Thursday, 19th September 2024

ಸಂತ್ರಸ್ತರ ನೆರವಿಗಾಗಿ ಟರ್ಕಿ – ಅರ್ಮೇನಿಯಾ ಗಡಿ ಗೇಟ್‌ ಓಪನ್‌

ಅರ್ಮೇನಿಯಾ: ಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ವಿಭೂಕಂಪಗಳ ಸಂತ್ರಸ್ತರ ನೆರವಿಗಾಗಿ 35 ವರ್ಷಗಳಲ್ಲಿ ಮೊದಲ ಬಾರಿಗೆ ಟರ್ಕಿ ಮತ್ತು ಅರ್ಮೇ ನಿಯಾ ನಡುವಿನ ಗಡಿ ಗೇಟ್‌ ಅನ್ನು ತೆರೆಯಲಾಗಿದೆ ಎಂದು ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.

ಐದು ಟ್ರಕ್‌ಗಳ ನೆರವಿನೊಂದಿಗೆ ಅರ್ಮೇನಿಯನ್ ನಿಯೋಗ ಪೂರ್ವ ಪ್ರಾಂತ್ಯದ ಇಗ್ದಿರ್‌ನಲ್ಲಿರುವ ಅಲಿಕನ್ ಬಾರ್ಡರ್ ಗೇಟ್ ಮೂಲಕ ಟರ್ಕಿಯನ್ನು ಪ್ರವೇಶಿಸಿದೆ.

ಅರ್ಮೇನಿಯಾದ ಟರ್ಕಿಯ ವಿಶೇಷ ರಾಯಭಾರಿ ಸರ್ದಾರ್ ಕಿಲಿಕ್ ಅವರು ಟ್ವಿಟ್ಟರ್‌ ನಲ್ಲಿ ಅರ್ಮೇನಿಯಾ ನಿಯೋಗವು ಐದು ಟ್ರಕ್‌ಗಳೊಂದಿಗೆ 100 ಟನ್ ಆಹಾರ, ಔಷಧ ಮತ್ತು ಕುಡಿಯುವ ನೀರನ್ನು ಅಲಿಕನ್ ಗಡಿ ಗೇಟ್ ಮೂಲಕ ಹಾದುಹೋಗುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.