Friday, 20th September 2024

ಆಡಳಿತ ರಂಗ -ವೈದ್ಯಕೀಯ ಆರೋಗ ಸೇವೆಯ ತಾತ್ವಿಕ ಸಂಘರ್ಷ

ಅಭಿವ್ಯಕ್ತಿ
ಡಾ.ಎಚ್.ಎಂ. ಸುದರ್ಶನ

ವೈದ್ಯರನ್ನು ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ವೈದ್ಯಕೀಯ ವೃತ್ತಿಯ ನೀಡುವ ಪ್ರಾಮುಖ್ಯತೆ ಎಷ್ಟು ಎಂಬುದು ಇದರಿಂದ ನಮಗೆ ಹೆಚ್ಚು ಅರ್ಥವಾಗುತ್ತದೆ. ಬದುಕಿನ ಪ್ರತಿ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆೆ ಒಳಗಾದಂಥ ಸಂದರ್ಭದಲ್ಲಿ ನಮಗೆ ಅತಿ ಆಪ್ತರಾಗಿ ಅವಶ್ಯವಾದ ಚಿಕಿತ್ಸೆೆ ಮತ್ತು ಮನೋಸ್ಥೈರ್ಯವನ್ನು ಒದಗಿಸುವ ಸಮಾಜದ
ಪ್ರತಿಷ್ಠಿಿತ ಹಾಗೂ ಗೌರವಾನ್ವಿತ ವರ್ಗವಾದ ವೈದ್ಯಕೀಯ ಕ್ಷೇತ್ರದ ಮುಖ್ಯಸ್ಥರಾದ ವೈದ್ಯರು ಇಂದು ಹೆಚ್ಚಾಗಿ ಸುದ್ದಿಯಾಗು ತ್ತಿರುವುದು ವ್ಯವಸ್ಥೆೆಯ ಸಮತೋಲನವನ್ನು ಅಸಮತೋಲನವಾಗಿ ಮಾಡುತ್ತಿದೆ ಎಂದರೆ ತಪ್ಪಾಗಲಾರದು.

ಪ್ರಸ್ತುತ ಹಂತದಲ್ಲಿ ಕೋವಿಡ್-19 ಎಂಬ ಪಾತಕ ರೋಗದಿಂದಾಗಿ ಮಾನವ ಜಗತ್ತು ತತ್ತರಿಸಿಹೋಗಿದೆ. ಕೋವಿಡ್ ಭೀತಿಯಿಂದಾಗಿ ಸರಕಾರದ ವ್ಯವಸ್ಥೆೆಯಲ್ಲಿ ಆಡಳಿತಾತ್ಮಕವಾಗಿ ಹಲವು ಬದಲಾವಣೆಗಳನ್ನು ಗುರುತಿಸುತ್ತಿದ್ದೇವೆ. ವೈರಸ್ ನಿಯಂತ್ರಣಕ್ಕೆೆ ಸರಕಾರ ಮತ್ತು ಆರೋಗ್ಯ ಇಲಾಖೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಲವಾರು
ಪ್ರದೇಶಗಳಲ್ಲಿ ನಿಯಂತ್ರಿತ ಹಾಗೂ ಪ್ರತಿಬಂಧಕತೆ ಕಾಣಲು ಸಾಧ್ಯವಾಗಿದೆ. ಈ ಹಂತದಲ್ಲಿ ವೈದ್ಯರು ತಮ್ಮನ್ನು ತಾವು ಸೇವಾ ಕ್ಷೇತ್ರಕ್ಕೆೆ ಎಷ್ಟು ತೊಡಗಿಸಿಕೊಂಡರೂ ಸಾಲದಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಸಮುದಾಯ, ತಾಲೂಕು, ಉಪವಿಭಾಗೀಯ, ಜಿಲ್ಲಾ ಮಟ್ಟದ ಆಸ್ಪತ್ರೆೆ ಮತ್ತು ಮೆಡಿಕಲ್ ಕಾಲೇಜುಗಳವರೆಗೆ ಕಾರ್ಯನಿರ್ವಹಿಸುವ ಎಲ್ಲರೂ ಪ್ರಯತ್ನ ಪೂರ್ವಕವಾಗಿ ತೊಡಗಿಸಿಕೊಂಡಿದ್ದು, ಸರಕಾರದ ಧ್ಯೆೆಯ ಮತ್ತು ಗುರಿಯಾದ ರೋಗವನ್ನು ಹಿಮ್ಮೆಟಿಸಲು ಶ್ರಮಿಸುತ್ತಿದ್ದಾರೆ. ಇವರೊಂದಿಗೆ ಇತರೆ ಇಲಾಖೆಗಳಾದ ಮಹಿಳಾ
ಮತ್ತು ಮಕ್ಕಳ ಕಲ್ಯಾಾಣ, ಆಹಾರ, ಕಂದಾಯ, ಪೊಲೀಸ್, ನಗರಾಭಿವೃದ್ಧಿ ಗ್ರಾಮೀಣಾಭಿವೃದ್ಧಿ ಇಲಾಖೆಗಳ ತಮ್ಮ ಹಂತದಲ್ಲಿ ನೀಡಬಹುದಾದ ಸೇವೆಯನ್ನು ನಿರಂತರವಾಗಿ ಒದಗಿಸುತ್ತಿವೆ.

