ಮುಂಬೈ: ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರ ಅವರ ಆದಿತ್ಯ ಶನಿವಾರ ನಿಧನರಾಗಿದ್ದಾರೆ. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು.
ಆದಿತ್ಯ ಕೆಲ ತಿಂಗಳಿನಿಂದ ಕಿಡ್ನಿಗೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅತಿ ಕಿರಿಯ ವಯಸ್ಸಿನ ಸಂಗೀತ ನಿರ್ದೇಶಕ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಆದಿತ್ಯ ಪೌಡ್ವಾಲ್ ಹೆಸರು ದಾಖಲಾಗಿತ್ತು.
ಚಿತ್ರ ನಿರ್ಮಾಪಕ ಹಾಗೂ ಸಂಗೀತ ಕಾರ್ಯಕ್ರಮಗಳ ಆಯೋಜಕರಾಗಿದ್ದ ಆದಿತ್ಯ, ತಾಯಿಯಂತೆಯೇ ಭಜನೆ ಹಾಗೂ ಭಕ್ತಿಗೀತೆ ಗಳನ್ನು ಹಾಡುತ್ತಿದ್ದರು. ಸಂಗೀತ ಸಂಯೋಜಕರಾಗಿಯೂ ಗುರುತಿಸಿಕೊಂಡಿದ್ದರು. ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಜೀವನಾಧಾರಿತ ಚಿತ್ರ ನಿರ್ಮಿಸಿದ್ದರು.