ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಲಿಮಿಟೆಡ್ 150 ‘737 ಮ್ಯಾಕ್ಸ್’ ವಿಮಾನಗಳ ಖರೀದಿಗೆ ಬೋಯಿಂಗ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ.
50 ‘737 ಮ್ಯಾಕ್ಸ್’ ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುವುದು ಬಹುತೇಕ ಖಚಿತ ವಾಗಿದೆ. ಕ್ರಮೇಣ 150 ವಿಮಾನಗಳನ್ನು ಖರೀದಿಸಲಿದೆ ಎಂದು ವರದಿ ತಿಳಿಸಿದೆ.
ಏರ್ ಇಂಡಿಯಾ ಕೂಡ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಹೆಚ್ಚು ಇಂಧನ ದಕ್ಷತೆಯುಳ್ಳ ವಿಮಾನಗಳನ್ನು ಖರೀದಿ ಸುವ ಮೂಲಕ ದೇಶೀಯ ಮತ್ತು ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ಹೆಚ್ಚಿಸುವುದು ಏರ್ ಇಂಡಿಯಾ ಉದ್ದೇಶ ಎನ್ನಲಾಗಿದೆ.
ಸಿಂಗಾಪುರ ಏರ್ಲೈನ್ಸ್ನ ವಿಸ್ತಾರವನ್ನು ಏರ್ ಇಂಡಿಯಾ ಜತೆ ವಿಲೀನಗೊಳಿಸುವ ಟಾಟಾ ನಿರ್ಧಾರವು ಏರ್ ಇಂಡಿಯಾವನ್ನು ಜಗತ್ತಿನ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಿದೆ ಎಂದು ವರದಿ ತಿಳಿಸಿದೆ. ಈ ವಿಲೀನದಿಂದ ಏರ್ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ, ಎರಡನೇ ಅತಿದೊಡ್ಡ ಸ್ಥಳೀಯ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿದೆ. ವಿಲೀನದ ಬಳಿಕ ಏರ್ ಇಂಡಿಯಾ ಬಳಿ ಇರುವ ವಿಮಾನಗಳ ಸಂಖ್ಯೆ 218 ಆಗಿರಲಿದೆ.
ಏರ್ಬಸ್ ಮತ್ತು ಬೋಯಿಂಗ್ ಜತೆ 50 ಶತಕೋಟಿ ಡಾಲರ್ ವಿಮಾನ ಖರೀದಿ ಒಪ್ಪಂದಕ್ಕೆ ಏರ್ ಇಂಡಿಯಾ ಮುಂದಾಗಿದೆ ಎಂದು ಕೈಗಾರಿಕಾ ಮೂಲಗಳು ಜುಲೈನಲ್ಲಿ ತಿಳಿಸಿದ್ದವು. ಈ ಹಿಂದೆ 2021ರಲ್ಲಿ ಆಕಾಸ ಏರ್ಲೈನ್ 72 ‘737 ಮ್ಯಾಕ್ಸ್’ ವಿಮಾನ ಖರೀದಿಗೆ ಆರ್ಡರ್ ಮಾಡಿದ್ದು ಬಿಟ್ಟರೆ ನಂತರ ಯಾವುದೇ ಆರ್ಡರ್ ಬೋಯಿಂಗ್ಗೆ ಸಿಕ್ಕಿರಲಿಲ್ಲ.
ಟಾಟಾ ಮಾಲೀಕತ್ವ ವಹಿಸಿಕೊಂಡ ಬಳಿಕ ಏರ್ ಇಂಡಿಯಾ ತನ್ನ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.