ಈ ಹಂತದಲ್ಲಿ ಎಲ್ಲರನ್ನು ಒಳಗೊಂಡು ಸಂಘಟಿತ ಪ್ರಯತ್ನದಿಂದ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಕೆಲಸದ ಒತ್ತಡಗೊಳಗಾದ ವೈದ್ಯಕೀಯ ಸಮುದಾಯದ ವೈದ್ಯರು ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಮನೋಭಾವ ಹೊಂದಿಯೋ ಅಥವಾ ಇಷ್ಟು ದಿವಸ ಸ್ವತಂತ್ರವಾಗಿ ಸೇವೆಯನ್ನು ಮತ್ತು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ವರ್ಗಕ್ಕೆೆ ಈಗ ಮೇಲ್ವಿಚಾರಣೆಗೆ ಬಂದಿರುವ ಅಧಿಕಾರಿಗಳನ್ನು ನಿಭಾಯಿಸಲಾಗದೆ ಅವರು ನಮಗೆ ಅಂಕುಷ ಹಾಕಲು ವ್ಯವಸ್ಥಿತ ವ್ಯೂಹ ರಚನೆ ಮಾಡುತ್ತಿದ್ದಾರೆ ಎಂಬ ಮನೋಭಾವವೋ ಉಂಟಾಗಿ ಗೊಂದಲಕ್ಕೆೆ ಈಡಾಗುತ್ತಿರುವುದು ಗೋಚರವಾಗುತ್ತಿದೆ. ಈ ಹಂತದಲ್ಲಿ ವೈದ್ಯರು ತಮ್ಮ ವೃತ್ತಿ ಜೀವನದ ಪ್ರಮುಖ್ಯತೆ ಪರಿಗಣಿಸಿ ಆಡಳಿತವನ್ನು ಆಡಳಿತಗಾರರಿಗೆ ಬಿಟ್ಟು ಚಿಕಿತ್ಸೆೆಯಲ್ಲಿ ತೊಡಗಿಸಿ ಕೊಳ್ಳಬೇಕಾದ್ದು ಪ್ರಸ್ತುತ ಅನಿವಾರ್ಯ ಮತ್ತು ಅಗತ್ಯವಾಗಿದೆ. ಇದಕ್ಕೆೆ ಪೂರಕವಾಗಿ ಜಿಲ್ಲಾ ಮಟ್ಟದಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳು ಆರೋಗ್ಯ ವ್ಯವಸ್ಥೆೆ ಮುಖ್ಯಸ್ಥರಾದರೆ ಒಳಿತಾಗುತ್ತದೆ. ವೈದ್ಯಕೀಯ ಸಮಸ್ಯೆೆಗಳು
ಎದುರಾದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಅಥವಾ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ವೈದ್ಯರಿಂದ ಮಾಹಿತಿ
ಪಡೆದುಕೊಳ್ಳ ಬಹುದಾಗಿದೆ. ಅಲ್ಲದೆ ಆಡಳಿತದ ಅನುಭವದ ದೃಷ್ಟಿಯಿಂದ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಗೂ ಅನುಕೂಲವಾಗುತ್ತದೆ. ಆದರೆ ಪ್ರಸ್ತುತ ಹಿಂದಿನಿಂದ ಹಲವಾರು ಆಡಳಿತಾತ್ಮಕ ಹುದ್ದೆಯನ್ನು ಅಲಂಕರಿಸಿದ ವೈದ್ಯರು ಬಹುಶಃ
ಕ್ಷೇತ್ರಕಾರ್ಯದಲ್ಲಿ ಚಿಕಿತ್ಸೆೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂಬಂಥ ಧೋರಣೆಯ ಮನಸ್ಥಿತಿ ಹೊಂದಿದವರಾಗಿದ್ದು, ಆಡಳಿತಗಾರರನ್ನು ಒಪ್ಪಿಿಕೊಳ್ಳುವಂಥ ಮನಸ್ಥಿತಿ ಹೊಂದಿರುವುದಿಲ್ಲ.

