Thursday, 19th September 2024

ಅಣ್ಣ ರಾಜ್ಯದ ಸಿಎಂ ಆಗಿದ್ದರೆ ಇನ್ನಷ್ಟು ಖುಷಿ ಆಗುತ್ತಿತ್ತು: ಡಿಕೆಶಿ ಸಹೋದರಿ

ಬೆಂಗಳೂರು : ಅಣ್ಣ ಡಿ.ಕೆ.ಶಿವಕುಮಾರ್ ರಾಜ್ಯದ ಸಿಎಂ ಆಗಿದ್ದರೆ ಇನ್ನಷ್ಟು ಖುಷಿ ಆಗುತ್ತಿತ್ತು ಎಂದು ಡಿಕೆಶಿ ಸಹೋದರಿ ಮಂಜುಳಾ ಹೇಳಿದ್ದಾರೆ.

ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಇದು ಸಂತೋಷ ತಂದಿದೆ. ಅಣ್ಣ ಡಿಕೆ ಶಿವಕುಮಾರ್ ರಾಜ್ಯದ ಸಿಎಂ ಆಗಿದ್ದರೆ ಇನ್ನಷ್ಟು ಖುಷಿ ಆಗುತ್ತಿತ್ತು ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.

ಸಣ್ಣ ವಯಸ್ಸಿನಿಂದಲೂ ಡಿಕೆಶಿ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರು ತಮ್ಮ ಕುಟುಂಬಕ್ಕೆ ಹಾಗೂ ಅವರ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಕೊಟ್ಟಿರಲಿಲ್ಲ, ರಾಜಕೀಯಕ್ಕಾಗಿ ಹಗಲಿರುಳು ಶ್ರಮ ವಹಿಸಿದ್ದಾರೆ. ಅವರ ಛಲವೇ ಅವರ ಸಾಧನೆಗೆ ಸಹಕಾರಿಯಾಯಿತು. ಅವರು ಜೈಲಿಗೆ ಹೋದ ಘಟನೆಯನ್ನು ಮರೆಯಲು ಆಗಲ್ಲ ಮಂಜುಳಾ ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಸರ್ಕಾರ ರಚನೆಯ ದಾಪುಗಾಲು ಇಟ್ಟಿದ್ದ ಕಾಂಗ್ರೆಸ್ ಪಕ್ಷದ ಸರ್ಕಾರ ಶನಿವಾರ ರಚನೆಯಾಗಲಿದೆ. ಮುಖ್ಯ ಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹೈಕಮಾಂಡ್ 30-30 ತಿಂಗಳು ಅಧಿಕಾರ ಹಂಚಿಕೆ ಸೂತ್ರದ ಮೂಲಕ ಸಿದ್ಧರಾಮಯ್ಯ ಅವರನ್ನು ಸಿಎಂ, ಡಿಕೆ ಶಿವಕುಮಾರ್ ಅವರನ್ನು ಡಿಸಿಎಂ ಆಗಿ ಆಯ್ಕೆ ಮಾಡಲಾಗಿದೆ.