮೂಲಕ ತನ್ನ ಕುಂಟುತ್ತಾ ಸಾಗುತ್ತಿರುವ ವಿಮಾನಯಾನ ಸಾಮ್ರಾಜ್ಯವನ್ನು ಮರುನಿರ್ಮಾಣ ಮಾಡಲು ಮತ್ತು ವಿಸ್ತರಿಸಲು ತಯಾರಿ ನಡೆಸುತ್ತಿದೆ ಎಂದು ವರದಿ ಯಾಗಿದೆ.