ಅಲ್ಲದೇ ಸಮೂಹದಲ್ಲಿ ಮುಷ್ಕರಗಳಾದ ಸಮಯವನ್ನು ಸಾಧಿಸಿ ತಮ್ಮ ಅನಿಸಿಕೆಗಳನ್ನೆೆ ನಿಜವೆಂದು ಬಿಂಬಿಸುವ ಒಂದು ವರ್ಗ ಇಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇವರ ಬೆಂಬಲದೊಂದಿಗೆ ಸಮಸ್ಯೆೆಗಳನ್ನು ಹುಟ್ಟುಹಾಕುವುದು ನಂತರದಲ್ಲಿ ಅದನ್ನು ಪರಿಹರಿಸಲು ಮುಂದಾಳತ್ವವಹಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು, ಇಂತಹ ಹಲವಾರು
ಅಂಶವು ಸಮಸ್ಯೆೆಗಳಿಗೆ ಕಾರಣವಾಗಿದೆ. ಹಲವಾರು ವರ್ಷಗಳು ವೈದ್ಯರಾಗಿ ಸೇವೆ ಸಲ್ಲಿಸಿದ ನಂತರ ಅವರ ಸೇವಾ ಹಿರಿತನಕ್ಕೆೆ ಅನುಗುಣವಾಗಿ ಮೇಲಿನ ಹುದ್ದೆಯನ್ನು ಬಯಸುವುದು ಸಹಜವಾದರು ತಾವು ಆಯ್ದುಕೊಂಡ ಕ್ಷೇತ್ರ ಸೇವಾ ಕ್ಷೇತ್ರವಾಗಿದ್ದು ಆಡಳಿತಾತ್ಮಕವಲ್ಲದ್ದು ಎಂಬುದನ್ನು ಒಪ್ಪಿಕೊಂಡು ಅರ್ಥಮಾಡಿಕೊಳ್ಳಬೇಕಾಗಿದೆ. ಯಾರು ಇದನ್ನು ಅರ್ಥ ಮಾಡಿಕೊಳ್ಳುವು ದಿಲ್ಲವೋ ಅಂಥವರಿಂದ ಮತ್ತು ಅವರ ಹಿಂಬಾಲಕರಿಂದ ಇಂದು ಸಮಸ್ಯೆೆ ಹೆಚ್ಚಾಗಿದೆ. ಇವರಿಗೆ ಶಾಸಕಾಂಗದ ಅಭಯ ದೊರೆತರಂತು ತಮ್ಮನ್ನು ಹಿಡಿಯುವವರೆ ಇಲ್ಲ ಎಂಬ ಧೋರಣೆ ಹೊಂದಿರುತ್ತಾರೆ.

