ದೆಹಲಿ ಪೊಲೀಸರು ಪ್ರಕರಣ ದಾಖಲು ಮಾಡುತ್ತಿದ್ದಂತೆ ಶಂಕರ್ ಮಿಶ್ರಾ ತನ್ನ ಮೊಬೈಲ್ನ್ನೆಲ್ಲ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಸಂಜಯ್ನಗರದಲ್ಲಿರುವ ಒಂದು ಗೆಸ್ಟ್ಹೌಸ್ನಲ್ಲಿ ಒಬ್ಬನೇ ತಂಗಿದ್ದ. ಮಧ್ಯಾಹ್ನದ ಹೊತ್ತಿಗೆ ಶಂಕರ್ ಮಿಶ್ರಾನನ್ನು ಪೊಲೀಸರು ದೆಹಲಿ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ನವೆಂಬರ್ 26ರಂದು ಈ ವ್ಯಕ್ತಿ ಕುಡಿದು ಅಮಲೇರಿದ ಸ್ಥಿತಿಯಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ. ಆದರೆ ಇತ್ತೀಚೆಗೆ ಮಹಿಳೆ ಏರ್ ಇಂಡಿಯಾ ಅಧ್ಯಕ್ಷನಿಗೆ ಪತ್ರದ ಮೂಲಕ ದೂರು ಸಲ್ಲಿಸಿದಾಗಲೇ ವಿಷಯ ಬೆಳಕಿಗೆ ಬಂದಿತ್ತು.
ಘಟನೆ ನಡೆದ ಏರ್ ಇಂಡಿಯಾ ವಿಮಾನದ ಪೈಲೆಟ್, ಸಹ ಪೈಲೆಟ್ಗೂ ಪೊಲೀಸರು ಸಮನ್ಸ್ ನೀಡಿ, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಅವರು ಪೊಲೀಸರ ಎದುರು ಬಂದಿರಲಿಲ್ಲ.
ಹೀಗಾಗಿ ಇಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದೂ ಹೇಳಲಾಗಿದೆ.