ನವದೆಹಲಿ: ಸಹ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮದ್ಯದ ಅಮಲಿನಲ್ಲಿ ಮೂತ್ರ ಮಾಡಿದ ವ್ಯಕ್ತಿಗೆ ವಿಮಾನ ಪ್ರಯಾಣ ನಿಷೇಧ ಹೇರಿದ್ದಾಗಿ ಏರ್ ಇಂಡಿಯಾ ತಿಳಿಸಿದೆ.
2022ರ ನವೆಂಬರ್ 26 ರಂದು ಈ ಘಟನೆ ನಡೆದಿದ್ದು, ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಪ್ಯಾಂಟ್‌ನ ಜಿಪ್ ತೆಗೆದು 70 ವರ್ಷದ ವಯಸ್ಸಿನ ಮಹಿಳೆ ಮೇಲೆ ಮೂತ್ರ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ವಿಮಾ ನವು ನ್ಯೂಯಾರ್ಕ್‌ನಿಂದ ದೆಹಲಿಗೆ ಸಂಚಾರ ಮಾಡುತ್ತಿತ್ತು.
ಮಧ್ಯಾಹ್ನದ ಭೋಜನದ ಬಳಿಕ ವಿಮಾನದ ಲೈಟ್‌ಗಳನ್ನು ಡಿಮ್ ಮಾಡಲಾಗಿತ್ತು. ಈ ವೇಳೆ ವ್ಯಕ್ತಿ ಮಹಿಳೆಯ ಮೇಲೆ ಮೂತ್ರ ಮಾಡಿದ್ದಾನೆ. ಇನ್ನೊಬ್ಬ ಪ್ರಯಾಣಿಕ ಹೇಳಿದ ಬಳಿಕ ಅಲ್ಲಿಂದ ಈ ವ್ಯಕ್ತಿ ತೆರಳಿದ್ದಾನೆ.
ಘಟನೆಯ ಬಗ್ಗೆ ಮಹಿಳೆ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದು, ತನ್ನ ಬಟ್ಟೆ, ಬ್ಯಾಗು, ಶೂ ಮೂತ್ರದಿಂದ ಒದ್ದೆಯಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ವಿಮಾನ ಸಿಬ್ಬಂದಿ ಬೇರೆ ಬಟ್ಟೆ ಹಾಗೂ ಚಪ್ಪಲಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಹಿಳೆ ಟಾಟಾ ಗ್ರೂಪ್‌ನ ಮುಖ್ಯಸ್ಥರಿಗೆ ಇ-ಮೇಲ್ ಮೂಲಕ ದೂರು ನೀಡಿದ ಬಳಿಕ ಈ ಕ್ರಮ ತೆಗೆದುಕೊಳ್ಳ ಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ದೂರು ಕೂಡ ದಾಖಲಾಗಿದೆ.
ಪ್ರಯಾಣದ ವೇಳೆ ಬ್ಯುಸಿನೆಸ್ ಕ್ಲಾಸಿನ ಬೇರೆ ಸೀಟುಗಳು ಖಾಲಿ ಇದ್ದರೂ ಅದರಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ. ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆದ ಬಳಿಕವೂ ಆ ವ್ಯಕ್ತಿಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಪ್ರಕರಣ ಸಂಬಂಧ ಏರ್ ಇಂಡಿಯಾವು ಆಂತರಿಕ ಸಮಿತಿಯೊಂದನ್ನು ರಚಿಸಿ ಆರೋಪಿಯನ್ನು ‘ನೋ ಫ್ಲೈ ಲಿಸ್ಟ್’ಗೆ ಸೇರಿಸಿದೆ.
Read E-Paper click here