ಇದಕ್ಕೆೆ ಅನುಗುಣವಾಗಿ ಸಂಘಗಳ ಮುಖಾಂತರ ಹಿತಾಸಕ್ತಿ ಸಾಧಿಸಲು ಪ್ರಯತ್ನಿಸಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಿಡಿತ ಹೊಂದಲು ಪ್ರಯತ್ನಿಸುತ್ತಾರೆ. ಇದರಲ್ಲಿ ಯಶಸ್ವಿಯಾದಲ್ಲಿ ವೈದ್ಯಕೀಯ ಕ್ಷೇತ್ರದ ಸಂಪೂರ್ಣವಾರಸುದಾರರು ನಾವೇ ಎಂಬ ಮನಸ್ಥಿತಿ ಅವರದಾಗುತ್ತದೆ. ಕೆಲವೊಮೆ ಇಲ್ಲಿ ಅಪವಾದವೆಂಬಂತೆ ಉತ್ತಮ ವೈದ್ಯರು ಕೆಲವೆ ವ್ಯಕ್ತಿಗಳ ಕಪಿಮುಷ್ಠಿಗೆ ಸಿಕ್ಕಿ ತಮ್ಮ ಅನಿಸಿಕೆಗಳನ್ನು ಕೂಡ ವ್ಯಕ್ತಪಡಿಸದೆ ಮೌನವಾಗಿ ಎಲ್ಲವನ್ನು ಸಹಿಸಬೇಕಾಗುತ್ತದೆ. ಆ ಮಟ್ಟದಲ್ಲಿ ಋಣಾತ್ಮಕ ಅಂಶಗಳ ಬೆಳವಣಿಗೆಯಾಗಿರುತ್ತದೆ. ಕೆಲವೇ ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಯಿಂದಾಗಿ ವೈದ್ಯಕೀಯ ಕ್ಷೇತ್ರ ಇಂದು ಋಣಾತ್ಮಕ ಅಂಶ ಗಳಿಂದ ಹೆಚ್ಚು ಚರ್ಚಿತವಾಗಿರುವುದು ಖಂಡಿತವಾಗಿಯು ಸಮಾಜಕ್ಕೆೆ ಮತ್ತು ಯುವ ಮನಸುಗಳಿಗೆ ಕೆಟ್ಟ ಸಂದೇಶವನ್ನು
ರವಾನಿಸಿದಂತಾಗಿದೆ.

ನಿಷ್ಠೆೆಯಿಂದ ಮತ್ತು ಪ್ರಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುವ ವೈದ್ಯರು ಮುಂದಾಳತ್ವ ವಹಿಸದೆ ಹಿಂದೆ ಸರಿಯು ತ್ತಿರುವುದು ಅಥವಾ ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದು ವ್ಯವಸ್ಥೆೆಯ ಕುಸಿತಕ್ಕೆೆ ದಾರಿಯಾಗುತ್ತಿರುವು ದೇನೋ ಎಂಬ ಮನೋಭಾವ ಮೂಡುವಂತಾಗಿದೆ. ಇತ್ತೀಚಿನ ಹಲವಾರು ಘಟನೆಗಳು ನಮ್ಮ ಯುವ ಸಮುದಾಯವನ್ನು ಗೊಂದಲಕ್ಕೆೆ ಈಡುಮಾಡಿದ್ದು, ಸಮಾಜದಲ್ಲಿ ವೈದ್ಯಕೀಯ ವೃತ್ತಿ ಹೆಚ್ಚೋ ಆಡಳಿತಾತ್ಮಕ ಹುದ್ದೆ ಹೆಚ್ಚೋ ಎಂಬ ಗೊಂದಲಕ್ಕೆೆ ಒಳಗಾದಂತೆ ಕಾಣುತ್ತಿದೆ. ಈ ಹೆಚ್ಚುಗಾರಿಕೆಯು ಯುವ ಸಮುದಾಯಕ್ಕೆೆ ನೀಡುವ ಸಂದೇಶವಾಗಿದ್ದು ಮುಂದೆ ಅವರ ಜೀವನದ ಗುರಿಗಳನ್ನು ನಿರ್ಧರಿಸಿಕೊಳ್ಳಲು ಸಹಾಯಕವಾಗುವಂತಿರಬೇಕು, ಮುಂದಿನ ತಮ್ಮ ಜೀವನದ ಗುರಿ ವೈದ್ಯಕೀಯ ಶಿಕ್ಷಣವೋ ಅಥವಾ ಆಡಳಿತಾತ್ಮಕ ಶಿಕ್ಷಣವೋ ಎಂಬ ಗೊಂದಲಕೊಳ್ಳಗಾಗದೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಅನುವಾಗುವಂತೆ ಉತ್ತರದಾಯಿತ್ವದಿಂದ ವರ್ತಿಸುವುದು ಇಲ್ಲಿ ಬಹಳ ಮುಖ್ಯವಾಗಿದೆ.

