ದುಬೈ: ಕೋವಿಡ್ ಮಾರಿ ತುತ್ತಾಗಿ ಇನ್ನೂ ತಾಲೀಮು ಆರಂಭಿಸದ ಐಪಿಎಲ್ ಅಭಿಮಾನಿಗಳ ಫೇವರೇಟ್ಗಳಲ್ಲೊಂದಾದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.
ಕೆಲವೇ ದಿನಗಳ ಹಿಂದೆ ತಂಡದ ಉಪನಾಯಕ ಸುರೇಶ್ ರೈನಾ ಟೂರ್ನಿ ಆರಂಭವಾಗುವ ಮುನ್ನವೇ ತಾಯ್ನಾಡಿಗೆ ಮರಳಿದ್ದರು. ಈಗ ಆಫ್ ಸ್ಪಿನ್ನರ್ ಹರ್ಭಜನ್ ಸರದಿ. ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ಆರಂಭವಾಗಲು ಕೆಲವೇ ದಿನಗಳು ಬಾಕಿ ಯಿರುವಂತೆಯೇ, ಭಜ್ಜಿ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.
ಕಳೆದ ತಿಂಗಳು ಆರು ದಿನಗಳ ಶಿಬಿರವನ್ನು ತಪ್ಪಿಸಿಕೊಂಡಿದ್ದರು. ಹಾಗೂ ತಂಡದ ಜತೆಗೆ ದುಬೈಗೆ ಪ್ರಯಾಣಿಸಿರಲಿಲ್ಲ. 2018 ರಲ್ಲಿ ಚೆನ್ನೈ ತಂಡದ ಪಾಲಾದ ಹರ್ಭಜನ್, ಇದುವರೆಗೂ 24 ಪಂದ್ಯಗಳನ್ನಾಡಿದ್ದಾರೆ. 23 ವಿಕೆಟ್ ಕಬಳಿಸಿದ್ದಾರೆ.