Saturday, 23rd November 2024

ಸಮಾಜ ಯಾವಾಗಲೂ ಕೃತಜ್ಞತಾ ಪೂರ್ವಕವಾಗಿರಬೇಕು: ಸಿ.ಟಿ.ರವಿ

ಚಿಕ್ಕಮಗಳೂರು: ಸಮಾಜ ಯಾವಾಗಲೂ ಕೃತಜ್ಞತಾ ಪೂರ್ವಕವಾಗಿರಬೇಕು. ಅದನ್ನು ಮರೆತು ಕೃತಜ್ನ ಆದರೆ ಆಗ ಸಮಾಜದ ವ್ಯವಸ್ಥೆ ಅಧೋಗತಿಗೆ ಹೋಗಿದೆ ಎಂದರ್ಥ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ತಾಲೂಕಿನ ಹರಿಹರದಹಳ್ಳಿ ಗ್ರಾಮದ ವಿದ್ಯಾಕಾಫಿ (ವಿದ್ಯಾ ಹರ್ಬ್ಸ್ ಪ್ರೆÊವೇಟ್ ಲಿಮಿಟೆಡ್) ಸಂಸ್ಥೆಯು ನಗರದ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧.೫ ಕೋಟಿ ರುಪಾಯಿ ವೆಚ್ಚದಲ್ಲಿ ಉಚಿತವಾಗಿ ನಿರ್ಮಿಸಿ ಕೊಟ್ಟಿರುವ ಸುಸಜ್ಜಿತ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತ ನಾಡಿದರು.

ದುಡ್ಡಿದ್ದವರು ಬಹಳ ಜನರಿದ್ದಾರೆ. ಆದರೆ ಕೊಡುವ ಮನಸ್ಥಿತಿ ಇರುವವರು ಬಹಳ ಕಡಿಮೆ. ದಾನ ಕೊಡುವ ಬುದ್ಧಿ ಉಳ್ಳವರಿಗೂ ಬರಬೇಕು. ದಾನದ ಪ್ರೇರಣೆ ಉಳಿದವರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಶಂಕುಸ್ಥಾಪನೆ ನೆರವೇರಿಸಿ ೯ ತಿಂಗಳು ಪೂರ್ಣಗೊಳ್ಳುವ ಮೊದಲೇ ಕಟ್ಟಡ ಉದ್ಘಾಟನೆ ಆಗುತ್ತಿದೆ. ವಾಷಿಂಗ್ ಮಿಷನ್‌ನಿಂದ ಹಿಡಿದು ಎಲ್ಲಾ ರೀತಿಯ ವೈದ್ಯಕೀಯ ಸಲಕರಣೆಗಳೆಲ್ಲವನ್ನೂ ವಿದ್ಯಾಹರ್ಬ್ಸ್ ಸಂಸ್ಥೆ ಪೂರೈಸಿದೆ. ಅಲ್ಲದೆ ಹಳೇ ಕಟ್ಟಡವನ್ನೂ ಅಭಿವೃದ್ಧಿ ಪಡಿಸಿ ಡಯಾಲಿಸೀಸ್ ಕೇಂದ್ರ ಬೇಕಾದರೆ ನಿರ್ಮಾಣ ಮಾಡಿ ಕೊಡು ತ್ತೇವೆ ಎಂದು ಹೇಳಿದ್ದಾರೆ ಎಂದರು.

ದೇವಸ್ಥಾನಕ್ಕೆ ಒಂದು ಟ್ಯೂಬ್‌ಲೈಟ್ ಕೊಟ್ಟರೆ ಬೆಳಕೇ ಕಾಣದಂತೆ ಅಷ್ಟು ದೊಡ್ಡದಾಗಿ ಹೆಸರು ಬರೆಸಿಕೊಳ್ಳು ವವರನ್ನೂ ನಾವೂ ನೋಡಿದ್ದೇವೆ. ಆದರೆ ಇಲ್ಲಿ ಒಂದೂವರೆ ಕೋಟಿ ಕೊಟ್ಟು ಕಟ್ಟಡ ಕಟ್ಟಿಕೊಟ್ಟರೂ ನಾವೇನೂ ಕೊಟ್ಟಿಲ್ಲ ಎನ್ನುವ ಹಾಗೆ ನಮ್ರತೆಯ ಭಾವದಿಂದ, ಹಾಗೂ ಸಂಕೋಚದಿAದ ಅವರ ಸಹೋದರರು ಇಲ್ಲಿ ಕುಳಿತಿದ್ದಾರೆ. ಈ ರೀತಿಯ ಮನಸ್ಥಿತಿ ಬಹಳ ಕಡಿಮೆ ಜನರಿಗೆ ಇರುತ್ತದೆ ಎಂದರು.

ಇದಲ್ಲದೆ ಎಂಆರ್‌ಪಿಎಲ್‌ನಿ0ದ ಮಲ್ಲೇಗೌಡ ಆಸ್ಪತ್ರೆಯಲ್ಲಿ ಲ್ಯಾಬ್ ನಿರ್ಮಾಣ ಮಾಡಲು ೫೦ ಲಕ್ಷ ರೂ.ಅನುದಾನ ಕೊಡಿಸಿದ್ದೇವೆ. ಸುಸಜ್ಜಿತ ಲ್ಯಾಬ್ ನಿರ್ಮಾಣವಾಗಿದೆ. ಬೇಲೂರು ರಸ್ತೆ ಪದವೀ ಪೂರ್ವ ಕಾಲೇಜಿಗೆ ೭೫ ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ಮತ್ತು ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೆ ಅನುದಾನ ಕೊಡಿಸಿದ್ದೇವೆ ಎಂದರು.

ಬಿಬಿಸಿಎಲ್ ನಿಂದ ೩೨ ಲಕ್ಷ ವೆಚ್ಚದಲ್ಲಿ ೧೪ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳ ಲಾಗಿದೆ. ಇದರೊಂದಿಗೆ ಲೈಫ್ ಲೈನ್ ಸಂಸ್ಥೆ ಯವರು ಮತ್ತು ದಾನಿ ರೊನಾಲ್ಡ್ ಕುಲಾಸೋ ಅವರು ತಲಾ ೩೦ ಲಕ್ಷ ರೂ. ವೆಚ್ಚದಲ್ಲಿ ಮೆಡಿಕಲ್ ಕಾಲೇಜಿಗೆ ಒಂದೊ0ದು ಬಸ್ ಕೊಡುಗೆಯಾಗಿ ನೀಡಿದ್ದಾರೆ. ಇವೆಲ್ಲಾ ಸಣ್ಣ ಪ್ರಯತ್ನದಿಂದಾಗಿದೆ ಎಂದರು.

ವಿದ್ಯಾ ಹರ್ಬ್ಸ್ ಪ್ರೆöÊವೇಟ್ ಲಿ.ನ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪ ನಿರ್ದೇಶಕ ಕೆ.ಶ್ಯಾಂಪ್ರಸಾದ್, ಹಾಗೂ ಸಂಸ್ಥೆಯ ಶಿವಶಂಕರ್ ಶರ್ಮ, ವೆಂಕಟೇಶ್, ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಸಿ.ಆನಂದ್, ನಗರಸಭೆ ಸದಸ್ಯೆ ವಿದ್ಯಾ ಬಸವರಾಜ್, ನಗರಸಭೆ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್, ಡಾ.ಸಲ್ಡಾನ ಇತರರು ಇದ್ದರು.