ಇತ್ತೀಚಿನ ಮೈಸೂರಿನ ಈ ವರ್ಗದ ಘಟನೆಯನ್ನು ಗಮನಿಸುವುದಾದರೆ ಅವರವರ ಹಂತದಲ್ಲಿ ಎಲ್ಲರೂ ಸರಿ ಎಂದು ಮೇಲ್ನೋಟಕ್ಕೆೆ ಅನಿಸಿದರೂ ಸಮಾಜಕ್ಕೆೆ ಉತ್ತರದಾಯಿತ್ವವಾದ ಸರಕಾರವು ಜನರಿಗೋಸ್ಕರವೇ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡರು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದರೂ ಅಧಿಕಾರಿಗಳಲ್ಲಿನ ಸಮನ್ವಯತೆ ಕೊರತೆ ಅಥವಾ ಅತಿಯಾದ
ಕೆಲಸದ ಒತ್ತಡ/ಕೆಲಸದ ಶೈಲಿಗಳಲ್ಲಿ ವ್ಯತ್ಯಾಸವಾಗಿದ್ದು, ನೀಡಿದ ನಿರ್ದೇಶನಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗದೆ ಹಲವಾರು ಕಾರಣಗಳಿಂದ ವೈಫಲ್ಯತೆಯನ್ನು ಹೊಂದಿದಾಗ ಕಾರ್ಯ ಒತ್ತಡದ ಜತೆಗೆ ಮಾಡಬಹುದಾಗಿದ್ದ ಹಲವಾರು ಅಂಶಗಳು ಗೋಚರವಾಗುತ್ತದೆ.

ಕ್ಷೇತ್ರ ಕಾರ್ಯದಲ್ಲಿ ಅಧಿಕಾರಿಗಳು ತಮ್ಮ ಮೇಲಿನ ಅಧಿಕಾರಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ಮೂಲಗಳಿಂದ ಒತ್ತಡಕ್ಕೆೆ ಒಳಗಾಗಿರುತ್ತಾರೆ. ಈ ಹಂತದಲ್ಲಿ ವೈಯಕ್ತಿಕ ಮತ್ತು ವೃತ್ತಿ ಜೀವನದ ಒತ್ತಡದಿಂದಾಗಿ ತಾವು ನಿರೀಕ್ಷಿಸಿದ ಕೆಲಸಗಳು ಅಂದುಕೊಂಡಂತೆ ಆಗದಿದ್ದಲ್ಲಿ ಈ ಬಗ್ಗೆೆ ಬೇಸರ ಹೊಂದಿರುತ್ತಾರೆ. ಈ ಹಂತದಲ್ಲಿ ಮಾನಸಿಕವಾಗಿ
ಕುಗ್ಗಿಿಹೋಗಿದ್ದು ಅದೇ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಜೋರು ಧ್ವನಿಯಲ್ಲಿ ಮಾತನಾಡಿದಲ್ಲಿ ಮಾನಸಿಕವಾಗಿ ಘಾಸಿಗೊಳಗಾಗುವ ಸಾಧ್ಯತೆಯಿರುತ್ತದೆ. ಈ ಹಂತದಲ್ಲಿ ಕೆಳಹಂತದ ಅಧಿಕಾರಿಗಳು ಇದಕ್ಕೆೆ ತಕ್ಷಣ ಪ್ರತಿಕ್ರಿಯಿಸದೆ ಸ್ವಯಂ ನಿಗ್ರಹ ಮಾಡಿಕೊಂಡು ಪರಿಸ್ಥಿತಿಯನ್ನು ಆದಷ್ಟು ತಿಳಿಗೊಳಿಸಿಕೊಂಡು ನಿಬಾಯಿಸಲು ಸಾಧ್ಯವಾಗಬಹುದಾದ
ಮನಸ್ಥಿತಿಯನ್ನು ಕಂಡುಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಇಲ್ಲಿ ತಪ್ಪು ಒಪ್ಪುಗಳ ನಿಕ್ಷರ್ಷ ನಂತರದಲ್ಲಿದ್ದು, ಪ್ರಸ್ತುತ ಸಂದರ್ಭದ ಯಶಸ್ವಿಿ ನಿರ್ವಹಣೆ ಪರಿಣಾಮಕಾರಿ ಫಲಿತಾಂಶ ನೀಡುವಲ್ಲಿ ಸಹಾಯಕವಾಗುತ್ತದೆ.

ಶಾಸಕಾಂಗ ಮತ್ತು ನ್ಯಾಯಾಂಗವು ಕೋವಿಡ್‌ನಂಥ ಸಂದರ್ಭದಲ್ಲಿ ಆಡಳಿತ ನಡೆಸುವ ಅಧಿಕಾರಿಗಳನ್ನು ಅತಿ ನಿಕಟವಾಗಿ ಗಮನಿಸುತ್ತಿರುತ್ತದೆ. ಅಲ್ಲದೇ ಕಾಲ ಕಾಲಕ್ಕೆೆ ತಕ್ಕಂತೆ ಆದೇಶ ನೀಡುತ್ತಿರುತ್ತದೆ. ಅದರಂತೆ ಕಾರ್ಯ ನಿರ್ವಹಿಸಬೇಕಾದ್ದು ಎಲ್ಲಾ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಈ ಹಂತದಲ್ಲಿ ಸಮಾಜ ಮುಖಿಗಳಾದ ಮತ್ತು ಇತರರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡುವ ವೈದ್ಯರು ತಾಳ್ಮೆೆ ಮತ್ತು ಸಂಯಮದಿಂದ ವಾಸ್ತವ ಅಂಶಗಳನ್ನು ಅಧಿಕಾರಿಗಳ ಮುಂದೆ ಪ್ರಸ್ತುತ ಪಡಿಸಿದಲ್ಲಿ ಪರಿಹಾರ ಸಾಧ್ಯವಿರುತ್ತದೆ. ಒಂದು ವೇಳೆ ಪರಿಹಾರ ಸಿಗದ್ದಿದಲ್ಲಿ ಮುಂದಿನ ಹಂತ ಇದ್ದೇ ಇರುತ್ತದೆ.

ಅಲ್ಲದೇ ಯಾರೂ ಅತಿತರಲ್ಲ ಎಂಬುದನ್ನು ಅರ್ಥಮಾಡಿಕೊಂಡಲ್ಲಿ ಎಲ್ಲವೂ ಸುಖಾಂತ್ಯವಾಗುತ್ತದೆ. ಪೈಪೋಟಿಗೆ ಬಿದ್ದ ಸಂದರ್ಭದಲ್ಲಿ ಹೆಚ್ಚು ಘಾಸಿಯಾಗುತ್ತದೆ. ಇಲ್ಲಿ ಯಾವ ಹಂತದ ಅಧಿಕಾರಿಗಳು ಕೂಡ ಹೆಚ್ಚು ಗೊಂದಲಕ್ಕೆೆ ಒಳಗಾಗದೆ ಪರಿಸ್ಥಿತಿಯನ್ನು ತಹಬದಿಗೆ ತರುವ ಮನಸ್ಥಿತಿ ಹೊಂದಿರಬೇಕಾದ್ದು ಅತಿ ಅವಶ್ಯಕ. ಎಲ್ಲಾ ಅಧಿಕಾರಿಗಳು ಬದ್ಧತೆಯಿಂದ ಸಮಾಜದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರವರ ಇಲಾಖೆಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿ ಪರಿಹಾರ ಕಂಡುಕೊಂಡು ಕಾರ್ಯನಿರ್ವಹಿದಲ್ಲಿ ಫಲಿತಾಂಶ ಉತ್ತಮವಾಗಿರುತ್ತದೆ. ಯಾವುದೇ ಅಧಿಕಾರಿಗಳಿಗೆ ಆಚರಿಸಿಕೊಂಡು ಬಂದ ಮೌಲ್ಯಗಳು ಮತ್ತು ನೈತಿಕತೆ ನಮ್ಮನ್ನು ಮಾರ್ಗದರ್ಶನ ಮಾಡುವಂತಿರುತ್ತದೆ. ಇಲ್ಲಿನ ಸರಿ ತಪ್ಪುಗಳ ಪರಿಸ್ಥಿತಿಗಳಿಗೆ ನಾವೇ ಹೊಣೆಗಾರರಾಗಿರುತ್ತೇವೆ.